ನಾನ್ ಪ್ರವಾದನೆ ಮಾಡ್‌ವ ವರತ್‍ನ ಪಡ್ಂದಂವೊನಾಯಿತ್, ಎಲ್ಲಾ ಗುಟ್ಟ್‌ನ ಪಿಂಞ ಬುದ್ದಿನ ಅರ್ಥಮಾಡ್‍ಂವೊನಾಯಿತ್ ಇಂಜತೇಂಗಿಯು, ಕುಂದ್‍ನ ತಳ್ಳ್‌ವಕುಳ್ಳ ಎಲ್ಲಾ ನಂಬಿಕೆ ಉಳ್ಳಂವೊನಾಯಿತ್ ಇಂಜತೇಂಗಿಯು, ನಾಕ್ ಪ್ರೀತಿ ಇಲ್ಲತೆಪೋಚೇಂಗಿ, ನಾನ್ ಒಂದು ಇಲ್ಲೆ.
ಅನ್ನನೆ, ನಂಬಿಕೇಲ್, ಬೋದನೆಲ್, ಬುದ್ದಿಲ್, ಎಲ್ಲಾ ಜಾಗ್ರತೆಲ್, ನಂಗಡ ಮೇಲೆ ಬೆಚ್ಚಿತುಳ್ಳ ಪ್ರತಿಲ್ ಪಿಂಞ ಬೋರೆ ಎಲ್ಲಾ ವಿಷಯತ್‍ಲು ನಿಂಗ ಚಾಯಿತೆ ಬೊಳ್‌ಂದಿತುಳ್ಳನೆಕೆ, ಈ ದಾನ ಮಾಡ್‌ವ ವಿಷಯತ್‍ಲು ದಾರಳವಾಯಿತ್ ಇರಿ.