Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 34:16 - ಪರಿಶುದ್ದ ಬೈಬಲ್‌

16 ನೀವು ಅವರ ಪುತ್ರಿಯರಲ್ಲಿ ಕೆಲವರನ್ನು ನಿಮ್ಮ ಪುತ್ರರಿಗೆ ಹೆಂಡತಿಯರಾಗುವುದಕ್ಕೆ ಆರಿಸಿಕೊಳ್ಳುವಿರಿ. ಅವರ ಪುತ್ರಿಯರು ಸುಳ್ಳುದೇವರುಗಳ ಸೇವೆ ಮಾಡುತ್ತಾರೆ. ನಿಮ್ಮ ಪುತ್ರರನ್ನೂ ಅವರು ಅದೇ ಸೇವೆಗೆ ನಡೆಸುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಅದಲ್ಲದೆ ನೀವು ನಿಮ್ಮ ಪುತ್ರರಿಗಾಗಿ ಅವರಲ್ಲಿ ಪುತ್ರಿಯರನ್ನು ತೆಗೆದುಕೊಳ್ಳುವುದಕ್ಕೆ ಅದು ಮಾರ್ಗವಾಗುವುದು; ತರುವಾಯ ಆ ಸೊಸೆಯರು ತವರುಮನೆಯ ದೇವತೆಗಳನ್ನು ಪೂಜಿಸುವವರಾಗಿ ನಿಮ್ಮ ಮಕ್ಕಳನ್ನೂ ಅನ್ಯದೇವರುಗಳ ಪೂಜೆ ಎಂಬ ವ್ಯಭಿಚಾರಕ್ಕೆ ಎಳೆದಾರು, ಎಚ್ಚರ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಅದೂ ಅಲ್ಲದೆ ನೀವು ನಿಮ್ಮ ಗಂಡು ಮಕ್ಕಳಿಗೆ ಅವರಲ್ಲಿ ಹೆಣ್ಣುಗಳನ್ನು ತೆಗೆದುಕೊಳ್ಳುವುದಕ್ಕೆ ಆಸ್ಪದವುಂಟಾಗುವುದು. ಅನಂತರ ಆ ಸೊಸೆಯಂದಿರು ತೌರುಮನೆಯ ದೇವತೆಗಳನ್ನು ಪೂಜಿಸುವವರಾಗಿ ನಿಮ್ಮ ಮಕ್ಕಳನ್ನು ಅನ್ಯದೇವರುಗಳ ಪೂಜೆಯೆಂಬ ವ್ಯಭಿಚಾರಕ್ಕೆ ಎಳೆಯಬಹುದು. ಆದ್ದರಿಂದ ಎಚ್ಚರಿಕೆಯಾಗಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಅದಲ್ಲದೆ ನೀವು ನಿಮ್ಮ ಗಂಡು ಮಕ್ಕಳಿಗೆ ಅವರಲ್ಲಿ ಕನ್ನಿಕೆಗಳನ್ನು ತೆಗೆದುಕೊಳ್ಳುವದಕ್ಕೆ ಆಸ್ಪದವುಂಟಾಗುವದು; ತರುವಾಯ ಆ ಸೊಸೆಯರು ತೌರಮನೆಯ ದೇವತೆಗಳನ್ನು ಪೂಜಿಸುವವರಾಗಿ ನಿಮ್ಮ ಮಕ್ಕಳನ್ನೂ ಅನ್ಯದೇವರುಗಳ ಪೂಜೆ ಎಂಬ ವ್ಯಭಿಚಾರಕ್ಕೆ ಎಳೆದಾರು, ಎಚ್ಚರ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಇದಲ್ಲದೆ ಅವರ ಪುತ್ರಿಯರನ್ನು ನಿನ್ನ ಪುತ್ರರಿಗೋಸ್ಕರ ತೆಗೆದುಕೊಳ್ಳಬೇಕಾಗಬಹುದು. ತೆಗೆದುಕೊಂಡರೆ ಅವರ ಪುತ್ರಿಯರು ತಮ್ಮ ದೇವರುಗಳನ್ನು ಆರಾಧಿಸಿ, ನಿಮ್ಮ ಪುತ್ರರನ್ನೂ ಅನ್ಯದೇವರುಗಳ ಆರಾಧನೆಯೆಂಬ ವ್ಯಭಿಚಾರಕ್ಕೆ ಎಳೆಯಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 34:16
23 ತಿಳಿವುಗಳ ಹೋಲಿಕೆ  

