ಹೋಶೇಯ 5:9 - ಪರಿಶುದ್ದ ಬೈಬಲ್9 ಶಿಕ್ಷೆಯು ವಿಧಿಸಲ್ಪಡುವಾಗ ಎಫ್ರಾಯೀಮ್ ಬರಿದಾಗುವದು. ಇದು ಖಂಡಿತವಾಗಿಯೂ ನೆರವೇರುವದೆಂದು ಯೆಹೋವನಾದ ನಾನು ಇಸ್ರೇಲ್ ಕುಟುಂಬಗಳಿಗೆ ತಿಳಿಸುತ್ತಿದ್ದೇನೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ದಂಡನೆಯ ದಿನದಲ್ಲಿ ಎಫ್ರಾಯೀಮು ಹಾಳಾಗುವುದು; ಇಸ್ರಾಯೇಲ್ ಕುಲಗಳ ಭವಿಷ್ಯತ್ತಿನ ನಿಶ್ಚಯವನ್ನು ತಿಳಿಯಪಡಿಸಿದ್ದೇನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ದಂಡನೆಯ ದಿನದಲ್ಲಿ ಎಫ್ರಯಿಮ್ ಹಾಳಾಗುವುದು. ಇಗೋ, ಇಸ್ರಯೇಲಿನ ಕುಲಗಳ ಭವಿಷ್ಯವನ್ನು ಖಚಿತವಾಗಿ ತಿಳಿಸಿದ್ದೇನೆ: ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಬೆನ್ಯಾಮೀನೇ, ಹಿಂದೆ ನೋಡು! ಖಂಡನೆಯ ದಿನದಲ್ಲಿ ಎಫ್ರಾಯೀಮು ಹಾಳಾಗುವದು; ಇಸ್ರಾಯೇಲ್ ಕುಲಗಳ ಭವಿಷ್ಯತ್ತಿನ ನಿಶ್ಚಯವನ್ನು ತಿಳಿಯಪಡಿಸಿದ್ದೇನೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ಎಫ್ರಾಯೀಮು ಗದರಿಸುವ ದಿವಸದಲ್ಲೇ ಹಾಳಾಗುವುದು. ಇಸ್ರಾಯೇಲಿನ ಗೋತ್ರಗಳಲ್ಲಿ ನಾನು ನಿಶ್ಚಯವಾಗಿ ಆಗುವಂಥದ್ದನ್ನೇ ತಿಳಿಸಿದ್ದೇನೆ. ಅಧ್ಯಾಯವನ್ನು ನೋಡಿ |
ಪ್ರವಾದಿಯು ಹೀಗೆ ಹೇಳುತ್ತಾನೆ, “ಇಸ್ರೇಲೇ, ಇದನ್ನು ಕಲಿತುಕೋ. ಶಿಕ್ಷೆಯ ಸಮಯವು ಬಂದದೆ. ನೀನು ಮಾಡಿದ ದುಷ್ಟತನಕ್ಕೆ ಪ್ರತಿಯಾಗಿ ದೊರಕಬೇಕಾದ ಸಂಬಳ (ಫಲ)ದ ಸಮಯವು ಬಂತು.” ಆದರೆ ಇಸ್ರೇಲ್ ಜನರು ಹೀಗೆ ಹೇಳುತ್ತಾರೆ: “ಪ್ರವಾದಿಯು ಮೂರ್ಖನಾಗಿದ್ದಾನೆ. ದೇವರಾತ್ಮನುಳ್ಳ ಈ ಮನುಷ್ಯನು ಹುಚ್ಚನಾಗಿದ್ದಾನೆ.” ಪ್ರವಾದಿಯು ಹೀಗೆ ಹೇಳಿದನು, “ನಿನ್ನ ಕೆಟ್ಟ ಪಾಪಗಳಿಗಾಗಿ ನೀನು ಶಿಕ್ಷಿಸಲ್ಪಡುವೆ. ನೀನು ಹಗೆ ಮಾಡಿದುದಕ್ಕೆ ನೀನು ಶಿಕ್ಷೆ ಅನುಭವಿಸುವೆ.”