ವಿಮೋಚನಕಾಂಡ 36:1 - ಪರಿಶುದ್ದ ಬೈಬಲ್1 “ಆದ್ದರಿಂದ ಬೆಚಲೇಲನೂ ಒಹೊಲೀಯಾಬನೂ ಮತ್ತು ಇತರ ಎಲ್ಲಾ ನಿಪುಣರೂ ಯೆಹೋವನು ಆಜ್ಞಾಪಿಸಿದ ಕೆಲಸವನ್ನು ಮಾಡಬೇಕು. ಈ ಪವಿತ್ರಸ್ಥಳವನ್ನು ಕಟ್ಟುವುದಕ್ಕಾಗಿ ಅವಶ್ಯವಿರುವ ಎಲ್ಲಾ ಸೂಕ್ಷ್ಮವಾದ ಕೆಲಸವನ್ನು ಮಾಡುವುದಕ್ಕೆ ಯೆಹೋವನು ಈ ಜನರಿಗೆ ಜ್ಞಾನವನ್ನೂ ತಿಳುವಳಿಕೆಯನ್ನೂ ಅನುಗ್ರಹಿಸಿದ್ದಾನೆ.” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 “ಬೆಚಲೇಲನು ಹಾಗೂ ಒಹೋಲೀಯಾಬನು ಮತ್ತು ಬೇರೆ ಜ್ಞಾನಿಗಳೆಲ್ಲರು ಅಂದರೆ ಯೆಹೋವನಿಂದ ಜ್ಞಾನವಿವೇಕಗಳನ್ನು ಹೊಂದಿ ಪವಿತ್ರ ದೇವಮಂದಿರವನ್ನು ನಿರ್ಮಾಣ ಮಾಡುವ ಕೆಲಸಕ್ಕಾಗಿ ಬೇಕಾದ ಸಕಲವಿಧವಾದ ವಸ್ತುಗಳನ್ನು ಮಾಡುವ ಕ್ರಮ ತಿಳಿದಿರುವವರು, ಯೆಹೋವನು ಆಜ್ಞಾಪಿಸಿದ ಪ್ರಕಾರವೇ ಎಲ್ಲವನ್ನೂ ಮಾಡುವರು” ಅಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 “ಬೆಚಲೇಲನು ಮತ್ತು ಒಹೋಲೀಯಾಬನು ಎಲ್ಲವನ್ನು ಸರ್ವೇಶ್ವರ ಸ್ವಾಮಿ ಆಜ್ಞಾಪಿಸಿದ ಪ್ರಕಾರವೇ ಮಾಡುವರು. ಬೇರೆ ಕಲೆಗಾರರು, ಅಂದರೆ ಸರ್ವೇಶ್ವರನಿಂದ ಜ್ಞಾನವಿವೇಕಗಳನ್ನು ಹೊಂದಿ, ದೇವಮಂದಿರವನ್ನು ನಿರ್ಮಿಸುವ ಕೆಲಸಕ್ಕೆ ಬೇಕಾದ ಸಕಲವಿಧ ವಸ್ತುಗಳನ್ನು ಮಾಡುವ ಕ್ರಮ ತಿಳಿದಿರುವವರು, ಅವರೊಂದಿಗೆ ಕೆಲಸ ಮಾಡುವರು,” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ಬೆಚಲೇಲನೂ ಒಹೊಲೀಯಾಬನೂ ಎಲ್ಲವನ್ನು ಯೆಹೋವನು ಆಜ್ಞಾಪಿಸಿದ ಪ್ರಕಾರವೇ ಮಾಡುವರು; ಮತ್ತು ಬೇರೆ ಜಾಣರೆಲ್ಲರು, ಅಂದರೆ ಯೆಹೋವನಿಂದ ಜ್ಞಾನವಿವೇಕಗಳನ್ನು ಹೊಂದಿ ದೇವಮಂದಿರವನ್ನು ನಿರ್ಮಿಸುವ ಕೆಲಸಕ್ಕೋಸ್ಕರ ಬೇಕಾದ ಸಕಲವಿಧವಾದ ವಸ್ತುಗಳನ್ನು ಮಾಡುವ ಕ್ರಮತಿಳಿದಿರುವವರು, ಅವರೊಂದಿಗೆ ಕೆಲಸಮಾಡುವರು ಅಂದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ1 ತರುವಾಯ ಬೆಚಲಯೇಲ್ ಮತ್ತು ಒಹೋಲಿಯಾಬನೂ ಯೆಹೋವ ದೇವರು ಆಜ್ಞಾಪಿಸಿದಂತೆಯೇ ಎಲ್ಲವುಗಳನ್ನು ಮಾಡುವರು. ಅವರು ಪರಿಶುದ್ಧಸ್ಥಳದ ಸೇವೆಗೋಸ್ಕರ ಎಲ್ಲಾ ವಿಧವಾದ ಕೆಲಸವನ್ನು ಯೆಹೋವ ದೇವರಿಂದ ಜ್ಞಾನ ವಿವೇಕಗಳನ್ನು ಹೊಂದಿದ ಇತರರೊಂದಿಗೆ ಕೆಲಸಮಾಡುವರು,” ಎಂದು ಹೇಳಿದನು. ಅಧ್ಯಾಯವನ್ನು ನೋಡಿ |
ಹೀರಾಮನ ತಾಯಿಯು ನಫ್ತಾಲಿ ಕುಲದವಳಾಗಿದ್ದಳು ಮತ್ತು ಇಸ್ರೇಲಿನವಳಾಗಿದ್ದಳು. ಅವನ ದಿವಂಗತ ತಂದೆಯು ತೂರಿನವನಾಗಿದ್ದನು. ಹೀರಾಮನು ಹಿತ್ತಾಳೆಯಿಂದ ವಸ್ತುಗಳನ್ನು ತಯಾರಿಸುತ್ತಿದ್ದನು. ಅವನು ಕುಶಲಕರ್ಮಿಯೂ ಅನುಭವಿಯೂ ಆದ ಕೆಲಸಗಾರನಾಗಿದ್ದನು. ರಾಜನಾದ ಸೊಲೊಮೋನನು ಹೀರಾಮನಿಗೆ ಬರಲು ಹೇಳಿದಾಗ, ಅವನು ಒಪ್ಪಿಕೊಂಡನು. ರಾಜನಾದ ಸೊಲೊಮೋನನು ಎಲ್ಲಾ ಹಿತ್ತಾಳೆಯ ಕಾರ್ಯಗಳಿಗೆ ಹೀರಾಮನನ್ನು ಮೇಲ್ವಿಚಾರಕನನ್ನಾಗಿ ನೇಮಿಸಿದನು. ಹೀರಾಮನು ಹಿತ್ತಾಳೆಯ ವಸ್ತುಗಳನ್ನು ನಿರ್ಮಿಸಿದನು.