ವಿಮೋಚನಕಾಂಡ 39:13 - ಪರಿಶುದ್ದ ಬೈಬಲ್13 ನಾಲ್ಕನೆಯ ಸಾಲಿನಲ್ಲಿ ಪೀತರತ್ನ, ಬೆರುಲ್ಲ, ವೈಡೂರ್ಯಗಳು ಇದ್ದವು. ಈ ಎಲ್ಲಾ ರತ್ನಗಳನ್ನು ಚಿನ್ನದ ಜವೆಯ ಕಲ್ಲುಗಳಲ್ಲಿ ಇಟ್ಟರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ನಾಲ್ಕನೆಯ ಸಾಲಿನಲ್ಲಿ ಪೀತರತ್ನ, ಬೆರುಲ್ಲ ಮತ್ತು ವೈಡೂರ್ಯಗಳು ಇದ್ದವು. ಈ ರತ್ನಗಳನ್ನು ಕುಂದಣಗಳಲ್ಲಿ ಇರಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)13 ನಾಲ್ಕನೆಯ ಸಾಲಿನಲ್ಲಿ ಪೀತರತ್ನ, ಬೆರುಲ್ಲ, ವೈಢೂರ್ಯಗಳೂ ಚಿನ್ನದ ಜವೆಯ ಕಲ್ಲುಗಳಲ್ಲಿ ಸೇರಿಸಲಾಗಿದ್ದವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)13 ನಾಲ್ಕನೆಯ ಸಾಲಿನಲ್ಲಿ ಪೀತರತ್ನ ಬೆರುಲ್ಲ ವೈಡೂರ್ಯಗಳೂ ಚಿನ್ನದ ಜವೆಯ ಕಲ್ಲಿಗಳಲ್ಲಿ ಸೇರಿಸಲ್ಪಟ್ಟವು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ13 ನಾಲ್ಕನೆಯ ಸಾಲಿನಲ್ಲಿ ಪೀತರತ್ನ, ಗೋಮೇಧಿಕ, ಸೂರ್ಯಕಾಂತ ಶಿಲೆ ಇವುಗಳನ್ನು ಬಂಗಾರದ ಜವೆಯ ಕಲ್ಲುಗಳಲ್ಲಿ ಸೇರಿಸಲಾಗಿದ್ದವು. ಅಧ್ಯಾಯವನ್ನು ನೋಡಿ |
ದೇವಾಲಯವನ್ನು ಕಟ್ಟಲು ಅದಕ್ಕೆ ಬೇಕಾದ ಬೆಳ್ಳಿ, ಬಂಗಾರ, ತಾಮ್ರ ಮುಂತಾದವುಗಳನ್ನು ಬಹು ಪ್ರಯಾಸದಿಂದ ಶೇಖರಿಸಿದ್ದೇನೆ. ಬಂಗಾರದಿಂದ ಮಾಡಬೇಕಾದ ಸಾಮಗ್ರಿಗಳಿಗೆ ಬೇಕಾದ ಬಂಗಾರವನ್ನು ಕೊಟ್ಟಿರುತ್ತೇನೆ. ಬೆಳ್ಳಿಯಿಂದ ತಯಾರಿಸಬೇಕಾದ ಸಾಮಗ್ರಿಗಳಿಗೆ ತಗಲುವ ಬೆಳ್ಳಿಯನ್ನು ಕೊಟ್ಟಿರುತ್ತೇನೆ. ಹಾಗೆಯೇ ತಾಮ್ರದ ವಸ್ತುಗಳಿಗೆ ಬೇಕಾಗುವ ತಾಮ್ರವನ್ನು ಕೊಟ್ಟಿದ್ದೇನೆ; ಕಬ್ಬಿಣದ ವಸ್ತುಗಳಿಗೆ ಬೇಕಾಗುವ ಕಬ್ಬಿಣವನ್ನು ಕೊಟ್ಟಿದ್ದೇನೆ; ಮರದಿಂದ ಮಾಡುವ ಸಾಮಗ್ರಿಗಳಿಗೆ ಬೇಕಾಗುವ ಮರವನ್ನು ಕೊಟ್ಟಿದ್ದೇನೆ; ನೀಲಿ ಬಣ್ಣದ ರತ್ನಗಳನ್ನು, ಚೌಕಟ್ಟಿಗೆ ಬೇಕಾದ ರತ್ನಗಳನ್ನು, ಹೊಳೆಯುವ ನಾನಾಬಣ್ಣದ ಹರಳುಗಳನ್ನು, ಬಿಳಿಬಣ್ಣದ ಹಾಲುಗಲ್ಲುಗಳನ್ನು ಬೇಕಾದಷ್ಟು ಸಂಗ್ರಹಿಸಿಟ್ಟಿದ್ದೇನೆ.