38 ಆ ಕುರುಕ್ ದೇವ ನೇಮಿಚಿಟ್ಟಿತುಳ್ಳ ತಡೀರ ರೂಪತ್‍ನ ಕೊಡ್‍ಪ, ಓರೋರ್ ಕುರುಕ್ ಅದ್ಂಡದ್ಂಡ ತಡೀರ ರೂಪತ್‍ನ ಕೊಡ್‍ಪ.
ಒರ್ ಕುರುನ ಬಿತ್ತ್‌ವಕ, ಮಿಂಞಕ್ ಬೊಳಿಯುವಕುಳ್ಳ ಗಿಡತ್‍ನ ನೀನ್ ಬಿತ್ತಿಯಂಡಿಲ್ಲೆ. ಗೋದಿ ಅಥವ ಬೋರೆ ಎಂತಾಚು ಒರ್ ಕುರು ಬಿತ್ತ್‌ವಿಯ.
ಅನ್ನನೆ, ಎಲ್ಲಾ ಯರ್ಚಿಯು ಒರೇ ತರ ಅಲ್ಲ. ಮನುಷ್ಯಂಗಡ ಯರ್ಚಿ ಒರ್ ತರ, ಪ್ರಾಣಿಯಡ ಯರ್ಚಿ ಇಂಞೊರ್ ತರ, ಪಕ್ಷಿಯಡ ಯರ್ಚಿ ಬೋರೆ ತರ, ಮೀನ್‌ರ ಯರ್ಚಿ ಇಂಞೊರ್ ತರ.
ದಾರ್ ಕುರು ಬಿತ್ತುವ, ದಾರ್ ನೀರ್ ಬೂಕ್‌ವ ಎಣ್ಣ್‌ವದ್ ಮುಕ್ಯ ಅಲ್ಲ. ಅದ್‍ನ ಬೊಳಿಯುವಕ್ ಮಾಡ್‌ವ ದೇವನೇ ಮುಕ್ಯ.