19 ನಂಗ ಪ್ರೀತಿ ಮಾಡ್‌ವಕ್ ಮಿಂಞ ದೇವ ನಂಗಳ ಪ್ರೀತಿ ಮಾಡ್‍ನಗುಂಡ್ ನಂಗ ಅಂವೊನ ಪ್ರೀತಿ ಮಾಡ್‌ವ.
ಆನಗುಂಡ್ ನಾನ್ ನೀಕ್ ಎಣ್ಣ್‌ವಿ: ಇವ ಮಾಡ್‍ನ ಪಾಪಕೆಲ್ಲ ಮನ್ನಿಪ್ಪ್ ಕ್‍ಟ್ಟ್‌ಚೀಂದ್ ಇವ ಕಾಂಬ್‍ಚಿಟ್ಟ ಪ್ರೀತಿಯಿಂಜ ಗೊತ್ತಾಪ. ದಾರ್‍ಕೆಲ್ಲ ಚೆನ್ನ ಮನ್ನಿಪ್ಪ್ ಕ್‍ಟ್ಟ್‌ಚೋ, ಅಯಿಂಗೆಲ್ಲ ಚೆನ್ನ ಮಾತ್ರ ಪ್ರೀತಿ ಮಾಡ್‌ವಾಂದ್ ಎಣ್ಣ್‌ಚಿ.
ನಿಂಗ ನನ್ನ ಗೊತ್ತ್ ಮಾಡಿತ್‌ಲ್ಲೆ. ನಾನ್ ನಿಂಗಳ ಗೊತ್ತ್ ಮಾಡಿಯೆ; ನಿಂಗ ಪೋಯಿತ್ ಫಲ ತಪ್ಪನೆಕೆಯು, ನಿಂಗಡ ಫಲ ಸದಾ ನಿಕ್ಕಂಡೂಂದು ನಿಂಗಳ ನೇಮಿಚಿಟ್ಟಿಯೆ. ಆನಗುಂಡ್, ನಾಡ ಪೆದತ್‍ಲ್ ಅಪ್ಪನ ನಿಂಗ ಎಂತ ಕ್‍ೕಪಿರೋ, ಅದ್‍ನ ಅಂವೊ ನಿಂಗಕ್ ತಪ್ಪ.
ದೇವ ಈ ಲೋಕತ್‍ರ ಜನಳ ಎಚ್ಚಕೋ ಪ್ರೀತಿ ಮಾಡಿತ್, ಅಂವೊಂಡ ಒರೇ ಮೋಂವೊನ ಕೊಡ್‍ತತ್; ದಾರೆಲ್ಲ ಅಂವೊನ ನಂಬುವ ಅಯಿಂಗೆಲ್ಲಾ ಪಾಳಾಕತೆ ನಿತ್ಯ ಜೀವತ್‍ನ ಪಡೆಯುವ.
ಪವಿತ್ರಾತ್ಮತ್‍ರ ಫಲ ಎಂತ ಎಣ್ಣ್‌ಚೇಂಗಿ, ಪ್ರೀತಿ, ಸಂತೋಷ, ಸಮಾದಾನ, ಸಹಿಸುವ ಶಕ್ತಿ, ಕರುಣೆ, ನಲ್ಲರಿಕೆ, ನಂಬಿಕೆ,
ನೇರಾನ ಪ್ರೀತಿ ಎಂತ ಎಣ್ಣ್‌ಚೇಂಗಿ, ನಂಗ ದೇವಡ ಮೇಲೆ ಬೆಚ್ಚ ಪ್ರೀತಿ ಅಲ್ಲ, ದೇವ ನಂಗಡ ಮೇಲೆ ಬೆಚ್ಚ ಪ್ರೀತಿಯೇ. ಅದ್, ನಂಗಡ ಪಾಪತ್‍ನ ಪರಿಹಾರ ಮಾಡ್‌ವಕ್ ದೇವ ತಾಂಡ ಒರೇ ಮೋಂವೊನ ಈ ಲೋಕಕ್ ಅಯಿಚದ್.
ದಾರೇಂಗಿ, ನಾನ್ ದೇವನ ಪ್ರೀತಿ ಮಾಡ್‌ವೀಂದ್ ಎಣ್ಣಿತ್ ತಾಂಡ ಅಣ್ಣತಮ್ಮಣಂಗಳ ದ್ವೇಶ ಮಾಡ್‍ಚೇಂಗಿ ಅಂವೊ ಒರ್ ಪೊಟ್ಟ್‌ಮಾರಿ. ನಂಗ ಎಕ್ಕಾಲು ಕಂಡಂಡ್ ಉಳ್ಳ ಅಣ್ಣತಮ್ಮಣಂಗಳ ಪ್ರೀತಿ ಮಾಡತೆ ಪೋನಕ ನಂಗ ಕಾಂಗತ ದೇವನ ಎನ್ನನೆ ಪ್ರೀತಿ ಮಾಡ್‌ವಕ್ ಕಯ್ಯು.