Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 35:27 - ಪರಿಶುದ್ದ ಬೈಬಲ್‌

27 ನಾಯಕರು ಗೋಮೇಧಿಕ ರತ್ನಗಳನ್ನು ಮತ್ತು ಇತರ ರತ್ನಗಳನ್ನು ತಂದುಕೊಟ್ಟರು. ಅವುಗಳನ್ನು ಯಾಜಕನ ಏಫೋದಿಗೂ ಮತ್ತು ದೈವನಿರ್ಣಯದ ಪದಕಕ್ಕೂ ಉಪಯೋಗಿಸಲಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಅಧಿಪತಿಗಳು ಏಫೋದ್ ಕವಚಕ್ಕೆ ಬೇಕಾದ ಗೋಮೇಧಕ ರತ್ನಗಳನ್ನು, ಎದೆಪದಕದಲ್ಲಿ ಇಡಬೇಕಾದ ರತ್ನಗಳನ್ನು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 ಜನನಾಯಕರು ಮಹಾಯಾಜಕನ ಕವಚಕ್ಕೆ ಬೇಕಾದ ಗೋಮೇಧಕ ರತ್ನಗಳನ್ನು, ವಕ್ಷ ಕವಚದಲ್ಲಿ ಖಚಿಸಬೇಕಾದ ರತ್ನಗಳನ್ನು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಅಧಿಪತಿಗಳು ಮಹಾಯಾಜಕನ ಕವಚಕ್ಕೆ ಬೇಕಾದ ಗೋಮೇಧಕ ರತ್ನಗಳನ್ನೂ ಚೀಲದ ಪದಕದಲ್ಲಿ ಕೆತ್ತಬೇಕಾದ ರತ್ನಗಳನ್ನೂ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 ಅಧಿಪತಿಗಳು ಏಫೋದಿನಲ್ಲಿಯೂ ಎದೆಪದಕದಲ್ಲಿಯೂ ಕೂಡ್ರಿಸುವುದಕ್ಕೆ ಗೋಮೇಧಿಕಗಳನ್ನೂ ರತ್ನಗಳನ್ನೂ

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 35:27
6 ತಿಳಿವುಗಳ ಹೋಲಿಕೆ  

ಈ ಗುಂಪು ಜೆರುಸಲೇಮಿನಲ್ಲಿದ್ದ ದೇವಾಲಯದ ಬಳಿ ಬಂದಾಗ ಆ ದೇವಾಲಯವನ್ನು ಮತ್ತೆ ನಿರ್ಮಿಸಲು ಕುಟುಂಬದ ನಾಯಕರುಗಳು ತಮ್ಮತಮ್ಮ ಕಾಣಿಕೆಗಳನ್ನು ಕೊಟ್ಟರು. ಕೆಡವಲ್ಪಟ್ಟಿದ್ದ ದೇವಾಲಯದ ಸ್ಥಳದಲ್ಲಿಯೇ ಹೊಸ ದೇವಾಲಯವನ್ನು ಕಟ್ಟಲು ಪ್ರಾರಂಭಿಸುವರು.


ಆಗ ಇಸ್ರೇಲರ ಕುಲಪ್ರಧಾನರು, ಕುಟುಂಬಗಳ ನಾಯಕರು, ಪ್ರಧಾನಸೇನಾಧಿಪತಿಗಳು, ಸೇನಾಧಿಪತಿಗಳು, ರಾಜನ ಕೆಲಸಕ್ಕಾಗಿ ನೇಮಕಗೊಂಡಿದ್ದ ಅಧಿಕಾರಿಗಳು, ತಮ್ಮಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಕೊಟ್ಟರು.


ಏಫೋದಿನಲ್ಲಿ ಮತ್ತು ದೈವನಿರ್ಣಯದ ಪದಕದಲ್ಲಿ ಹಾಕಬೇಕಾಗಿರುವ ಗೋಮೇಧಿಕ ರತ್ನಗಳು ಮತ್ತು ಇತರ ರತ್ನಗಳನ್ನು ತನ್ನಿರಿ.


ಏಪೋದಿಗೆ ದೈವನಿರ್ಣಯದ ಪದಕಚೀಲಕ್ಕೆ ಬೇಕಾದ ಗೋಮೇಧಕರತ್ನಗಳು ಮತ್ತು ಇತರ ರತ್ನಗಳು” ಎಂದು ಹೇಳಿದನು.


ನಿಪುಣರಾಗಿದ್ದ ಇತರ ಸ್ತ್ರೀಯರು ಆಡುಕೂದಲಿನಿಂದ ಬಟ್ಟೆಯನ್ನು ತಯಾರಿಸಿದರು.


ಜನರು ಸುಗಂಧದ್ರವ್ಯಗಳನ್ನೂ ಆಲಿವ್ ಎಣ್ಣೆಯನ್ನೂ ತಂದುಕೊಟ್ಟರು. ಈ ವಸ್ತುಗಳು ಪರಿಮಳಧೂಪ, ಅಭಿಷೇಕತೈಲ ಮತ್ತು ದೀಪಗಳಿಗೆ ಬೇಕಾದ ಎಣ್ಣೆ ಇವುಗಳನ್ನು ಮಾಡಲು ಉಪಯೋಗಿಸಲ್ಪಟ್ಟವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು