ವಿಮೋಚನಕಾಂಡ 4:28 - ಪರಿಶುದ್ದ ಬೈಬಲ್28 ಯೆಹೋವನು ಹೇಳಿದ್ದನ್ನೆಲ್ಲಾ ಮೋಶೆಯು ಆರೋನನಿಗೆ ತಿಳಿಸಿದನು. ಯೆಹೋವನು ತನ್ನನ್ನು ಯಾಕೆ ಕಳುಹಿಸಿದನೆಂದೂ ತಾನು ಯಾವ ಅದ್ಭುತಕಾರ್ಯಗಳನ್ನು ಮಾಡಬೇಕೆಂದೂ ಆರೋನನಿಗೆ ವಿವರಿಸಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201928 ಆಗ ಮೋಶೆಯು ಆರೋನನಿಗೆ, ತನ್ನನ್ನು ಕಳುಹಿಸಿದ ಯೆಹೋವನ ಎಲ್ಲಾ ಮಾತುಗಳನ್ನೂ, ತನಗೆ ಆಜ್ಞಾಪಿಸಿದ ಸೂಚಕಕಾರ್ಯಗಳನ್ನೂ, ತಾನು ಮಾಡಿದವುಗಳನ್ನೆಲ್ಲಾ ಆರೋನನಿಗೆ ತಿಳಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)28 ಆಗ ಮೋಶೆ, ಸರ್ವೇಶ್ವರ ಸ್ವಾಮಿ ತನ್ನನ್ನು ಕಳಿಸುವಾಗ ಯಾವ ಮಾತುಗಳನ್ನು ಹೇಳಿದರೋ ಏನೇನು ಸೂಚಕಕಾರ್ಯಗಳು ಮಾಡಬೇಕೆಂದು ಆಜ್ಞಾಪಿಸಿದರೋ ಅವುಗಳನ್ನೆಲ್ಲ ಆರೋನನಿಗೆ ತಿಳಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)28 ಆಗ ಮೋಶೆ, ತನ್ನನ್ನು ಯೆಹೋವನು ಯಾವ ಮಾತುಗಳನ್ನು ಹೇಳುವದಕ್ಕೆ ಕಳುಹಿಸಿದನೋ ಯಾವ ಮಹತ್ಕಾರ್ಯಗಳನ್ನು ಮಾಡುವದಕ್ಕೆ ಆಜ್ಞಾಪಿಸಿದನೋ ಅವುಗಳನ್ನೆಲ್ಲಾ ಆರೋನನಿಗೆ ತಿಳಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ28 ಆಗ ಮೋಶೆಯು ಆರೋನನಿಗೆ ತನ್ನನ್ನು ಕಳುಹಿಸಿದ ಯೆಹೋವ ದೇವರ ಎಲ್ಲಾ ಮಾತುಗಳನ್ನೂ ತನಗೆ ಆಜ್ಞಾಪಿಸಿದ ಎಲ್ಲಾ ಸೂಚಕಕಾರ್ಯಗಳನ್ನೂ ತಿಳಿಸಿದನು. ಅಧ್ಯಾಯವನ್ನು ನೋಡಿ |