30 ಎಲ್ಲಾರು ಕಾಯಿಲೆನೆ ವಾಸಿ ಮಾಡ್‌ವಯಿಂಗಳಾ? ಎಲ್ಲಾರು ಬೋರೆ ಬೋರೆ ಬಾಷೆಲ್ ತಕ್ಕ್ ಪರಿಯುವಯಿಂಗಳಾ? ಎಲ್ಲಾರು ಬೋರೆ ಬಾಷೆಲ್ ಎಣ್ಣ್‌ವ ತಕ್ಕ್‌ನ ಅರ್ಥ ಮಾಡಿ ತಪ್ಪಯಿಂಗಳಾ?
ಬೋರೆ ಒಬ್ಬಂಗ್ ಅದ್ಬುತ ಕಾರ್ಯ ಮಾಡ್‌ವ ವರ, ಇಂಞೊಬ್ಬಂಗ್ ಪ್ರವಾದನೆ ಎಣ್ಣ್‌ವ ವರ, ಬೋರೆ ಒಬ್ಬಂಗ್ ದೇವಡ ಶಕ್ತಿಯಿಂಜ ಕೂಳಿಯಡ ಶಕ್ತಿನ ಗೊತ್ತ್‌ಮಾಡ್‍ವಕುಳ್ಳ ವರ, ಇಂಞೊಬ್ಬಂಗ್ ನಾನಾತರ ಬಾಷೆನ ಪರಿವಕುಳ್ಳ ವರ, ಬೋರೆ ಒಬ್ಬಂಗ್ ನಾನಾತರ ಬಾಷೆನ ಅರ್ಥ ಮಾಡಿತಪ್ಪ ವರ, ಅನ್ನನೆ ನಾನಾತರ ವರತ್‍ನ ಕೊಡ್‌ತಿತುಂಡ್.
ದೇವಡ ಸಬೇಲ್, ದೇವ ಆದ್ಯವಾಯಿತ್ ಅಪೊಸ್ತಲಂಗಳ, ಪಿಂಞ ಪ್ರವಾದಿಯಂಗಳ, ಪಿಂಞ ಉಪದೇಶ ಮಾಡ್‌ವಯಿಂಗಳ ಪಿಂಞ ಅದ್ಬುದ ಕಾರ್ಯ ಮಾಡ್‌ವಯಿಂಗಳ, ಪಿಂಞ ಕಾಯಿಲೆ ವಾಸಿ ಮಾಡ್‌ವಯಿಂಗಳ, ಪಿಂಞ ಸಹಾಯ ಮಾಡ್‌ವಯಿಂಗಳ ಪಿಂಞ ಆಡಳಿತ ಮಾಡ್‌ವಯಿಂಗಳ, ಪಿಂಞ ಬೋರೆ ಬೋರೆ ಬಾಷೆಲ್ ತಕ್ಕ್ ಪರಿಯುವಯಿಂಗಳ ನೇಮಿಚಿಟ್ಟಿತುಂಡ್.
ಅಕ್ಕ, ಎಲ್ಲಾರು ಅಪೊಸ್ತಲಂಗಳಾ? ಎಲ್ಲಾರು ಪ್ರವಾದಿಯಂಗಳಾ? ಎಲ್ಲಾರು ಉಪದೇಶ ಮಾಡ್‌ವಯಿಂಗಳಾ? ಎಲ್ಲಾರು ಅದ್ಬುತ ಕಾರ್ಯ ಮಾಡ್‌ವಯಿಂಗಳಾ?
ಬೋರೆ ಒಬ್ಬಂಗ್ ಅದೇ ಪವಿತ್ರಾತ್ಮನಗುಂಡ್ ದೇವಡ ದೃಡವಾನ ನಂಬಿಕೆ, ಇಂಞೊಬ್ಬಂಗ್ ಅದೇ ಪವಿತ್ರಾತ್ಮನಗುಂಡ್ ಕಾಯಿಲೆನೆ ವಾಸಿ ಮಾಡ್‌ವ ವರ,
ದಾರ್‍ಕೆಲ್ಲ ಬೋರೆ ಬೋರೆ ಬಾಷೆಲ್ ತಕ್ಕ್ ಪರಿಯುವ ವರ ಉಂಡೋ, ಅಯಿಂಗ ಅದ್ಂಡ ಅರ್ಥ ಎಣ್ಣಿ ಕೊಡ್‍ಪ ವರಕಾಯಿತ್ ಪ್ರಾರ್ಥನೆ ಮಾಡಂಡು.