2 ನಿಂಗ ನನ್ನ, ನಿಂಗಡ ಗೇನತ್‍ಲ್ ಬೆಚ್ಚಿತ್, ನಿಂಗಡ ಎಲ್ಲಾ ವಿಷಯತ್‍ಲ್, ನಾನ್ ನಿಂಗಕ್ ಬೋದನೆ ಮಾಡ್‍ನದ್‍ನ ಗೇನ ಮಾಡಿಯಂಡ್, ನಾನ್ ನಿಂಗಕ್ ಒಪ್ಪ್‌ಚಿಟ್ಟದ್‍ನ ಮಾಡಿಯಂಡ್ ಉಳ್ಳಗುಂಡ್ ನಿಂಗಳ ನಾನ್ ಕೊಂಡಾಡುವಿ.
ಅಯಿಂಗ ದಂಡಾಳು ದೇವಡ ಎಲ್ಲಾ ಕಾನೂನ್ ಪ್ರಕಾರ, ಆಜ್ಞೆರ ಪ್ರಕಾರ ನೀತಿವಂತಯಿಂಗಳಾಯಿತ್, ಏದ್ ಮನುಷ್ಯನು ಕುತ್ತ ಪರಿಯುವಕ್ ಕಯ್ಯತ ಬದ್‍ಕ್‍ನ ಬದ್‍ಕಿಯಂಡ್ ಇಂಜತ್.
ಆಚೇಂಗಿ ಇಕ್ಕ ನಾನ್ ಎಣ್ಣ್‌ವಕುಳ್ಳ ವಿಷಯತ್‍ಲ್, ನಾನ್ ನಿಂಗಳ ಕೊಂಡಾಡುಲೆ. ಎನ್ನಂಗೆಣ್ಣ್‌ಚೇಂಗಿ ನಿಂಗ ಆರಾದನೆ ಮಾಡ್‌ವಕ್ ಒಕ್ಕಚೆ ಕೂಡಿ ಬಪ್ಪಕ, ಅದ್ ನಿಂಗಕ್ ನಲ್ಲದ್ ಮಾಡ್‌ವಕ್ ಬದ್‍ಲಾಯಿತ್ ಕೆಟ್ಟದ್ ಮಾಡಿಯಂಡುಂಡ್.
ಉಂಬಕ್ ತಿಂಬಕ್ ನಿಂಗಕ್ ನಿಂಗಡ ಮನೆ ಇಲ್ಲೆಯಾ? ಇದ್ ದೇವಡ ಸಬೇನ ತ್‍ಕ್ಕಾರ ಮಾಡಿತ್, ಉಳ್ಳಯಿಂಗ ಇಲ್ಲತಯಿಂಗಳ ಞಾಣಪಡ್‍ತ್‍ವನೆಕೆ ಉಂಡ್. ನಾನ್ ನಿಂಗಡ ಪಕ್ಕ ಎಂತ ಎಣ್ಣಡ್? ಈ ವಿಷಯತ್‍ಲ್ ನಾನ್ ನಿಂಗಳ ಕೊಂಡಾಡುವಕಯ್ಯುವಾ? ನಾನ್ ಅದ್‍ನ ಮಾಡುಲೆ.
ಈ ಬೋದನೆರನೆಕೆ ಮಾಡ್‍ಚೇಂಗಿ ದೇವ ನಿಂಗಳ ನಿಂಗಡ ಪಾಪತ್ಂಜ ಕಾಪಾಡ್‌ವ; ಇಲ್ಲತಪೋಚೇಂಗಿ ಕ್ರಿಸ್ತಂಡ ಮೇಲೆ ನಿಂಗಕ್ ಉಳ್ಳ ನಂಬಿಕೆ ಪ್ರಯೋಜನ ಇಲ್ಲತ ಆಯಿಪೋಪ.
ಇದ್ಂಗಾಯಿತೇ ನಾನ್ ನಾಡ ಪ್ರೀತಿರ ಮೋಂವೊನು, ಒಡೆಯಂಗ್ ಸತ್ಯವುಳ್ಳಂವೊನು ಆಯಿತುಳ್ಳ ತಿಮೊಥೆಯನ ನಿಂಗಡ ಪಕ್ಕ ಅಯಿಚಂಡುಳ್ಳ. ನಾನ್ ಎಲ್ಲಾ ಜಾಗತ್‍ಲ್ ಎಲ್ಲಾ ಸಬೇಲ್ ಬೋದನೆ ಮಾಡ್‌ವನೆಕೆ, ಕ್ರಿಸ್ತ ಯೇಸುರಲ್ಲಿ ಉಳ್ಳ ನಾಡ ಬದ್‍ಕ್‍ರ ವಿಷಯತ್‍ನ ನಿಂಗಕ್ ಜ್ಞಾಪಕ ಮಾಡ್‌ವಿ.
