ವಿಮೋಚನಕಾಂಡ 9:25 - ಪರಿಶುದ್ದ ಬೈಬಲ್25 ಈಜಿಪ್ಟಿನ ಹೊಲಗಳಲ್ಲಿದ್ದ ಪ್ರತಿಯೊಂದನ್ನೂ ಬಿರುಗಾಳಿ ನಾಶಮಾಡಿತು. ಆಲಿಕಲ್ಲು ಜನರನ್ನೂ ಪ್ರಾಣಿಗಳನ್ನೂ ಸಸ್ಯಗಳನ್ನೂ ನಾಶಮಾಡಿತು; ಹೊಲಗಳಲ್ಲಿದ್ದ ಎಲ್ಲಾ ಮರಗಳನ್ನು ಮುರಿದುಹಾಕಿತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201925 ಆ ಮಳೆಯಿಂದ ಐಗುಪ್ತ ದೇಶದ ಎಲ್ಲಾ ಕಡೆಗಳಲ್ಲಿದ್ದ ಮನುಷ್ಯರು, ಪಶುಗಳು, ಬಯಲಿನಲ್ಲಿದ್ದ ಎಲ್ಲವೂ ನಾಶವಾದವು. ಆನೆಕಲ್ಲಿನ ಮಳೆಯಿಂದ ಹೊಲಗಳಲ್ಲಿದ್ದ ಪೈರುಗಳು ಹಾಳಾದವು. ಹೊಲಗಳಲ್ಲಿದ್ದ ಮರಗಳು ಮುರಿದುಹೋದವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)25 ಆ ಮಳೆಯಿಂದ ಈಜಿಪ್ಟ್ ದೇಶದ ಎಲ್ಲಾ ಕಡೆಯಲ್ಲಿ ಮನುಷ್ಯರು - ಮೃಗಗಳು ಮಾತ್ರವಲ್ಲ ಬಯಲಿನಲ್ಲಿ ಇದ್ದ ಎಲ್ಲವೂ ನಾಶವಾದುವು; ಹೊಲಗದ್ದೆಗಳಲ್ಲಿದ್ದ ಪೈರುಪಚ್ಚೆಗಳೆಲ್ಲವು ಬಿದ್ದುಹೋದವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)25 ಆ ಕಲ್ಲಿನ ಮಳೆ ಐಗುಪ್ತದೇಶದ ಎಲ್ಲಾ ಕಡೆಯಲ್ಲಿ ಮನುಷ್ಯರನ್ನೂ ಪಶುಗಳನ್ನೂ ಬೈಲಿನಲ್ಲಿದ್ದ ಎಲ್ಲವನ್ನೂ ನಷ್ಟಪಡಿಸಿತು. ಆ ಕಲ್ಲಿನ ಮಳೆಯಿಂದ ಹೊಲಗಳಲ್ಲಿದ್ದ ಎಲ್ಲಾ ಪೈರುಗಳು ಹಾಳಾದವು. ಅಡವಿಯಲ್ಲಿದ್ದ ಮರಗಳು ಮುರಿದು ಹೋದವು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ25 ಆ ಆಲಿಕಲ್ಲಿನ ಮಳೆಯು ಈಜಿಪ್ಟ್ ದೇಶದಲ್ಲೆಲ್ಲಾ ಮನುಷ್ಯರು ಮೊದಲುಗೊಂಡು ಪಶುಗಳವರೆಗೂ ಹೊಲದಲ್ಲಿ ಇದ್ದದ್ದನ್ನೆಲ್ಲಾ ಹಾಳುಮಾಡಿತು. ಹೊಲದ ಎಲ್ಲಾ ಸೊಪ್ಪನ್ನೂ ಹಾಳು ಮಾಡಿ, ಎಲ್ಲಾ ಮರಗಳನ್ನು ಮುರಿದುಹಾಕಿತು. ಅಧ್ಯಾಯವನ್ನು ನೋಡಿ |