ಇಸ್ರೇಲ್ ಜನರು ತಮ್ಮ ಸುತ್ತಲು ವಾಸಿಸುವ ಜನರೊಂದಿಗೆ ಮದುವೆಯಾಗಿದ್ದಾರೆ. ಇಸ್ರೇಲ್ ಜನರು ದೇವರ ವಿಶೇಷ ಜನರಾಗಿದ್ದಾರೆ. ಆದರೆ ಈಗ ಅನ್ಯರೊಂದಿಗೆ ಬೆರೆತು ಹೋಗಿದ್ದಾರೆ. ಇಸ್ರೇಲರ ಪ್ರಧಾನರು, ಮುಖ್ಯಾಧಿಕಾರಿಗಳು ಈ ರೀತಿಯಾಗಿ ಮಾಡಿ ಜನರಿಗೆ ಕೆಟ್ಟ ಮಾದರಿಯಾಗಿ ಜೀವಿಸುತ್ತಿದ್ದಾರೆ” ಎಂದು ಹೇಳಿದರು.


“ನೀವು ತಪ್ಪು ಕೆಲಸಮಾಡಿದಿರಿ” ಎಂದು ಅವರನ್ನು ಶಪಿಸಿದೆನು. ಕೆಲವರಿಗೆ ಹೊಡೆದೆನು; ಕೆಲವರ ಕೂದಲು ಎಳೆದು ಕಿತ್ತುಬಿಟ್ಟೆನು. ದೇವರ ಹೆಸರಿನಲ್ಲಿ ಪ್ರತಿಜ್ಞೆ ಮಾಡಲು ಅವರನ್ನು ಒತ್ತಾಯಪಡಿಸಿ, “ನೀವು ಆ ಜನರ ಹೆಣ್ಣುಮಕ್ಕಳನ್ನು ಮದುವೆಯಾಗಬಾರದು. ಅನ್ಯರ ಹೆಣ್ಣುಮಕ್ಕಳು ನಿಮ್ಮ ಗಂಡುಮಕ್ಕಳನ್ನು ಮದುವೆಯಾಗದಂತೆ ನೋಡಿಕೊಳ್ಳಿರಿ.


ಆ ದಿನಗಳಲ್ಲಿ ಕೆಲವು ಮಂದಿ ಯೆಹೂದ್ಯರು ಅಷ್ಡೋದ್, ಅಮ್ಮೋನ್, ಮೋವಾಬ್ ಊರುಗಳಿಂದ ಹೆಣ್ಣನ್ನು ತಂದು ಮದುವೆ ಮಾಡಿಕೊಂಡದ್ದು ನನ್ನ ನೆನಪಿಗೆ ಬಂತು.


“ಯೆಹೋವನನ್ನೇ ಅನುಸರಿಸಿರಿ. ಇಸ್ರೇಲಿಗೆ ಸೇರಿಲ್ಲದ ಅನ್ಯರೊಂದಿಗೆ ಸ್ನೇಹ ಮಾಡಬೇಡಿ. ಅವರ ಜನರನ್ನು ಮದುವೆಯಾಗಬೇಡಿ. ನೀವು ಅವರೊಂದಿಗೆ ಸ್ನೇಹ ಮಾಡಿದರೆ,


