16 ನಾನ್ ನಿಂಗಕ್ ಬಾರವಾಯಿತ್ ಇಂಜಿತ್‌ಲ್ಲೆ, ಆಚೇಂಗಿಯು, ನಾನ್ ತಂತ್ರ ಮಾಡಿತ್, ನಿಂಗಳ ಕಳಿಪ್‍ಚಿಟ್ಟಿತ್ ಪುಡ್‌ಚಿಯೇಂದ್ ಚೆನ್ನ ಜನ ಎಣ್ಣುವ.
ನಂಗ ಮನುಷ್ಯಂಗಡಿಂಜ ಬಂದ ಜ್ಞಾನತ್‍ಲ್ ನಡ್‍ಕತೆ, ದೇವಡ ಕೃಪೇರಗುಂಡ್, ಈ ಲೋಕತ್‌ಲು, ಮುಕ್ಯವಾಯಿತ್ ನಿಂಗಡ ಕೂಡೆಯು, ಕಪಟ ಇಲ್ಲತ ಪವಿತ್ರವಾನ ಸತ್ಯತ್‍ಲ್ ನಡ್ಂದತ್‍ೕಂದ್, ನಂಗಡ ಮನಸಾಕ್ಷಿ ನಂಗಕ್ ಎಣ್ಣುವ ಸಾಕ್ಷಿಯೇ ನಂಗಡ ಹೆಮ್ಮೆ ಆಯಿತುಂಡ್.
ಒಬ್ಬ ನಿಂಗಳ ಅಡಿಮೆ ಪಡ್‍ತ್‍ಚೇಂಗಿಯು, ಒಬ್ಬ ನಿಂಗಳ ಮುಗ್ಗ್‌ಚಿಟ್ಟತೇಂಗಿಯು, ಒಬ್ಬ ನಿಂಗಳ ಪುಡ್‌ಚಿತ್ ಕೊಂಡ್ ಪೋಚೇಂಗಿಯು, ಒಬ್ಬ ತನ್ನ ತಾನೆ ಕೊಚ್ಚ್‌ತೇಂಗಿಯು, ಒಬ್ಬ ನಿಂಗಡ ಮೂಡ್‍ಕ್ ಪೊಜ್ಜತೇಂಗಿಯು ನಿಂಗ ಸಹಿಸಿಯಂಡಿಂಜಿರ.
ನಿಂಗ ಏದ್ ವಿಷಯತ್‍ಲ್ ಬೋರೆ ಸಬೇಕಿಂಜ ಕಮ್ಮಿ ಇಂಜಿರ? ನಾನ್ ನಿಂಗಕ್ ಬಾರವಾಯಿತಿಲ್ಲತದೇ ನಿಂಗಕ್ ಕಮ್ಮಿಯಾಯಿತ್ಂಜತ್; ನಾನ್ ಮಾಡ್‍ನ ಈ ಅನ್ಯಾಯಕಾರ್ಯತ್‍ನ ಮನ್ನಿಚಿಡಿ.
ಅದ್ಂಡ ಬದ್‍ಲ್, ಞಾಣ ಆಪಕುಳ್ಳ ಪಿಂಞ ಗುಟ್ಟಾಯಿತುಳ್ಳ ವಿಷಯತ್‍ನೆಲ್ಲಾ ನಂಗ ತ್‍ಕ್ಕಾರ ಮಾಡಿತ್, ಕಪಟಿಯರನೆಕೆ ನಡ್‍ಕತೆ, ದೇವಡ ವಾಕ್ಯತ್‍ನ ತಪ್ಪಾಯಿತ್ ಬೋದನೆ ಮಾಡಿಯಂಡಿಲ್ಲೆ. ಆಚೇಂಗಿ, ಸತ್ಯತ್‍ನ ಎಲ್ಲಾರ್‌ಕು ಗೊತ್ತಾಪನೆಕೆ ಅರಿಚಿಟ್ಟಿತ್, ದೇವಡ ಮಿಂಞತ್ ಎಲ್ಲಾ ಮನುಷ್ಯಂಗಡ ಮನಸಾಕ್ಷಿಕ್ ನಂಗ ಸತ್ಯವಂತಯಿಂಗಾಂದ್ ಕಾಂಬ್‍ಚಿಟ್ಟಂಡುಂಡ್.
ಜನ ನಂಗಳ ಗನ ಪಡ್‍ತ್‍ಚೇಂಗಿಯು, ಗನ ಪಡ್‍ತತೆ ಪೋಚೇಂಗಿಯು, ಕೆಟ್ಟ ಪೆದ ಕ್‍ಟ್ಟ್‌ಚೇಂಗಿಯು, ನಲ್ಲ ಪೆದ ಕ್‍ಟ್ಟ್‌ಚೇಂಗಿಯು ದೇವಕ್ ಸೇವೆ ಮಾಡಿಯಂಡುಂಡ್. ಕಳ್ಳಂಗಾಂದ್ ಎಣ್ಣ್‌ಚೇಂಗಿಯು ಸತ್ಯವಂತಯಿಂಗಳಾಯಿತ್ ನಡ್ಂದಂಡುಂಡ್.
ನಿಂಗಡ ಮನಸ್ಸ್‌ಲ್ ನಂಗಕ್ ಜಾಗ ಕೊಡಿ; ನಂಗ ಒಬ್ಬಂಗು ಅನ್ಯಾಯ ಮಾಡಿತ್‌ಲ್ಲೆ, ಒಬ್ಬಂಗ್ ಸಹ ಕ್‍ೕಡ್ ಮಾಡಿತ್‌ಲ್ಲೆ, ಒಬ್ಬಂಗು ವಂಚನೆ ಮಾಡಿತ್‌ಲ್ಲೆ.
ನಂಗಡ ಬೋದನೆರ ಮೂಲಕ ನಿಂಗಳ ನಂಗ ಬೋಡ್‍ನದ್, ನಿಂಗಳ ವಂಚನೆ ಮಾಡ್‌ವಕೋ, ತಪ್ಪಾನ ಉದ್ದೇಶತ್‍ಲೋ, ಕಪಟತ್ಂಜೋ ಎಣ್ಣ್‌ನದ್ ಅಲ್ಲ.
ನಿಂಗಕೆಲ್ಲಾ ಗೊತ್ತುಳ್ಳನೆಕೆ, ನಂಗ ಒರ್ ಕುರಿ ಸಹ ಮರ್‍ಳ್ ತಕ್ಕ್ ಪರ್ಂದಿತ್ ನಿಂಗಳ ಗೆಲ್ಲ್‌ವಕ್ ನೋಟಿತ್‌ಲ್ಲೆ. ನಿಂಗಡ ಪಣತ್‍ನ ಪರಿಪಕಾಯಿತ್ ನಂಗ ನಿಂಗಡ ಕೂಡೆ ಸ್ನೇಹಿತಂಗಡನೆಕೆ ಕಳಿಚಂಡಿಲ್ಲೇಂದ್ ನಂಗ ಎಣ್ಣ್‌ವಕ್ ದೇವ ಒಬ್ಬನೇ ನಂಗಕ್ ಸಾಕ್ಷಿಯಾಯಿತುಂಡ್.
ಇಕ್ಕ ನಿಂಗ ಒಡೆಯಂಡ ದಯೇನ ಅನುಬವಿಚಿಟ್ಟಿತುಳ್ಳಿರ.