6 ದೇವ ನಾನಾ ತರತ್‍ಲ್ ಕೆಲಸ ಮಾಡ್‌ವ, ಆಚೇಂಗಿ, ನಂಗಡ ಎಲ್ಲಾಡ ಒಳ್‍ಲ್ ಕೆಲಸ ಮಾಡ್‌ವಕ್ ಶಕ್ತಿ ತಪ್ಪ ದೇವ ಒಬ್ಬನೇ.
ಯೇಸು ಅಯಿಂಗಕ್: ನಾಡ ಅಪ್ಪ ಇಲ್ಲಿಕತ್ತನೆ ಕ್ರಿಯೆ ಮಾಡಿಯಂಡುಂಡ್, ಅದ್ಂಗಾಯಿತ್ ನಾನ್ ಸಹ ಕ್ರಿಯೆ ಮಾಡಿಯಂಡ್ ಉಳ್ಳ್‌ಂದ್ ಎಣ್ಣ್‌ಚಿ.
ಇದೆಲ್ಲಾ ಒರೇ ಪವಿತ್ರಾತ್ಮ ಮಾಡಿತ್, ಅಂವೊ ತೀರ್ಮಾನ ಮಾಡ್‌ವನೆಕೆ ಒಬ್ಬೊಬ್ಬಂಗ್ ಓರೋರ್ ತರತ್‍ರ ವರತ್‍ನ ತಪ್ಪ.
ದೇವಡ ಸೇವೆ ನಾನಾ ತರತ್‍ಲ್ ಉಂಡ್, ಆಚೇಂಗಿ ನಂಗಡ ಒಡೆಯ ಒಬ್ಬನೇ.
ಎಲ್ಲಾನ ಕ್ರಿಸ್ತಂಡ ಕಾಲ್‍ರ ಅಡಿಕ್ ಇಟ್ಟ ಪಿಂಞ, ಕ್ರಿಸ್ತ, ಎಲ್ಲಾನ ತಾಂಡ ಕಾಲ್‍ರ ಅಡಿಕ್ ಇಟ್ಟ ದೇವಡ ಅದಿಕಾರಕ್ ತನ್ನ ತಾನೆ ಒಪ್ಪ್‌ಚಿಡುವ; ಅಕ್ಕ ದೇವ ಎಲ್ಲಾಂಗು, ಎಲ್ಲವೂ ಆಯಿತ್ ಇಪ್ಪ.
ದಾರ್ ಕುರು ಬಿತ್ತುವ, ದಾರ್ ನೀರ್ ಬೂಕ್‌ವ ಎಣ್ಣ್‌ವದ್ ಮುಕ್ಯ ಅಲ್ಲ. ಅದ್‍ನ ಬೊಳಿಯುವಕ್ ಮಾಡ್‌ವ ದೇವನೇ ಮುಕ್ಯ.
ಎಲ್ಲಾರ್‌ಕು ಒರೇ ದೇವನಾನ ಅಪ್ಪನು ಉಂಡ್; ಅಂವೊ ಎಲ್ಲಾಡ ಮೇಲೆಯು, ಎಲ್ಲಾಡ ಮೂಲಕವು, ಎಲ್ಲಾಡಲ್ಲಿಯು ವಾಸ ಮಾಡಿಯಂಡ್ ಉಂಡ್.
ಎನ್ನಂಗೆಣ್ಣ್‌ಚೇಂಗಿ ದೇವ ಅಂವೊಂಗ್ ಕುಶಿಯಾನದ್‌ನ ಮಾಡ್‌ವಕ್, ನಿಂಗಕ್ ಆಸೆ ಪಿಂಞ ಶಕ್ತಿ ತಂದಿತ್ ನಿಂಗಡ ಬದ್‍ಕ್‍ಲ್ ಕ್ರಿಯೆ ಮಾಡಿಯಂಡುಂಡ್.
ಅದ್ಂಗಾಯಿತೇ, ನಾನ್ ನಾಡ ಒಳ್‍ಲ್ ಬಲ್ಯ ಶಕ್ತಿಲ್ ಕ್ರಿಯೆ ಮಾಡಿಯಂಡುಳ್ಳ ಅಂವೊಂಡ ಶಕ್ತಿಯಿಂಜ ಕ್ರಿಯೆ ಮಾಡಿತ್, ದುಂಬ ಪ್ರಯತ್ನ ಪಟ್ಟಂಡುಳ್ಳ.
ಇದ್‍ಲ್ ಯೆಹೂದ್ಯಂಗಲ್ಲತಯಿಂಗಾಂದ್, ಯೆಹೂದ್ಯಂಗಾಂದ್, ಸುನ್ನತಿ ಮಾಡ್‌ನಯಿಂಗಾಂದ್, ಸುನ್ನತಿ ಮಾಡತಯಿಂಗಾಂದ್, ಚಾಯಿ ಇಪ್ಪಕ್ ಗೊತ್ತುಳ್ಳಯಿಂಗಾಂದ್, ಚಾಯಿ ಇಪ್ಪಕ್ ಗೊತ್ತ್‌ಲ್ಲತಯಿಂಗಾಂದ್, ಅಡಿಯಾಳ್‍ೕಂದ್, ಅಡಿಯಾಳ್ ಅಲ್ಲತಯಿಂಗಾಂದ್, ಇದ್‍ನೆಲ್ಲಾ ದೇವ ನೋಟಿಯಂಡ್ ಇಲ್ಲೆ; ಕ್ರಿಸ್ತನೇ ಎಲ್ಲಾಡ ಒಳ್‍ಲ್ ಎಲ್ಲಾವಾಯಿತ್ ಉಂಡ್.
ಯೇಸುರ ಮೂಲಕ ತಾಂಡ ಮಿಂಞತ್ ಕುಶಿಯುಳ್ಳದ್‍ನ, ನಿಂಗಡ ಮದ್ಯತ್‍ಲ್ ಮಾಡಿತ್, ನಿಂಗ ಅಂವೊಂಡ ಚಿತ್ತತ್‍ರನೆಕೆ ಮಾಡ್‌ವಕ್, ನಿಂಗಳ ಎಲ್ಲಾ ತರತ್‍ರ ನಲ್ಲ ಕ್ರಿಯೇರಗುಂಡ್ ಪೂರ್ತಿ ಮಾಡಿತ್ ಬಲಪಡ್‍ತಡ್; ಅಂವೊಂಗ್ ಎಕ್ಕಾಲು ಮಹಿಮೆ ಬರಡ್. ಆಮೆನ್.