ನಿಮ್ಮ ದೇವರಾದ ಯೆಹೋವನು ಶತ್ರುಗಳನ್ನು ಸೋಲಿಸಲು ನಿಮಗೆ ಸಹಾಯ ಮಾಡುವುದಿಲ್ಲ, ಅವರು ನಿಮಗೆ ಉರುಲಿನಂತಾಗುತ್ತಾರೆ. ಹೊಗೆ ಮತ್ತು ಧೂಳು ನಿಮ್ಮ ಕಣ್ಣಿಗೆ ನೋವನ್ನುಂಟು ಮಾಡುವಂತೆ ಅವರು ನಿಮಗೆ ನೋವನ್ನುಂಟು ಮಾಡುತ್ತಾರೆ; ಈ ಒಳ್ಳೆಯ ದೇಶದಿಂದ ನಿಮ್ಮನ್ನು ಬಲಾತ್ಕಾರದಿಂದ ಹೊರಗಟ್ಟಲಾಗುವುದು. ನಿಮ್ಮ ದೇವರಾದ ಯೆಹೋವನು ಈ ದೇಶವನ್ನು ನಿಮಗೆ ಕೊಟ್ಟಿದ್ದಾನೆ. ಆದರೆ ಯೆಹೋವನ ಆಜ್ಞೆಯನ್ನು ಪಾಲಿಸದಿದ್ದಲ್ಲಿ ನೀವು ಇದನ್ನು ಕಳೆದುಕೊಳ್ಳಬೇಕಾಗುತ್ತದೆ.


ಇಸ್ರೇಲರು ಅವರ ಕನ್ಯೆಯರನ್ನು ಮದುವೆಯಾಗ ತೊಡಗಿದರು ಮತ್ತು ತಮ್ಮ ಕನ್ಯೆಯರನ್ನು ಅವರ ಕುಮಾರರಿಗೆ ಮದುವೆ ಮಾಡಿಕೊಟ್ಟರು ಮತ್ತು ಅವರ ದೇವರುಗಳನ್ನು ಪೂಜಿಸಲು ಪ್ರಾರಂಭಿಸಿದರು.


ಅವನ ತಂದೆತಾಯಿಗಳು, “ಇಸ್ರೇಲರಲ್ಲಿಯೇ ಒಬ್ಬ ಸ್ತ್ರೀ ಇದ್ದಾಳೆ. ನೀನು ಅವಳನ್ನು ಮದುವೆಯಾಗು. ನೀನು ಫಿಲಿಷ್ಟಯರ ಹೆಣ್ಣನ್ನು ಮದುವೆಯಾಗುವುದೇಕೆ? ಅವರು ಸುನ್ನತಿಯನ್ನು ಮಾಡಿಸಿಕೊಂಡವರಲ್ಲ” ಎಂದರು. ಆದರೆ ಸಂಸೋನನು, “ನನಗೆ ಆಕೆಯೊಡನೇ ಮದುವೆಮಾಡಿಸಿ. ನಾನು ಆಕೆಯನ್ನೇ ಮೆಚ್ಚಿಕೊಂಡಿದ್ದೇನೆ” ಎಂದನು.


ರಾಜನಾದ ಸೊಲೊಮೋನನು ಸ್ತ್ರೀಯರನ್ನು ಪ್ರೀತಿಸಿದನು! ಅವನು ಇಸ್ರೇಲರಲ್ಲದ ಅನೇಕ ಸ್ತ್ರೀಯರನ್ನು ಪ್ರೀತಿಸಿದನು. ಇವರಲ್ಲಿ ಫರೋಹನ ಮಗಳು, ಮೋವಾಬ್ಯ, ಅಮ್ಮೋನಿಯ, ಎದೋಮ್ಯ ಚೀದೋನ್ಯ ಮತ್ತು ಹಿತ್ತಿಯ ಸ್ತ್ರೀಯರು ಸೇರಿದ್ದರು.


