ವಿಮೋಚನಕಾಂಡ 34:14 - ಪರಿಶುದ್ದ ಬೈಬಲ್14 ಬೇರೆ ಯಾವ ದೇವರನ್ನೂ ಪೂಜಿಸಬೇಡಿರಿ. ನಾನೇ ಯೆಹೋವನು. ‘ಸ್ವಗೌರವವನ್ನು ಕಾಪಾಡಿಕೊಳ್ಳುವವನು’ ಎಂಬುದೇ ನನ್ನ ಹೆಸರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201914 ಏಕೆಂದರೆ ತೀಕ್ಷ್ಣತೆಯುಳ್ಳವನು ಎಂಬ ಹೆಸರುಳ್ಳ ಯೆಹೋವನು ತನಗೆ ಸಲ್ಲಬೇಕಾದ ಗೌರವವನ್ನು ಮತ್ತೊಬ್ಬನಿಗೆ ಸಲ್ಲಗೊಡಿಸದ್ದರಿಂದ ನೀವು ಬೇರೆ ಯಾವ ದೇವರ ಮುಂದೆಯೂ ಅಡ್ಡಬೀಳಬಾರದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)14 ನೀವು ಬೇರೆ ದೇವರ ಮುಂದೆ ಅಡ್ಡಬೀಳಬಾರದು; ಏಕೆಂದರೆ ಸ್ವಾಭಿಮಾನಿಯೆಂಬ ಹೆಸರುಳ್ಳ ಸರ್ವೇಶ್ವರನಾದ ನಾನು ನನಗೆ ಸಲ್ಲಬೇಕಾದ ಅಭಿಮಾನವನ್ನು ಮತ್ತೊಬ್ಬನಿಗೆ ಸಲ್ಲಗೊಡಿಸುವುದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)14 ಸ್ವಗೌರವವನ್ನು ಕಾಪಾಡಿಕೊಳ್ಳುವವನು ಎಂಬ ಹೆಸರುಳ್ಳ ಯೆಹೋವನು ತನಗೆ ಸಲ್ಲಬೇಕಾದ ಗೌರವವನ್ನು ಮತ್ತೊಬ್ಬನಿಗೆ ಸಲ್ಲಗೊಡಿಸದ್ದರಿಂದ ನೀವು ಬೇರೆ ಯಾವ ದೇವರ ಮುಂದೆಯೂ ಅಡ್ಡ ಬೀಳಬಾರದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ14 ಏಕೆಂದರೆ, ‘ರೋಷವುಳ್ಳವನು,’ ಎಂದು ಹೆಸರುಳ್ಳ ಯೆಹೋವ ದೇವರು ರೋಷವುಳ್ಳ ದೇವರಾಗಿರುವುದರಿಂದ ನೀನು ಬೇರೆ ದೇವರುಗಳನ್ನು ಆರಾಧಿಸಬಾರದು. ಅಧ್ಯಾಯವನ್ನು ನೋಡಿ |
ದೇವರು ಉನ್ನತಸ್ಥಾನದಲ್ಲಿ ಎತ್ತಲ್ಪಟ್ಟಿದ್ದಾನೆ. ಆತನು ಸದಾಕಾಲ ಜೀವಿಸುತ್ತಾನೆ. ಆತನ ಹೆಸರು ಪರಿಶುದ್ಧವಾದದ್ದು. ದೇವರು ಹೇಳುವುದೇನೆಂದರೆ, “ನಾನು ಉನ್ನತಲೋಕವೆಂಬ ಪವಿತ್ರಸ್ಥಳದಲ್ಲಿ ವಾಸಿಸುತ್ತೇನೆ. ಅದೇ ಸಮಯದಲ್ಲಿ ದುಃಖಪಡುವವರೂ ದೀನರೂ ಆಗಿರುವ ಜನರೊಂದಿಗೆ ವಾಸಮಾಡುತ್ತೇನೆ. ಆತ್ಮದಲ್ಲಿ ದೀನರಾಗಿರುವವರಿಗೆ ನಾನು ಹೊಸಜನ್ಮ ಕೊಡುತ್ತೇನೆ. ಹೃದಯದಲ್ಲಿ ದುಃಖಿಸುವವರಿಗೆ ನಾನು ಹೊಸ ಜೀವ ಕೊಡುತ್ತೇನೆ.
ನಂತರ ಯೆಹೋವನು ಇಸ್ರೇಲರನ್ನು ಹೊಡೆಯುತ್ತಾನೆ. ಇಸ್ರೇಲಿನ ಜನರು ಬಹಳ ಭಯಗೊಳ್ಳುವರು. ಅವರು ನೀರಿನಲ್ಲಿ ಎತ್ತರವಾಗಿ ಬೆಳೆದಿರುವ ಹುಲ್ಲಿನಂತೆ ನಡುಗುವರು. ಯೆಹೋವನು ಇಸ್ರೇಲರನ್ನು ಈ ಶ್ರೇಷ್ಠವಾದ ದೇಶದಿಂದ ಚದರಿಸಿಬಿಡುವನು; ಆತನು ಈ ದೇಶವನ್ನು ಅವರ ಪೂರ್ವಿಕರಿಗೆ ಕೊಟ್ಟಿದ್ದನು. ಆತನು ಇಸ್ರೇಲರನ್ನು ಯೂಫ್ರೇಟೀಸ್ ನದಿಯ ಮತ್ತೊಂದು ಕಡೆಗೆ ಚದರಿಸಿಬಿಡುತ್ತಾನೆ. ಯೆಹೋವನು ಅವರ ಮೇಲೆ ಕೋಪಗೊಂಡಿರುವುದೇ ಅದಕ್ಕೆ ಕಾರಣ. ಅವರು ಅಶೇರ್ ವಿಗ್ರಹವನ್ನು ಆರಾಧಿಸಲು ವಿಶೇಷ ಸ್ತಂಭಗಳನ್ನು ಮಾಡಿಕೊಂಡಿದ್ದರಿಂದ ಆತನು ಅವರ ಮೇಲೆ ಕೋಪಗೊಂಡನು.
ಎಲೀಯನು, “ಸರ್ವಶಕ್ತನಾದ ಯೆಹೋವ ದೇವರೇ, ನಾನು ಯಾವಾಗಲೂ ನಿನ್ನ ಸೇವೆಯನ್ನು ಮಾಡಿದೆನು. ನಾನು ನನ್ನಿಂದ ಸಾಧ್ಯವಾದಷ್ಟು ಉತ್ತಮವಾಗಿ ನಿನ್ನ ಸೇವೆಯನ್ನು ಮಾಡಿದೆನು. ಆದರೆ ಇಸ್ರೇಲಿನ ಜನರು ನಿನ್ನೊಂದಿಗೆ ತಾವು ಮಾಡಿಕೊಂಡ ಒಡಂಬಡಿಕೆಯನ್ನು ಉಲ್ಲಂಘಿಸಿದರು. ಅವರು ನಿನ್ನ ಯಜ್ಞವೇದಿಕೆಗಳನ್ನು ನಾಶಪಡಿಸಿದರು. ಅವರು ನಿನ್ನ ಪ್ರವಾದಿಗಳನ್ನು ಕೊಂದುಹಾಕಿದರು. ಇನ್ನೂ ಜೀವಂತವಾಗಿರುವ ಪ್ರವಾದಿಯು ನಾನೊಬ್ಬನು ಮಾತ್ರ. ಅವರು ಈಗ ನನ್ನನ್ನೂ ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ!” ಎಂದು ಹೇಳಿದನು.