ವಿಮೋಚನಕಾಂಡ 30:1 - ಪರಿಶುದ್ದ ಬೈಬಲ್1 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಜಾಲೀಮರದಿಂದ ಧೂಪವೇದಿಕೆಯನ್ನು ಮಾಡಿಸು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 “ಸುಗಂಧದ್ರವ್ಯಗಳಿಂದ ಧೂಪಹಾಕುವುದಕ್ಕೆ ನೀವು ಜಾಲೀಮರದಿಂದ ಒಂದು ಧೂಪವೇದಿಯನ್ನು ಮಾಡಿಸಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 “ಸುಗಂಧದ್ರವ್ಯಗಳಿಂದ ಧೂಪ ಹಾಕುವುದಕ್ಕಾಗಿ ಜಾಲೀಮರದ ಒಂದು ವೇದಿಕೆಯನ್ನು ಮಾಡಿಸು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ಸುಗಂಧದ್ರವ್ಯಗಳಿಂದ ಧೂಪಹಾಕುವದಕ್ಕೆ ಜಾಲೀಮರದ ಧೂಪವೇದಿಯನ್ನು ಮಾಡಿಸಬೇಕು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ1 “ನೀನು ಜಾಲಿ ಮರದ ಕಟ್ಟಿಗೆಯಿಂದ ಧೂಪವೇದಿಯನ್ನು ಮಾಡಬೇಕು. ಅಧ್ಯಾಯವನ್ನು ನೋಡಿ |
ಮಹಾ ಪವಿತ್ರಸ್ಥಳದಲ್ಲಿ ಧೂಪವನ್ನು ಸುಡುವುದಕ್ಕಾಗಿ ಬಂಗಾರದ ಯಜ್ಞವೇದಿಕೆಯಿತ್ತು. ಅಲ್ಲದೆ ಮೊದಲನೆ ಒಡಂಬಡಿಕೆಯನ್ನು ಇಡಲಾಗಿದ್ದ ಪವಿತ್ರ ಪೆಟ್ಟಿಗೆಯಿತ್ತು. ಅದಕ್ಕೆ ಚಿನ್ನದ ತಗಡನ್ನು ಹೊದಿಸಲಾಗಿತ್ತು. ಅದರ ಒಳಗಡೆ ಚಿನ್ನದ ಪಾತ್ರೆಯಲ್ಲಿಟ್ಟಿದ್ದ ಮನ್ನಾ ಮತ್ತು ಒಂದಾನೊಂದು ಕಾಲದಲ್ಲಿ ಚಿಗುರಿ ಎಲೆಗಳನ್ನು ಬಿಟ್ಟಿದ್ದ ಆರೋನನ ಕೋಲು ಇದ್ದವು. ಅಲ್ಲದೆ ಆ ಮೊದಲನೆ ಒಡಂಬಡಿಕೆಯ ಹತ್ತು ಆಜ್ಞೆಗಳನ್ನು ಬರೆಯಲಾಗಿದ್ದ ಕಲ್ಲಿನ ಹಲಗೆಗಳನ್ನು ಅದರಲ್ಲಿ ಇಡಲಾಗಿತ್ತು.
ದೇವಾಲಯಕ್ಕಾಗಿ ಅನೇಕ ವಸ್ತುಗಳನ್ನು ಬಂಗಾರದಿಂದ ಮಾಡಲು ಸೊಲೊಮೋನನು ಆಜ್ಞಾಪಿಸಿದನು. ದೇವಾಲಯಕ್ಕಾಗಿ ಸೊಲೊಮೋನನು ಬಂಗಾರದಿಂದ ಮಾಡಿಸಿದ ವಸ್ತುಗಳು ಹೀಗಿವೆ: ಬಂಗಾರದ ಯಜ್ಞವೇದಿಕೆ; ಬಂಗಾರದ ಮೇಜು (ದೇವರಿಗೆ ವಿಶೇಷ ರೊಟ್ಟಿಯನ್ನು ಈ ಮೇಜಿನ ಮೇಲೆ ಅರ್ಪಿಸುತ್ತಾರೆ); ಅಪ್ಪಟ ಬಂಗಾರದ ದೀಪಸ್ತಂಭಗಳು (ಮಹಾ ಪವಿತ್ರಸ್ಥಳದ ಎದುರಿನಲ್ಲಿ ದಕ್ಷಿಣದ ಕಡೆಗೆ ಐದು ಮತ್ತು ಉತ್ತರದ ಕಡೆಗೆ ಐದು.) ಬಂಗಾರದ ಹೂಗಳು, ಹಣತೆಗಳು ಮತ್ತು ಇಕ್ಕುಳಗಳು; ಅಪ್ಪಟ ಬಂಗಾರದ ಬಟ್ಟಲುಗಳು; ದೀಪಗಳನ್ನು ಪ್ರಕಾಶಮಾನವಾಗಿ ಮಾಡಲು ಉಪಯೋಗಿಸುವ ಉಪಕರಣಗಳು; ಚಿಕ್ಕ ಗಂಗಾಳಗಳು; ಚಪ್ಪಟೆಯಾದ ಲೋಹದಿಂದ ಮಾಡಿದ ಪಾತ್ರೆಗಳು; ಬೂದಿಯನ್ನು ತೆಗೆದುಕೊಂಡು ಹೋಗಲು ಶುದ್ಧಬಂಗಾರದ ಪಾತ್ರೆಗಳು; ದೇವಾಲಯದ ಪ್ರವೇಶದ್ವಾರದ ಬಾಗಿಲುಗಳು.
ಆದರೆ ಸರ್ವಾಂಗಹೋಮ ಅರ್ಪಿಸುವ ಯಜ್ಞವೇದಿಕೆಯ ಮೇಲೆ ಮತ್ತು ಧೂಪಾರ್ಪಣೆಯ ಯಜ್ಞವೇದಿಕೆಯ ಮೇಲೆ ಧೂಪವರ್ಪಿಸಲು ಆರೋನನ ಸಂತತಿಯವರನ್ನು ಮಾತ್ರ ಆರಿಸಿಕೊಳ್ಳಲಾಗಿತ್ತು. ದೇವರ ನಿವಾಸದ ಮಹಾಪವಿತ್ರ ಸ್ಥಳದಲ್ಲಿ ಆರೋನನ ಸಂತತಿಯವರೇ ಎಲ್ಲಾ ಕೆಲಸಕಾರ್ಯಗಳನ್ನು ಮಾಡುತ್ತಿದ್ದರು. ಅಲ್ಲದೆ ಇಸ್ರೇಲ್ ಜನರನ್ನು ಶುದ್ಧೀಕರಿಸಲು ಶುದ್ಧೀಕರಣ ಆಚಾರವನ್ನು ಅವರೇ ಮಾಡುತ್ತಿದ್ದರು. ದೇವರ ಸೇವಕನಾದ ಮೋಶೆಯು ಆಜ್ಞಾಪಿಸಿದ ಎಲ್ಲಾ ಕಟ್ಟಳೆಗಳನ್ನು ಮತ್ತು ನಿಯಮಗಳನ್ನು ಅವರು ಅನುಸರಿಸುತ್ತಿದ್ದರು.