9 ಕಂಡನೆ ಮಾಡ್‌ವ ಸೇವೆ ಮಹಿಮೆ ತಪ್ಪದಾಯಿತ್ಂಜತೇಂಗಿ, ನೀತಿನ ತಪ್ಪ ಸೇವೆ ಇಂಞು ದುಂಬ ಮಹಿಮೆ ತಪ್ಪದಾಯಿತ್‌ಪ್ಪ ಅಲ್ಲ.
ಅದಲ್ಲತೆ, ಅಂವೊಂಗ್ ಸುನ್ನತಿ ಆಪಕ್ ಮಿಂಞ, ನಂಬಿಕೇರ ಮೂಲಕ ಅಂವೊಂಗ್ ಕ್‍ಟ್ಟ್‌ನ ನೀತಿಕ್ ಮುದ್ರೆಯಾಯಿತ್ ಸುನ್ನತಿ ಎಣ್ಣುವ ಗುರ್‍ತ್‍ನ ಅಂವೊಂಗ್ ಕೊಡ್‍ತತ್. ಆನಗುಂಡ್, ಸುನ್ನತಿ ಮಾಡತಯಿಂಗಳಾಯಿತ್ ನಂಬುವ ಎಲ್ಲಾರ್‌ಕು, ನೀತಿರ ಲೆಕ್ಕ ಕ್‍ಟ್ಟಿತ್ ಅಯಿಂಗಕ್ ಸಹ ಅಂವೊ ಅಪ್ಪನಾಯಿತ್ ಇಪ್ಪನೆಕೆ ಆಚಿ.
ಅನ್ನನೆ, ದೇವ ನಿಂಗಳ ಕ್ರಿಸ್ತ ಯೇಸುರ ಕೂಡೆ ಐಕ್ಯತ್‍ಲ್ ಕೂಟಿತುಂಡ್. ಆನಗುಂಡ್ ದೇವ, ಕ್ರಿಸ್ತನ ನಂಗಕ್ ಜ್ಞಾನವಾಯಿತ್ ಮಾಡಿತುಂಡ್. ಅಂವೊಂಡ ಮೂಲಕ ನಂಗಳ, ದೇವಡ ಮಿಂಞತ್‍ಲ್ ನೀತಿವಂತಯಿಂಗಳಾಯಿತು, ಪವಿತ್ರ ಜನಳಾಯಿತು ಪಿಂಞ ನಂಗಕ್ ವಿಮೋಚನ ಕ್‍ಟ್ಟುವನೆಕೆ ಮಾಡಿತುಂಡ್.
ಸೂರ್ಯಂಡ ಮಹಿಮೆ ಬೋರೆ ತರ, ಚಂದ್ರಂಡ ಮಹಿಮೆ ಬೋರೆ ತರ, ನಕ್ಷತ್ರತ್‍ರ ಮಹಿಮೆ ಬೋರೆ ತರ, ನಕ್ಷತ್ರತ್‌ಲ್ ಕೂಡೆ ಬೋರೆ ಬೋರೆ ಚಾಯಿ ಉಳ್ಳ ನಕ್ಷತ್ರ ಉಂಡ್.
ಕಾಂಗತೆ ಆಯಿಪೋಪ ಮಹಿಮೇರ ಸೇವೆ ಅಚ್ಚಕ್ ಮಹಿಮೆ ಉಳ್ಳದಾಯಿತ್ಂಜತೇಂಗಿ, ಪವಿತ್ರಾತ್ಮತ್‍ರ ಸೇವ ಇಂಞು ಎಚ್ಚಕ್ ಮಹಿಮೆ ದುಂಬ್‍ನದಾಯಿತ್‌ಪ್ಪ?
ಎನ್ನಂಗೆಣ್ಣ್‌ಚೇಂಗಿ, ನಂಗ ಅಂವೊಂಡಲ್ಲಿ ದೇವಡ ನೀತಿನ ಪಡೆಯುವಕಾಯಿತ್, ಪಾಪ ಗೊತ್ತಿಲ್ಲತ ಅಂವೊನ ನಂಗಡ ಪಾಪತ್‍ರ ಬಲಿಯಾಯಿತ್ ಮಾಡ್‍ಚಿ.
ಆಚೇಂಗಿ, ನ್ಯಾಯಪ್ರಮಾಣತ್‍ರ ಮೂಲಕ ದೇವಡ ಮಿಂಞತ್‍ಲ್ ನೀತಿವಂತಂವೊಂಡನೆಕೆ ನಿಪ್ಪಕ್ ಕಯ್ಯೂಂದ್ ನಂಬುವಯಿಂಗೆಲ್ಲ ಶಾಪತ್‍ಲ್ ಉಂಡ್; ಎನ್ನಂಗೆಣ್ಣ್‌ಚೇಂಗಿ, ನ್ಯಾಯಪ್ರಮಾಣಕ್ ತಗ್ಗಿತ್ ನಡ್‍ಕತೆ, ಅದ್ ಎಣ್ಣ್‌ನನೆಕೆ ಮಾಡತಯಿಂಗೆಲ್ಲಾ ಶಾಪತ್‍ಲ್ ಉಳ್ಳಯಿಂಗಾಂದ್ ಒಳ್‍ದಿತುಂಡಲ್ಲ.
ಕ್ರಿಸ್ತನ ನಾಕ್ ಸ್ವಂತವಾಯಿತ್ ಮಾಡ್‌ವಕ್, ನ್ಯಾಯಪ್ರಮಾಣತ್‍ರ ಪ್ರಕಾರ ನಾಕ್ ಕ್‍ಟ್ಟುವ ನೀತಿನ ಎಡ್‍ಕತೆ, ಕ್ರಿಸ್ತಂಡ ಮೇಲೆ ಬೆಪ್ಪ ನಂಬಿಕೇರಗುಂಡ್ ದೇವ ನಾಕ್ ತಪ್ಪ ನೀತಿನ ಎಡ್‍ತೊವಿ.
ನಂಗಡ ದೇವನು ರಕ್ಷಕನು ಆನ ಯೇಸು ಕ್ರಿಸ್ತಂಡ ನೀತಿರಗುಂಡ್ ನಂಗಡನೆಕೆ ಬೆಲೆಯುಳ್ಳ ನಂಬಿಕೆ ಕ್‍ಟ್ಟ್‌ನ ನಿಂಗಕ್, ಯೇಸು ಕ್ರಿಸ್ತಂಡ ಅಪೊಸ್ತಲನು ಸೇವಕನು ಆಯಿತುಳ್ಳ ಸೀಮೋನ ಪೇತ್ರ ಒಳ್‍ದ್‍ವ ಕಾಗದ ಇದ್.