ಹಗ್ಗಾಯ 2:13 - ಪರಿಶುದ್ದ ಬೈಬಲ್13 ಆಗ ಹಗ್ಗಾಯನು, “ಒಬ್ಬ ಮನುಷ್ಯನು ಸತ್ತ ಹೆಣವನ್ನು ಮುಟ್ಟಿದರೆ, ಅವನು ಅಪವಿತ್ರನಾಗುವನು. ಆ ಸ್ಥಿತಿಯಲ್ಲಿ ಅವನು ಮುಟ್ಟಿದ ಯಾವ ವಸ್ತುವೇ ಆಗಲಿ ಅಪವಿತ್ರವಾಗುವದೇ?” ಆಗ ಯಾಜಕರು, “ಹೌದು, ಆ ವಸ್ತುಗಳೂ ಅಪವಿತ್ರವಾಗುವವು” ಎಂದು ಉದ್ಗರಿಸಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ಆ ಮೇಲೆ ಹಗ್ಗಾಯನು, “ಹೆಣವನ್ನು ಮುಟ್ಟಿ ಅಶುದ್ಧನಾದವನು ಇವುಗಳಲ್ಲಿ ಯಾವುದನ್ನಾದರು ಸೋಕಿದರೆ ಅದು ಅಶುದ್ಧವಾಗುವುದೋ?” ಎಂದು ಕೇಳಿದ್ದಕ್ಕೆ ಯಾಜಕರು, “ಅಶುದ್ಧವೇ ಆಗುವುದು” ಎಂದು ಉತ್ತರಕೊಟ್ಟರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)13 ಆಗ ಹಗ್ಗಾಯನು, “ಹೆಣವನ್ನು ಮುಟ್ಟಿ ಅಶುದ್ಧನಾದವನು ಇವುಗಳಲ್ಲಿ ಯಾವುದನ್ನಾದರೂ ಸೋಕಿದರೆ ಅದು ಅಶುದ್ಧವಾಗುತ್ತದೋ” ಎಂದು ಕೇಳಿದನು. ಅದಕ್ಕೆ ಯಾಜಕರು: “ಖಂಡಿತವಾಗಿ ಅಶುದ್ಧವಾಗುತ್ತದೆ” ಎಂದು ಉತ್ತರಕೊಟ್ಟರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)13 ಆಮೇಲೆ ಹಗ್ಗಾಯನು - ಹೆಣವನ್ನು ಮುಟ್ಟಿ ಅಶುದ್ಧನಾದವನು ಇವುಗಳಲ್ಲಿ ಯಾವದನ್ನಾದರೂ ಸೋಕಿದರೆ ಅದು ಅಶುದ್ಧವಾಗುವದೋ ಎಂದು ಕೇಳಿದ್ದಕ್ಕೆ ಯಾಜಕರು - ಅಶುದ್ಧವೇ ಆಗುವದು ಎಂದು ಉತ್ತರಕೊಟ್ಟರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ13 ಆಗ ಹಗ್ಗಾಯನು, “ಹೆಣದಿಂದ ಅಶುದ್ಧವಾದವನು, ಇವುಗಳಲ್ಲಿ ಯಾವುದನ್ನಾದರೂ ಮುಟ್ಟಿದರೆ, ಅಶುದ್ಧವಾಗುವುದೋ?” ಎಂದನು. ಯಾಜಕರು ಉತ್ತರವಾಗಿ, “ಹೌದು, ಅಶುದ್ಧವಾಗುವುದು,” ಎಂದರು. ಅಧ್ಯಾಯವನ್ನು ನೋಡಿ |