ವಿಮೋಚನಕಾಂಡ 32:20 - ಪರಿಶುದ್ದ ಬೈಬಲ್20 ಬಳಿಕ ಮೋಶೆಯು ಆ ಬಸವನ ಮೂರ್ತಿಯನ್ನು ಬೆಂಕಿಯಲ್ಲಿ ಕರಗಿಸಿ ಅದರ ಚಿನ್ನವನ್ನು ಧೂಳಿನಂತೆ ಅರೆದು ನೀರಿಗೆ ಹಾಕಿ ಆ ನೀರನ್ನು ಇಸ್ರೇಲರಿಗೆ ಕುಡಿಸಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201920 ಜನರು ಮಾಡಿಸಿಕೊಂಡಿದ್ದ ಹೋರಿಕರುವನ್ನು ಅವನು ಬೆಂಕಿಯಿಂದ ಸುಟ್ಟು ಅರೆದು ಪುಡಿ ಪುಡಿ ಮಾಡಿ ನೀರಿನಲ್ಲಿ ಕಲಸಿ ಇಸ್ರಾಯೇಲರಿಗೆ ಆ ನೀರನ್ನು ಕುಡಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)20 ಜನರು ಮಾಡಿಸಿಕೊಂಡಿದ್ದ ಆ ಹೋರಿಕರುವನ್ನು ತೆಗೆದು ಬೆಂಕಿಯಿಂದ ಸುಟ್ಟು, ಅರೆದು, ಪುಡಿಪುಡಿಮಾಡಿ, ನೀರಿನಲ್ಲಿ ಕಲಸಿ, ಇಸ್ರಯೇಲರಿಗೆ ಆ ನೀರನ್ನು ಕುಡಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)20 ಜನರು ಮಾಡಿಸಿಕೊಂಡಿದ್ದ ಬಸವನನ್ನು ಅವನು ಹಿಡಿದು ಬೆಂಕಿಯಿಂದ ಸುಟ್ಟು ಅರೆದು ಪುಡಿಪುಡಿಮಾಡಿ ನೀರಿನ ಮೇಲೆ ಚೆಲ್ಲಿ ಇಸ್ರಾಯೇಲ್ಯರಿಗೆ ಆ ನೀರನ್ನು ಕುಡಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ20 ಅವರು ಮಾಡಿದ ಕರುವನ್ನು ಅವನು ತೆಗೆದುಕೊಂಡು, ಅದನ್ನು ಬೆಂಕಿಯಿಂದ ಸುಟ್ಟು ಪುಡಿಯಾಗುವವರೆಗೆ ಅರೆದು ನೀರಿನ ಮೇಲೆ ಚೆಲ್ಲಿ, ಆ ನೀರನ್ನು ಇಸ್ರಾಯೇಲರು ಕುಡಿಯುವಂತೆ ಮಾಡಿದನು. ಅಧ್ಯಾಯವನ್ನು ನೋಡಿ |
ಯೋಷೀಯನು ಬೇತೇಲಿನ ಉನ್ನತಸ್ಥಳವನ್ನು ಮತ್ತು ಯಜ್ಞವೇದಿಕೆಯನ್ನು ಕೆಡವಿಬಿಟ್ಟನು. ನೆಬಾಟನ ಮಗನಾದ ಯಾರೊಬ್ಬಾಮನು ಈ ಯಜ್ಞವೇದಿಕೆಯನ್ನು ನಿರ್ಮಿಸಿದ್ದನು. ಇಸ್ರೇಲರು ಪಾಪಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದ್ದನು. ಯೋಷೀಯನು ಯಜ್ಞವೇದಿಕೆಯನ್ನು ಮತ್ತು ಉನ್ನತಸ್ಥಳವನ್ನು ಕೆಡವಿಬಿಟ್ಟನು. ಯೋಷೀಯನು ಯಜ್ಞವೇದಿಕೆಯ ಕಲ್ಲುಗಳನ್ನು ಪುಡಿಪುಡಿಮಾಡಿ ಧೂಳಿನಲ್ಲಿ ಬೆರಸಿದನು. ಅವನು ಅಶೇರಸ್ತಂಭವನ್ನು ಸುಟ್ಟುಹಾಕಿದನು.