18 ಅವರು ಅಮಲೇರಿದ ಮೇಲೆ ಸೂಳೆಯರಂತೆ ವರ್ತಿಸುತ್ತಾರೆ. ಅವರು ಲಂಚವನ್ನು ಪ್ರೀತಿಸುತ್ತಾರೆ ಮತ್ತು ಲಂಚಕೊಡುವಂತೆ ಒತ್ತಾಯ ಮಾಡುತ್ತಾರೆ. ಆ ಅಧಿಪತಿಗಳು ತಮ್ಮ ಜನರ ಮೇಲೆ ಅಪಮಾನ ಬರಮಾಡುತ್ತಾರೆ.
ಜೆರುಸಲೇಮಿನ ನ್ಯಾಯಾಧೀಶರು ಲಂಚ ತೆಗೆದುಕೊಂಡು ಅನ್ಯಾಯವಾದ ತೀರ್ಪುಕೊಡುವರು. ಜನರಿಗೆ ಬೋಧಿಸುವ ಮೊದಲು ಜೆರುಸಲೇಮಿನ ಯಾಜಕರು ಹಣವನ್ನು ವಸೂಲಿ ಮಾಡುವರು. ಜನರು ತಮ್ಮ ಭವಿಷ್ಯದ ಬಗ್ಗೆ ಕೇಳಲು ಪ್ರವಾದಿಗಳಿಗೆ ಮುಂಗಡವಾಗಿ ಹಣ ಕೊಡುವರು. ಆಮೇಲೆ ಆ ನಾಯಕರು, “ಯೆಹೋವನು ನಮ್ಮಲ್ಲಿ ವಾಸಮಾಡುತ್ತಿದ್ದಾನೆ. ಆದ್ದರಿಂದ ನಮಗೆ ಕೆಟ್ಟದ್ದು ಏನೂ ಸಂಭವಿಸುವದಿಲ್ಲ” ಎಂದು ಹೇಳುವರು.
ಕೆಟ್ಟದ್ದನ್ನು ಎರಡೂ ಕೈಗಳಿಂದ ಮಾಡಲು ಜನರು ನಿಪುಣರಾಗಿದ್ದಾರೆ. ಅಧಿಕಾರಿಗಳು ಲಂಚ ಕೇಳುತ್ತಾರೆ. ನ್ಯಾಯಾಧೀಶರು ತಮ್ಮ ತೀರ್ಪು ಬದಲಾಯಿಸಲು ಹಣ ಕೇಳುತ್ತಾರೆ. “ಪ್ರಮುಖ ನಾಯಕರು” ನ್ಯಾಯವಾದ ಮತ್ತು ಜನರಿಗೆ ಹಿತವಾದ ತೀರ್ಮಾನವನ್ನು ಮಾಡುವದಿಲ್ಲ. ತಮ್ಮ ಇಷ್ಟಪ್ರಕಾರ ಅವರು ಮಾಡುತ್ತಿದ್ದಾರೆ.
ಯಾಕೆ ಹೀಗೆ? ಯಾಕೆಂದರೆ ನಿಮ್ಮ ಅನೇಕ ಪಾಪಕೃತ್ಯಗಳನ್ನು ನಾನು ಬಲ್ಲೆನು. ನೀವು ಭಯಂಕರ ಪಾಪಗಳನ್ನು ಮಾಡಿದ್ದೀರಿ. ನ್ಯಾಯವಂತರನ್ನು ಗಾಯಗೊಳಿಸಿದ್ದೀರಿ. ಅನ್ಯಾಯ ಮಾಡಲು ಹಣವನ್ನು ತೆಗೆದುಕೊಂಡಿದ್ದೀರಿ. ಬಡಜನರಿಗೆ ನ್ಯಾಯವನ್ನು ದೊರಕಿಸುವುದಿಲ್ಲ.
