ವಿಮೋಚನಕಾಂಡ 8:29 - ಪರಿಶುದ್ದ ಬೈಬಲ್29 ಅದಕ್ಕೆ ಮೋಶೆ, “ನಾನು ಇಲ್ಲಿಂದ ಹೋದಾಗ, ನಿನಗೂ ನಿನ್ನ ಪ್ರಜೆಗಳಿಗೂ ನಿನ್ನ ಅಧಿಕಾರಿಗಳಿಗೂ ಹುಳಗಳ ಬಾಧೆ ನಾಳೆಯಿಂದ ಇರಬಾರದೆಂಬುದಾಗಿ ಯೆಹೋವನಿಗೆ ಪ್ರಾರ್ಥಿಸುವೆನು. ಆದರೆ ಮತ್ತೆ ನೀನು ವಂಚಿಸಿ ಜನರು ಯಜ್ಞಗಳನ್ನು ಸಮರ್ಪಿಸದಂತೆ ತಡೆಯಬಾರದು” ಎಂದು ಹೇಳಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201929 ಅದಕ್ಕೆ ಮೋಶೆಯು, “ನಾನು ನಿನ್ನ ಬಳಿಯಿಂದ ಹೊರಟು ಹೋದ ಕೂಡಲೇ, ಫರೋಹನಾದ ನಿನಗೂ, ನಿನ್ನ ಪರಿವಾರದವರಿಗೂ ನೊಣಗಳ ಬಾಧೆಯು ನಾಳೆಯಿಂದ ಇರಬಾರದೆಂಬುದಾಗಿ ನಾನು ಯೆಹೋವನನ್ನು ಬೇಡಿಕೊಳ್ಳುವೆನು. ಆದರೆ ಯೆಹೋವನಿಗೆ ಯಜ್ಞವನ್ನರ್ಪಿಸುವುದಕ್ಕೆ ನೀನು ನನ್ನ ಜನರಿಗೆ ಅಪ್ಪಣೆಕೊಡದೆ ಇನ್ನು ಮುಂದೆ ವಂಚನೆಮಾಡಬಾರದು” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)29 ಆಗ ಮೋಶೆ, “ನಿಮ್ಮ ಬಳಿಯಿಂದ ಹೊರಟಾಗಲೆ ಫರೋಹನಾದ ನಿಮಗೂ ನಿಮ್ಮ ಪ್ರಜಾಪರಿವಾರದವರಿಗೂ ನೊಣಗಳ ಕಾಟ ನಾಳೆಯಿಂದ ಇರಬಾರದೆಂದು ಸರ್ವೇಶ್ವರನಿಗೆ ಪ್ರಾರ್ಥನೆ ಮಾಡುತ್ತೇನೆ. ಆದರೆ ಸರ್ವೇಶ್ವರನಿಗೆ ಬಲಿ ಒಪ್ಪಿಸಲು ನೀವು ಜನರಿಗೆ ಅಪ್ಪಣೆಕೊಡದೆ ವಂಚನೆ ಮಾಡಬಾರದು,” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)29 ಅದಕ್ಕೆ ಮೋಶೆ - ನಾನು ನಿನ್ನ ಬಳಿಯಿಂದ ಹೊರಟಾಗ ಫರೋಹನಾದ ನಿನಗೂ ನಿನ್ನ ಪ್ರಜಾಪರಿವಾರದವರಿಗೂ ಹುಳಗಳ ಬಾಧೆಯು ನಾಳೆಯಿಂದ ಇರಬಾರದೆಂಬದಾಗಿ ಯೆಹೋವನಿಗೆ ಪ್ರಾರ್ಥನೆ ಮಾಡುವೆನು. ಆದರೆ ಯೆಹೋವನಿಗೆ ಯಜ್ಞಮಾಡಲಿಕ್ಕೆ ನೀನು ಜನರಿಗೆ ಅಪ್ಪಣೆ ಕೊಡದೆ ಇನ್ನು ಮುಂದೆ ವಂಚನೆಮಾಡಬಾರದು ಅಂದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ29 ಆಗ ಮೋಶೆಯು ಅವನಿಗೆ, “ನಾನು ನಿನ್ನನ್ನು ಬಿಟ್ಟು ಹೋಗಿ, ಯೆಹೋವ ದೇವರಿಗೆ ಪ್ರಾರ್ಥನೆ ಮಾಡುವೆನು. ನೊಣಗಳು ನಾಳೆ ಫರೋಹನನ್ನೂ, ಅವನ ಸೇವಕರನ್ನೂ, ಅವರ ಜನರನ್ನೂ ಬಿಟ್ಟು ಹೋಗುವುವು. ಆದರೆ ಯೆಹೋವ ದೇವರಿಗೆ ಯಜ್ಞವನ್ನರ್ಪಿಸುವುದಕ್ಕೆ ಫರೋಹನಾದ ನೀನು ಜನರನ್ನು ಕಳುಹಿಸದೆ ಇನ್ನು ಮೇಲೆ ವಂಚಿಸಬಾರದು,” ಎಂದನು. ಅಧ್ಯಾಯವನ್ನು ನೋಡಿ |