ಹಬಕ್ಕೂಕ 2:2 - ಪರಿಶುದ್ದ ಬೈಬಲ್2 ಯೆಹೋವನು ನನಗೆ ಹೇಳಿದ್ದು: “ನಾನು ನಿನಗೆ ತೋರಿಸುವದನ್ನು ಬರೆ. ಜನರು ಸುಲಭವಾಗಿ ಓದುವಂತೆ ಅದನ್ನು ದೊಡ್ಡ ಹಲಗೆಗಳ ಮೇಲೆ ಬರೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20192 ಆಗ ಯೆಹೋವನು ನನಗೆ ಈ ಉತ್ತರವನ್ನು ದಯಪಾಲಿಸಿದನು, “ನಿನಗಾದ ದರ್ಶನವನ್ನು ಬರೆದಿಡು; ಓದುವವರು ಸುಲಭವಾಗಿ ಶೀಘ್ರವಾಗಿ ಓದಲು ಅನುಕೂಲವಾಗುವಂತೆ ಹಲಿಗೆಗಳ ಮೇಲೆ ಅದನ್ನು ಕೆತ್ತಿಡು! ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)2 ಆಗ ಸರ್ವೇಶ್ವರ ನನಗೆ ಕೊಟ್ಟ ಉತ್ತರ ಇದು: “ನೀನು ಕಂಡ ದರ್ಶನವನ್ನು ಬರೆ. ಓದುವವನು ಶೀಘ್ರವಾಗಿ ಓದುವಂತೆ ಹಲಗೆಗಳ ಮೇಲೆ ಅದನ್ನು ಕೆತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)2 ಆಗ ಯೆಹೋವನು ನನಗೆ ಈ ಉತ್ತರವನ್ನು ದಯಪಾಲಿಸಿದನು - ನಿನಗಾದ ದರ್ಶನವನ್ನು ಬರೆ; ಓದುವವರು ಶೀಘ್ರವಾಗಿ ಓದುವಂತೆ ಹಲಿಗೆಗಳ ಮೇಲೆ ಅದನ್ನು ಕೆತ್ತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ2 ಆಗ ಯೆಹೋವ ದೇವರು ನನಗೆ ಉತ್ತರಕೊಟ್ಟರು. ಪ್ರಕಟನೆಯನ್ನು ಬರೆ. ಅದನ್ನು ಓದುವವನು ಶೀಘ್ರವಾಗಿ ಓದುವಂತೆ, ಅದನ್ನು ಹಲಗೆಗಳ ಮೇಲೆ ಕೆತ್ತು. ಅಧ್ಯಾಯವನ್ನು ನೋಡಿ |