ಅವರು ತಿನ್ನುವರು ಆದರೆ ಅವರು ತೃಪ್ತಿಹೊಂದುವದಿಲ್ಲ. ಅವರು ಲೈಂಗಿಕಪಾಪ ಮಾಡುವರು ಆದರೆ ಅವರಿಗೆ ಮಕ್ಕಳಾಗುವದಿಲ್ಲ. ಕಾರಣವೇನೆಂದರೆ ಅವರು ಯೆಹೋವನನ್ನು ತೊರೆದು ವೇಶ್ಯೆಯರಂತೆ ವರ್ತಿಸಿದರು.
ಜನರು ಆಣೆ ಇಟ್ಟುಕೊಳ್ಳುತ್ತಾರೆ, ಸುಳ್ಳನ್ನಾಡುತ್ತಾರೆ, ಕೊಲೆ ಮಾಡುತ್ತಾರೆ ಮತ್ತು ಸೂರೆ ಮಾಡುತ್ತಾರೆ. ಅವರು ವ್ಯಭಿಚಾರವೆಂಬ ಪಾಪಗಳನ್ನು ಮಾಡುತ್ತಾರೆ. ಆದ್ದರಿಂದ ಅವರು ಮಕ್ಕಳನ್ನು ಹುಟ್ಟಿಸುತ್ತಾರೆ. ಜನರು ತಿರುಗಿತಿರುಗಿ ಕೊಲೆ ಮಾಡುತ್ತಾರೆ.
ಮೂರು ತಿಂಗಳಾದ ಬಳಿಕ, ಯಾರೋ ಒಬ್ಬನು ಯೆಹೂದನಿಗೆ, “ನಿನ್ನ ಸೊಸೆಯಾದ ತಾಮಾರಳು ವ್ಯಭಿಚಾರದಿಂದ ಗರ್ಭಿಣಿಯಾಗಿದ್ದಾಳೆ” ಎಂದು ತಿಳಿಸಿದನು. ಆಗ ಯೆಹೂದನು, “ಆಕೆಯನ್ನು ಎಳೆದುಕೊಂಡು ಹೋಗಿ ಸುಟ್ಟುಬಿಡಿ” ಎಂದು ಹೇಳಿದನು.
“ನನಗೆ ಇಸ್ರೇಲ್ ಜನಾಂಗವು ಮರುಭೂಮಿಯಲ್ಲಿ ದೊರಕಿದ ದ್ರಾಕ್ಷಿಹಣ್ಣಿನಂತಿತ್ತು. ನಿನ್ನ ಪೂರ್ವಿಕರು ಫಲಕಾಲದ ಆರಂಭದಲ್ಲಿ ದೊರೆತ ಅಂಜೂರದ ಹಣ್ಣಿನಂತಿದ್ದರು. ಆದರೆ ಅವರು ಬಾಳ್‌ಪೆಗೋರಿಗೆ ಬಂದಾಗ ಅವರು ಬದಲಾದರು. ಅವರು ಕೊಳೆತುಹೋದ ವಸ್ತುವಿನಂತೆ ಆದರು. ಅವರು ಪ್ರೀತಿಸಿದ ಭಯಂಕರ ವಿಗ್ರಹಗಳಂತೆ ಆದರು.
ದೇವರು ಹೀಗೆಂದನು: “ನೀನು ನಿನ್ನ ಸೌಂದರ್ಯದ ಮೇಲೆ ಭರವಸೆ ಉಳ್ಳವಳಾಗಿದ್ದೆ. ನಿನ್ನ ಪ್ರಖ್ಯಾತಿಯಿಂದಾಗಿ ನನಗೆ ಅಪನಂಬಿಗಸ್ತಳಾದಿ. ನಿನ್ನನ್ನು ಹಾದುಹೋಗುವ ಪ್ರತಿವ್ಯಕ್ತಿಯೊಂದಿಗೆ ನೀನು ವೇಶ್ಯೆಯಂತೆ ನಡೆದುಕೊಂಡಿ. ನೀನು ನಿನ್ನನ್ನು ಅವರಿಗೊಪ್ಪಿಸಿದಿ.