ದೇವ ನಿಂಗಕ್ ಎಂತ ಬದ್‍ಕ್‍ನ ಪಾಲ್ ಮಾಡಿತ್ ತಂದಿತುಂಡೋ ಅನ್ನನೆ ನಿಂಗ ಬದ್‍ಕ್‍ವದ್ ನಲ್ಲದ್. ದೇವ ನಿಂಗಳ ಎನ್ನನೆ ಕಾಕಿತುಂಡೋ ಅನ್ನನೆ ಬದ್‍ಕ್‍ವದ್ ನಲ್ಲದ್. ಇನ್ನನೆ ನಾನ್ ಎಲ್ಲಾ ಸಬೇಕು ಬೋದನೆ ಮಾಡಿಯಂಡುಳ್ಳ.
ಇದ್‍ಲ್ಲತೆ, ನಿಂಗ ಯೇಸುನ ನಂಬ್‍ನಗುಂಡ್, ನಿಂಗಳ ಜನ ದುಂಬ ಹಿಂಸೆ ಮಾಡ್‍ಚಿ. ಆಚೇಂಗಿಯು, ಪವಿತ್ರಾತ್ಮ ತಪ್ಪ ಕುಶೀನ ನಿಂಗ ಎಡ್‍ತಂಡ್, ದೇವಡ ವಾಕ್ಯತ್‍ನ ಸ್ವೀಕಾರ ಮಾಡಿತ್, ನಂಗ ನಡ್‍ಪನೆಕೆ ನಡ್‌ಂದಿತ್, ಕ್ರಿಸ್ತಂಡನೆಕೆ ಹಿಂಸೆನ ಸಹಿಸಿರ.
ಇಕ್ಕ ತಿಮೊಥೆಯ ನಿಂಗಡಲ್ಲಿಂಜ ನಂಗಡ ಪಕ್ಕ ಬಂದಿತ್, ನಿಂಗ ನಂಬಿಕೇಲ್ ಸ್ತಿರವಾಯಿತ್ ಇಪ್ಪಾನ ಪಿಂಞ ಒಬ್ಬೊಬ್ಬಂಡ ಮೇಲೆ ಉಳ್ಳ ನಿಂಗಡ ಪ್ರೀತಿನ, ನಲ್ಲರಿಕೆಯಾಯಿತ್ ನಂಗಕ್ ಎಣ್ಣ್‌ಚಿ. ನಿಂಗ ನಂಗಳ ಎಕ್ಕಾಲು ಕುಶೀಲ್ ಗೇನ ಮಾಡಿಯಂಡ್, ನಂಗ ನಿಂಗಳ ಕಾಂಗಂಡೂಂದ್ ಆಸೇಲ್ ಗೇನ ಮಾಡ್‌ವನೆಕೆ, ನಿಂಗಳು ನಂಗಳ ಕಾಂಗಂಡೂಂದ್ ಆಸೆಯಾಯಿತ್ ಉಳ್ಳಿರಾಂದ್ ಅಂವೊ ನಂಗಕ್ ಎಣ್ಣ್‌ಚಿ.
ಆನಗುಂಡ್ ನಾಡ ಅಣ್ಣತಮ್ಮಣಂಗಳೇ, ನಿಂಗ ಸ್ತಿರವಾಯಿತ್ ನಿಂದಂಡ್, ನಂಗ ನಿಂಗಡ ಕೂಡೆ ಇಪ್ಪಕ ಮಾಡ್‍ನ ಬೋದನೆನ ಮಾತ್ರ ಅಲ್ಲ ನಂಗ ನಿಂಗಕ್ ಒಳ್‍ದ್‍ನ ಕಾಗದತ್‍ರ ಮೂಲಕ ಕ್‍ಟ್ಟ್‌ನ ಬೋದನೆನ ಸಹ ಗಟ್ಟಿಯಾಯಿತ್ ಪುಡ್‍ಚೊಳಿ.
ನಂಗಡ ಅಣ್ಣತಮ್ಮಣಂಗಳೇ, ಸೋಮಾರಿಯಾಯಿತ್ ಬದ್‍ಕಿಯಂಡ್, ನಂಗ ನಿಂಗಕ್ ಎಣ್ಣ್‌ನ ಪದ್ದತಿರ ಪ್ರಕಾರ ನಡ್‌ಂದಂಡಿಲ್ಲತ ಯೇಸುನ ನಂಬ್‍ನಯಿಂಗಳ ದೂರಮಾಡಿತ್ ಬೆಕ್ಕಂಡೂಂದ್ ಒಡೆಯನಾನ ಯೇಸು ಕ್ರಿಸ್ತ ನಂಗಕ್ ತಂದಿತುಳ್ಳ ಅದಿಕಾರತ್‍ಲ್ ನಂಗ ನಿಂಗಕ್ ಆಜ್ಞೆ ಮಾಡ್‌ವ.