ಆದ್ದರಿಂದ ಇಸ್ರೇಲ್ ಜನರೇ, ನಿಮ್ಮ ಮಕ್ಕಳು ಅವರ ಮಕ್ಕಳನ್ನು ಮದುವೆಯಾಗಲು ಬಿಡಬೇಡಿ. ಅವರ ಸಹವಾಸ ಮಾಡಬೇಡಿರಿ. ಅವರ ವಸ್ತುಗಳನ್ನು ಆಶಿಸಬೇಡಿರಿ. ನನ್ನ ಕಟ್ಟಳೆಗಳನ್ನು ಪಾಲಿಸಿರಿ; ಆಗ ನೀವು ಬಲಶಾಲಿಗಳಾಗಿ ಈ ದೇಶವನ್ನು ಅನುಭವಿಸುವಿರಿ. ಈ ದೇಶವನ್ನು ನೀನು ಇಟ್ಟುಕೊಂಡವರಾಗಿ ನಿಮ್ಮ ಮಕ್ಕಳಿಗೆ ಸ್ವಾಸ್ತ್ಯವಾಗಿ ಕೊಡುವಿರಿ.’


“ನಮ್ಮ ಗಂಡು ಮತ್ತು ಹೆಣ್ಣುಮಕ್ಕಳು ನಮ್ಮ ಸುತ್ತಲಿರುವ ಅನ್ಯರನ್ನು ಮದುವೆಯಾಗಲು ಬಿಡುವುದಿಲ್ಲ” ಎಂದು ಪ್ರತಿಜ್ಞೆ ಮಾಡಿದರು.


ಕಾನಾನ್ ದೇಶದ ಕನ್ನಿಕೆಯನ್ನು ನನ್ನ ಮಗನು ಮದುವೆಯಾಗದಂತೆ ನೀನು ನೋಡಿಕೊಳ್ಳುವುದಾಗಿಯೂ


ಹೀಗಾಗಿ ಜನರು ಅವನ ಮಕ್ಕಳಿಗೆ ಗೌರವ ತೋರಿಸುವರು. ಯೆಹೋವನಾಗಿರುವ ನಾನು ಪ್ರಧಾನಯಾಜಕನನ್ನು ಅವನ ವಿಶೇಷ ಕೆಲಸಕ್ಕಾಗಿ ಪ್ರತ್ಯೇಕಿಸಿದ್ದೇನೆ.”


ಇಸ್ರೇಲರು ಕಾನಾನ್ಯ, ಹಿತ್ತಿಯ, ಅಮೋರಿಯ, ಪೆರಿಜ್ಜೀಯ, ಹಿವ್ವಿಯ, ಯೆಬೂಸಿಯ ಜನಾಂಗಗಳೊಡನೆ ವಾಸಮಾಡತೊಡಗಿದರು.


ಗಿದ್ಯೋನನು ಈ ಚಿನ್ನವನ್ನು ಒಂದು ಏಫೋದ್ ಮಾಡುವುದಕ್ಕೆ ಬಳಸಿದನು. ಆ ಏಫೋದನ್ನು ತನ್ನ ಊರಾದ ಒಫ್ರದಲ್ಲಿಟ್ಟನು. ಇಸ್ರೇಲರು ಈ ಏಫೋದನ್ನು ಆರಾಧಿಸಿದರು. ಹೀಗಾಗಿ ಇಸ್ರೇಲರು ಯೆಹೋವನಿಗೆ ನಂಬಿಗಸ್ತರಾಗಿರಲಿಲ್ಲ. ಗಿದ್ಯೋನನನ್ನು ಮತ್ತು ಅವನ ಕುಟುಂಬದವರನ್ನು ಪಾಪಮಾರ್ಗಕ್ಕೆ ಎಳೆಯಲು ಏಫೋದ್ ಒಂದು ಉರುಲಾಗಿ ಪರಿಣಮಿಸಿತು.


ಅಹಾಬನು ಮಾಡಿದಷ್ಟು ಪಾಪಗಳನ್ನು, ಇಲ್ಲವೆ ಕೆಟ್ಟಕಾರ್ಯಗಳನ್ನು ಮಾಡಿದ ಮನುಷ್ಯರು ಬೇರೆ ಯಾರೂ ಇಲ್ಲ. ಅವನು ಆ ಕಾರ್ಯಗಳನ್ನು ಮಾಡುವುದಕ್ಕೆ ಅವನ ಪತ್ನಿಯಾದ ಈಜೆಬೆಲಳು ಅವನನ್ನು ಒತ್ತಾಯಪಡಿಸಿದಳು.


