Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 35:23 - ಪರಿಶುದ್ದ ಬೈಬಲ್‌

23 ಪ್ರತಿಯೊಬ್ಬನು ತನ್ನಲ್ಲಿದ್ದ ಶ್ರೇಷ್ಠ ನಾರುಬಟ್ಟೆಯನ್ನು, ನೀಲಿ, ನೇರಳೆ ಮತ್ತು ಕೆಂಪುದಾರಗಳನ್ನು ಯೆಹೋವನಿಗಾಗಿ ತಂದನು. ಯಾರಲ್ಲಿ ಕೆಂಪುಬಣ್ಣದ ಕುರಿದೊಗಲಾಗಲಿ ಕಡಲುಹಂದಿಯ ತೊಗಲಾಗಲಿ ಇದ್ದವೋ ಅವರು ಅವುಗಳನ್ನು ಯೆಹೋವನಿಗಾಗಿ ತಂದುಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಯಾರಲ್ಲಿ ನೀಲಿ, ನೇರಳೆ ಹಾಗು ಕಡುಗೆಂಪು ವರ್ಣಗಳುಳ್ಳ ದಾರಗಳು, ನಾರುಬಟ್ಟೆಯು, ಉಣ್ಣೆ ಬಟ್ಟೆಯು, ಹದಮಾಡಿದ ಕೆಂಪುಬಣ್ಣದ ಟಗರಿನ ತೊಗಲುಗಳು ಹಾಗು ಕಡಲಪ್ರಾಣಿಯ ತೊಗಲುಗಳು ಇದ್ದವೋ ಅವರು ಅವುಗಳನ್ನು ತಂದುಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಯಾರಲ್ಲಿ ನೀಲಿ, ಧೂಮ, ಹಾಗು ರಕ್ತವರ್ಣಗಳುಳ್ಳ ದಾರಗಳು, ನಯವಾದ ನಾರುಬಟ್ಟೆ, ಆಡುಕೂದಲಿನ ಬಟ್ಟೆ, ಹದಮಾಡಿದ ಕೆಂಪುಬಣ್ಣದ ಕುರಿದೊಗಲು ಹಾಗು ಕಡಲುಹಂದಿಯ ತೊಗಲು ಇದ್ದವೋ ಅವರು ಅವುಗಳನ್ನು ತಂದುಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಯಾರಲ್ಲಿ ನೀಲಿಧೂಮ್ರ ರಕ್ತವರ್ಣಗಳುಳ್ಳ ದಾರಗಳೂ ನಾರುಬಟ್ಟೆಯೂ ಆಡುಕೂದಲಿನ ಬಟ್ಟೆಯೂ ಹದಮಾಡಿದ ಕೆಂಪುಬಣ್ಣದ ಕುರಿದೊಗಲುಗಳೂ ಕಡಲುಹಂದಿಯ ತೊಗಲುಗಳೂ ಇದ್ದವೋ ಅವರು ಅವುಗಳನ್ನು ತಂದುಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ನೀಲಿ, ಧೂಮ್ರ, ರಕ್ತವರ್ಣ ದಾರಗಳೂ ನಯವಾದ ನಾರುಮಡಿ, ಮೇಕೆಯ ಕೂದಲು, ಟಗರುಗಳ ಕೆಂಪು ಬಣ್ಣದ ಚರ್ಮಗಳೂ ಕಡಲುಹಂದಿಯ ಚರ್ಮಗಳೂ ಯಾರ ಬಳಿಯಲ್ಲಿದ್ದವೋ ಅವರೆಲ್ಲರೂ ತಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 35:23
6 ತಿಳಿವುಗಳ ಹೋಲಿಕೆ  

ಯಾರ ಬಳಿಯಲ್ಲಿ ಬೆಲೆಬಾಳುವ ರತ್ನಗಳಿದ್ದವೋ ಅವುಗಳನ್ನು ದೇವರ ಆಲಯಕ್ಕಾಗಿ ಸಮರ್ಪಿಸಿದರು. ಗೇರ್ಷೋನ್ ಸಂತತಿಯವನಾದ ಯೆಹೀಯೇಲನು ಅವುಗಳನ್ನು ತನ್ನ ವಶಕ್ಕೆ ತೆಗೆದುಕೊಂಡನು.


ಕಾಣಿಕೆ ಕೊಡುವುದಕ್ಕೆ ಬಯಸಿದ ಎಲ್ಲಾ ಗಂಡಸರು, ಹೆಂಗಸರು ಎಲ್ಲಾ ವಿಧದ ಚಿನ್ನದ ಆಭರಣಗಳನ್ನು ತಂದರು. ಅವರು ತಮ್ಮ ಕಡಗ, ಮೂಗುತಿ, ಉಂಗುರ, ಕಂಠಮಾಲೆ ಮತ್ತು ಇತರ ಚಿನ್ನದ ಆಭರಣಗಳನ್ನು ತಂದರು. ಅವರೆಲ್ಲರು ತಮ್ಮ ಎಲ್ಲಾ ಕೊಡುಗೆಗಳನ್ನು ಯೆಹೋವನಿಗೆ ಕೊಟ್ಟರು. ಇದು ಯೆಹೋವನಿಗೆ ಕೊಟ್ಟ ವಿಶೇಷವಾದ ಕಾಣಿಕೆಯಾಗಿತ್ತು.


ಬೆಳ್ಳಿಯನ್ನಾಗಲಿ ತಾಮ್ರವನ್ನಾಗಲಿ ಕೊಡಲು ಬಯಸಿದವರು ಅದನ್ನು ಕೆಲಸಕ್ಕೋಸ್ಕರ ಯೆಹೋವನಿಗೆ ಕಾಣಿಕೆಯಾಗಿ ತಂದರು. ಜಾಲೀಮರವನ್ನು ಹೊಂದಿದವರು ಅದನ್ನು ಯೆಹೋವನಿಗೆ ಕಾಣಿಕೆಯಾಗಿ ಕೊಟ್ಟರು.


ಯಾಜಕರು ಯೆಹೋವನ ಪವಿತ್ರಸ್ಥಳದಲ್ಲಿ ಸೇವೆ ಮಾಡುವಾಗ ಧರಿಸಿಕೊಳ್ಳತಕ್ಕ ವಿಶೇಷ ಬಟ್ಟೆಗಳನ್ನು ಮಾಡುವುದಕ್ಕೆ ಕೆಲಸಗಾರರು ನೀಲಿ, ನೇರಳೆ, ಕೆಂಪುದಾರಗಳನ್ನು ಉಪಯೋಗಿಸಿದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಅವರು ಆರೋನನಿಗೆ ವಿಶೇಷ ಬಟ್ಟೆಗಳನ್ನು ಮಾಡಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು