ಹೋಶೇಯ 11:4 - ಪರಿಶುದ್ದ ಬೈಬಲ್4 ನಾನು ಅವರನ್ನು ಪ್ರೀತಿ ಎಂಬ ಹಗ್ಗಗಳಿಂದ ಹತ್ತಿರಕ್ಕೆ ಎಳೆದುಕೊಂಡೆನು. ಅವರಿಗೆ ಸ್ವತಂತ್ರವನ್ನು ಕೊಟ್ಟೆನು. ನಾನು ಬಾಗಿ ಅವರಿಗೆ ಉಣಿಸಿದೆನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ನಾನು ನನ್ನ ಜನರನ್ನು ಮಾನವರಿಗೆ ತಕ್ಕ ಮೂಗುದಾರದಿಂದ, ಅಂದರೆ ಮಮತೆಯ ಹಗ್ಗದಿಂದ ಸೆಳೆದುಕೊಂಡೆನು. ನೊಗವನ್ನು ತಲೆಯ ಈಚೆಗೆ ತೆಗೆಯುವವರಂತೆ ನಾನು ಅವರನ್ನು ಸುಧಾರಿಸಿ, ಅವರಿಗೆ ಆಹಾರವನ್ನು ಉಣಿಸಿದೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ಬೆಳೆಸಿದೆನು ಅವರನ್ನು ಕರುಣೆಯ ಕಟ್ಟುಗಳಲಿ, ಪ್ರೀತಿಯ ಬಂಧನದಲಿ ಸುಧಾರಿಸಿದೆ ಅವರ ಹೆಗಲಿಗೆ ಬಿಗಿದಿದ್ದ ನೊಗವನ್ನು ಬಿಚ್ಚಿ ಊಟ ಬಡಿಸಿದೆ ಅವರಿಗೆ ನೆಲಸಮ ಬಗ್ಗಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)4 ನಾನು ನನ್ನ ಜನರನ್ನು ಮಾನವರಿಗೆ ತಕ್ಕ ಮೂಗುದಾರದಿಂದ, ಅಂದರೆ ಮಮತೆಯ ಹಗ್ಗದಿಂದ ಸೆಳೆದುಕೊಂಡೆನು; ನೊಗವನ್ನು ತಲೆಯ ಈಚೆಗೆ ತೆಗೆಯುವವರಂತೆ ನಾನು ಅವರನ್ನು ಸುಧಾರಿಸಿ ಅವರಿಗೆ ತೀನಿಯನ್ನು ನಯದಿಂದ ಇಕ್ಕಿದೆನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ನಾನು ಅವರನ್ನು ಮನುಷ್ಯನ ಹಗ್ಗಗಳಿಂದಲೂ, ಪ್ರೀತಿಯ ಬಂಧನಗಳಿಂದಲೂ ಎಳೆದೆನು. ಅವರಿಗೆ ನಾನು ಚಿಕ್ಕ ಮಗುವನ್ನು ಕೆನ್ನೆಯವರೆಗೆ ಎತ್ತುವವರಂತೆ ಇದ್ದೆ, ಮತ್ತು ನಾನು ಅವರಿಗೆ ಬಾಗಿ ತಿನ್ನಿಸುತ್ತಿದ್ದೆ. ಅಧ್ಯಾಯವನ್ನು ನೋಡಿ |