ಯೆಹೋರಾಮನು ಯೆಹೂದ ರಾಜ್ಯದ ಬೆಟ್ಟಗಳ ಮೇಲೆ ಪೂಜಾಸ್ಥಳಗಳನ್ನು ಕಟ್ಟಿಸಿದನು. ಪ್ರಜೆಗಳು ದೇವರ ಚಿತ್ತಕ್ಕನುಸಾರವಾಗಿ ನಡೆಯದಂತೆ ಅವರನ್ನು ಯೆಹೋವನಿಂದ ದೂರಕ್ಕೆ ನಡೆಸಿದನು.


“ಸಬ್ಬತ್ ದಿನದಲ್ಲಿ ಯಾವ ಕೆಲಸವನ್ನೂ ಮಾಡುವುದಿಲ್ಲವೆಂದು ಪ್ರಮಾಣಮಾಡುತ್ತೇವೆ. ನಮ್ಮ ಸುತ್ತಮುತ್ತಲಿನ ಜನರು ಸಬ್ಬತ್ ದಿನದಲ್ಲಿ ಮಾರಲು ದವಸಧಾನ್ಯವನ್ನಾಗಲಿ ಬೇರೆ ವಸ್ತುಗಳನ್ನಾಗಲಿ ತಂದರೆ ನಾವು ಸಬ್ಬತ್ ದಿನದಲ್ಲಿ ಮತ್ತು ಇತರ ಯಾವುದೇ ಹಬ್ಬದ ದಿನದಲ್ಲಿ ಅವುಗಳನ್ನು ಕೊಂಡುಕೊಳ್ಳುವುದಿಲ್ಲ. ಪ್ರತಿ ಏಳನೆಯ ವರ್ಷ ನಾವು ನೆಡುವುದೂ ಇಲ್ಲ. ಹೊಲದಲ್ಲಿ ಕೆಲಸ ಮಾಡುವುದೂ ಇಲ್ಲ. ನಮಗೆ ಬೇರೆಯವರು ಕೊಡಬೇಕಾಗಿರುವ ಸಾಲವನ್ನು ಏಳನೆಯ ವರ್ಷದಲ್ಲಿ ವಜಾ ಮಾಡುತ್ತೇವೆ.


ತಮ್ಮ ಪಾಪಕೃತ್ಯಗಳಿಂದ ದೇವಜನರು ಮಲಿನಗೊಂಡರು. ಅವರು ದೇವರಿಗೆ ಅಪನಂಬಿಗಸ್ತರಾಗಿ ಅನ್ಯಜನರು ಮಾಡಿದವುಗಳನ್ನು ಮಾಡಿದರು.


ಹೋಶೇಯನಿಗೆ ಯೆಹೋವನಿಂದ ಬಂದ ಸಂದೇಶದಲ್ಲಿ ಇದು ಮೊದಲನೆಯದು. ಯೆಹೋವನು ಹೇಳಿದ್ದೇನೆಂದರೆ, “ನೀನು ಹೋಗಿ ಒಬ್ಬ ವೇಶ್ಯೆಯನ್ನು ಮದುವೆಯಾಗು. ಆ ವೇಶ್ಯೆಯಿಂದ ಮಕ್ಕಳನ್ನು ಪಡೆದುಕೊ. ಯಾಕೆಂದರೆ ಈ ದೇಶದ ಜನರು ಸೂಳೆಯಂತೆ ವರ್ತಿಸಿರುತ್ತಾರೆ. ಅವರು ಯೆಹೋವನಿಗೆ ಅಪನಂಬಿಗಸ್ತಿಕೆಯುಳ್ಳವರಾಗಿರುತ್ತಾರೆ.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು