24 ನಿಂಗ ದಾರೂ, ನಿಂಗಡ ಸ್ವಂತ ಪ್ರಯೋಜನಕಾಯಿತ್ ಮಾತ್ರ ಮಾಡತೆ, ಬೋರೆಯಿಂಗ ದೇವಡ ಮೇಲೆ ಉಳ್ಳ ನಂಬಿಕೇಲ್ ಬೊಳಿಯುವಕಾಯಿತ್ ಮಾಡಂಡು.
ನಿಂಗಳು ಯೆಹೂದ್ಯಂಗಕು, ಯೆಹೂದ್ಯರಲ್ಲತಯಿಂಗಕು ಪಿಂಞ ದೇವಡ ಸಬೇಲ್ ಉಳ್ಳಯಿಂಗ ಎಲ್ಲಾರು ರಕ್ಷಣೆ ಆಪಕ್ ತಡೆ ಮಾಡತಯಿಂಗಳಾಯಿತ್ ಇರಿ.
ಪ್ರೀತಿ ಮರ್ಯಾದಿ ಇಲ್ಲತೆ ನಡ್‍ತುಲೆ. ಅದ್ ತಾಂಡ ಸ್ವಂತದ್‍ನ ಮಾತ್ರ ಗೇನ ಮಾಡುಲೆ, ಪ್ರೀತಿ ಬೆರಿಯ ಚೆಡಿ ಮಾಡುಲೆ, ಬೋರೆಯಿಂಗ ಕೆಟ್ಟದ್ ಮಾಡ್‌ನಾನ ಲೆಕ್ಕ ಬೆಚ್ಚೊಲೆ.
ನೋಟಿ, ನಿಂಗಡ ಪಕ್ಕ ಮೂಂದನೆ ಕುರಿ ಬಪ್ಪಕ್ ನಾನ್ ತಯಾರಾಯಿತುಳ್ಳ; ನಾನ್ ನಿಂಗಕ್ ಬಾರವಾಯಿತ್‌ಪ್ಪುಲೆ; ನಿಂಗಡ ಪಕ್ಕ ಉಳ್ಳದ್‍ನ ಅಲ್ಲ, ನಿಂಗಳೇ ನಾಕ್ ಬೋಂಡಿಯತ್. ಅಪ್ಪವ್ವಂಗಕ್ ಮಕ್ಕ ಅಲ್ಲ, ಆಚೇಂಗಿ ಮಕ್ಕಕ್ ಅಪ್ಪವ್ವಂಗಳೇ ಉಳಿಕೆ ಮಾಡಿ ಬೆಪ್ಪ.
ಬೋರೆ ಎಲ್ಲಾರು ಯೇಸು ಕ್ರಿಸ್ತಂಡ ವಿಷಯತ್‍ನ ಮಾಡತೆ ಅಯಿಂಗಯಿಂಗಡ ವಿಷಯತ್‍ನ ಮಾಡಿಯಂಡುಂಡ್.