6 ಅನ್ನನೆ ದುಃಖ ಪಡ್‍ತ್‍ನಂವೊಂಗ್, ನಿಂಗಡಡೆಲ್ ಉಳ್ಳ ದುಂಬ ಜನತ್‍ರಗುಂಡ್ ಕ್‍ಟ್ಟ್‌ನ ಈ ಶಿಕ್ಷೆಯೇ ಮದಿ ಆಚಿ.
ಆನಗುಂಡ್ ನಿಂಗಡ ಕೂಡೆ ಇಲ್ಲತಿಪ್ಪಕಲೇ ಇದ್‍ನೆಲ್ಲಾ ಒಳ್‍ದಿಯೆ; ನಿಂಗಳ ಪೊಳಿಪಕಾಯಿತ್ ಅಲ್ಲ, ಕೆಟ್ಟ್‌ವಕಾಯಿತೇ ಒಡೆಯ ನಾಕ್ ತಂದಿತುಳ್ಳ ಅದಿಕಾರತ್‍ರನೆಕೆ, ನಾನ್ ನಿಂಗಡ ಪಕ್ಕ ಬಪ್ಪಕ, ಕಠಿಣವಾಯಿತ್ ಇಪ್ಪದ್ ಬೋಂಡಾಂದ್ ಕುಶಿ ಪಡುವಿ.
ದೇವಡ ಚಿತ್ತತ್‍ರನೆಕೆ ಬಂದ ಈ ದುಃಖ ನಿಂಗಡಲ್ಲಿ ಎಚ್ಚಕ್ ಜಾಗ್ರತೆನ, ಎಚ್ಚಕ್ ನಿಂಗಳ ಗೊತ್ತಿಲ್ಲತಯಿಂಗಾಂದ್ ಕಾಂಬ್‍ಚಿಡುವಕ್, ಎಚ್ಚಕ್ ಪಗೇನ, ಎಚ್ಚಕ್ ಪೋಡಿನ, ಎಚ್ಚಕ್ ದುಂಬ ಆಸೇನ, ಎಚ್ಚಕ್ ಬಕ್ತಿನ, ಎಚ್ಚಕ್ ಕಂಡಿತತ್‍ನ ಉಂಟ್ ಮಾಡ್‍ಚಿ? ಈ ಎಲ್ಲಾ ವಿಷಯತ್‍ಲ್ ನಿಂಗ ನಿಂಗಳ ಶುದ್ದವಾನಯಿಂಗಾಂದ್ ಕಾಂಬ್‍ಚಿಟ್ಟಿತುಳ್ಳಿರ.
ಅನ್ನನೆ ಅಂವೊ ಪಾಪ ಮಾಡಿಯಂಡೇ ಇಂಜತೇಂಗಿ, ಅಲ್ಲಿ ಉಳ್ಳಯಿಂಗಕ್ ಪಾಪ ಮಾಡ್‌ವಕ್ ಪೋಡಿ ಬಪ್ಪನೆಕೆ ಎಲ್ಲಾಡ ಮಿಂಞತ್ ಅಂವೊನ ಎಚ್ಚರ ಮಾಡ್.