ಹೋಶೇಯ 3:1 - ಪರಿಶುದ್ದ ಬೈಬಲ್1 ತಿರುಗಿ ಯೆಹೋವನು ನನಗೆ ಮತ್ತೆ ಹೇಳಿದ್ದೇನೆಂದರೆ, “ಗೋಮೆರಳಿಗೆ ಅನೇಕ ಪ್ರಿಯತಮರಿದ್ದಾರೆ, ಆದರೆ ನೀನು ಆಕೆಯನ್ನು ಪ್ರೀತಿ ಮಾಡುತ್ತಲೇ ಇರಬೇಕು. ಯಾಕೆಂದರೆ ಅದು ಯೆಹೋವನ ರೀತಿ. ಯೆಹೋವನು ಇಸ್ರೇಲ್ ಜನರನ್ನು ಪ್ರೀತಿಸುತ್ತಲೇ ಇದ್ದಾನೆ. ಆದರೆ ಅವರು ಅನ್ಯದೇವರುಗಳನ್ನು ಆರಾಧಿಸುತ್ತಲೇ ಇದ್ದಾರೆ. ಅವರು ಒಣದ್ರಾಕ್ಷಿಯ ಉಂಡೆಗಳನ್ನು ತಿನ್ನಲು ಆಶಿಸುತ್ತಾರೆ.” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಯೆಹೋವನು ನನಗೆ, “ನೀನು ಅನ್ಯದೇವತೆಗಳ ಕಡೆಗೆ ತಿರುಗಿಕೊಂಡು, ದೀಪದ್ರಾಕ್ಷೆಯ ಅಡೆಗಳನ್ನು ಪ್ರೀತಿಸುವ ಇಸ್ರಾಯೇಲರನ್ನು ಯೆಹೋವನು ಪ್ರೀತಿಸುವ ಪ್ರಕಾರ, ನೀನು ಜಾರನಿಗೆ ಪ್ರಿಯಳೂ, ವ್ಯಭಿಚಾರಾಸಕ್ತಳೂ ಆದ ಹೆಂಗಸನ್ನು ಪ್ರೀತಿಸುತ್ತಾ ಬಾ” ಎಂದು ಅಪ್ಪಣೆ ಕೊಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 ಅನಂತರ ಸರ್ವೇಶ್ವರ ನನಗೆ ಹೇಳಿದ್ದೇನೆಂದರೆ: “ನನ್ನ ಜನರಾದ ಇಸ್ರಯೇಲಿನವರು ಅನ್ಯದೇವತೆಗಳ ಕಡೆಗೆ ತಿರುಗಿಕೊಂಡು, ಅವುಗಳಿಗೆ ನೈವೇದ್ಯಮಾಡಿದ ಪದಾರ್ಥಗಳನ್ನು ಬಯಸುತ್ತಾರೆ. ಆದರೂ ಸರ್ವೇಶ್ವರ ಅವರನ್ನು ಪ್ರೀತಿಸುತ್ತಾರೆ. ಇದಕ್ಕೆ ನಿದರ್ಶನವಾಗಿ, ನೀನು ಹೋಗಿ, ಜಾರನಿಗೆ ಪ್ರಿಯಳೂ ಮತ್ತು ವ್ಯಭಿಚಾರಿಣಿಯೂ ಆದ ಸ್ತ್ರೀಯೊರ್ವಳನ್ನು ಪ್ರೀತಿಸು.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ಯೆಹೋವನು ನನಗೆ - ಅನ್ಯದೇವತೆಗಳ ಕಡೆಗೆ ತಿರುಗಿಕೊಂಡು ದೀಪದ್ರಾಕ್ಷೆಯ ಅಡೆಗಳನ್ನು ಪ್ರೀತಿಸುವ ಇಸ್ರಾಯೇಲ್ಯರನ್ನು ಯೆಹೋವನು ಪ್ರೀತಿಸುವ ಪ್ರಕಾರ ನೀನು ವಿುಂಡನಿಗೆ ಪ್ರಿಯಳೂ ವ್ಯಭಿಚಾರಾಸಕ್ತಳೂ ಆದ ಹೆಂಗಸನ್ನು ಪ್ರೀತಿಸುತ್ತಾ ಬಾ ಎಂದು ಅಪ್ಪಣೆಕೊಡಲು ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ1 ತರುವಾಯ ಯೆಹೋವ ದೇವರು ನನಗೆ, “ಬೇರೆ ದೇವತೆಗಳ ಕಡೆಗೆ ತಿರುಗಿಕೊಂಡು, ದ್ರಾಕ್ಷಿ ಉಂಡೆಗಳನ್ನು ಪ್ರೀತಿಸುವ ಇಸ್ರಾಯೇಲರನ್ನು ಯೆಹೋವ ದೇವರು ಪ್ರೀತಿಸುವ ಪ್ರಕಾರ, ನೀನು ಹೋಗಿ ನಿನ್ನ ಹೆಂಡತಿ ವ್ಯಭಿಚಾರಿಣಿಯಾಗಿದ್ದರೂ ಆಕೆಯನ್ನು ಪುನಃ ಪ್ರೀತಿಸು,” ಎಂದು ಹೇಳಿದನು. ಅಧ್ಯಾಯವನ್ನು ನೋಡಿ |
ಮೊದಲು, ನಂಬಿಕೆಯಿಲ್ಲದ ಜನರು ಮಾಡುವಂತಹ ಕಾರ್ಯಗಳನ್ನು ಮಾಡುತ್ತಾ ಬಹಳ ಕಾಲವನ್ನು ವ್ಯರ್ಥಗೊಳಿಸಿ ಬಿಟ್ಟಿರುವಿರಿ. ನೀವು ಲೈಂಗಿಕ ಪಾಪಗಳನ್ನು ಮಾಡುತ್ತಿದ್ದಿರಿ; ಇಷ್ಟವಾದ ಕೆಟ್ಟಕಾರ್ಯಗಳನ್ನು ಮಾಡುತ್ತಿದ್ದಿರಿ; ಕುಡುಕರಾಗಿದ್ದಿರಿ, ಕ್ರೂರಿಗಳಾಗಿದ್ದಿರಿ; ಅಸಹ್ಯಕರವಾದ ನಿರರ್ಥಕ ಗೋಷ್ಠಿಗಳನ್ನು ಮತ್ತು ಮದ್ಯಪಾನಗೋಷ್ಠಿಗಳನ್ನು ನಡೆಸುತ್ತಿದ್ದಿರಿ; ವಿಗ್ರಹಾರಾಧನೆ ಮಾಡುತ್ತಿದ್ದಿರಿ.