ವಿಮೋಚನಕಾಂಡ 29:34 - ಪರಿಶುದ್ದ ಬೈಬಲ್34 ಟಗರಿನ ಮಾಂಸ ಅಥವಾ ರೊಟ್ಟಿಯೇನಾದರೂ ಮರುದಿನ ಮುಂಜಾನೆಯವರೆಗೆ ಉಳಿದರೆ, ಅದನ್ನು ಸುಟ್ಟುಬಿಡಬೇಕು. ನೀವು ಆ ರೊಟ್ಟಿಯನ್ನಾಗಲಿ ಮಾಂಸವನ್ನಾಗಲಿ ತಿನ್ನಬಾರದು. ಯಾಕೆಂದರೆ ಅದನ್ನು ವಿಶೇಷವಾದ ಸಂದರ್ಭದಲ್ಲಿ ವಿಶೇಷವಾದ ರೀತಿಯಲ್ಲಿ ಮಾತ್ರ ತಿನ್ನಬೇಕು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201934 ಪ್ರತಿಷ್ಠೆಗೆ ಸಂಬಂಧಪಟ್ಟ ಮಾಂಸದಲ್ಲಾಗಲಿ, ರೊಟ್ಟಿಯಲ್ಲಾಗಲಿ ಏನಾದರೂ ಮರುದಿನದ ಉದಯದ ವರೆಗೆ ಉಳಿದರೆ ಅದನ್ನು ಸುಟ್ಟುಬಿಡಬೇಕು. ಅದು ಪವಿತ್ರವಾದುದರಿಂದ ಯಾರೂ ಅದನ್ನು ತಿನ್ನಬಾರದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)34 ಯಾಜಕಾಭಿಷೇಕಕ್ಕೆ ಸಂಬಂಧಪಟ್ಟ ಮಾಂಸದಲ್ಲಾಗಲಿ, ರೊಟ್ಟಿಯಲ್ಲಾಗಲಿ ಏನಾದರೂ ಮರುದಿನದ ಉದಯದವರೆಗೆ ಉಳಿದರೆ ಅದನ್ನು ಸುಟ್ಟುಬಿಡಬೇಕು. ಅದು ದೇವರ ವಸ್ತುವಾದುದರಿಂದ ಯಾರೂ ತಿನ್ನಕೂಡದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)34 ಪಟ್ಟಾಭಿಷೇಕಕ್ಕೆ ಸಂಬಂಧಪಟ್ಟ ಮಾಂಸದಲ್ಲಿಯಾಗಲಿ ರೊಟ್ಟಿಯಲ್ಲಿಯಾಗಲಿ ಏನಾದರೂ ಮರುದಿನದ ಉದಯದವರೆಗೆ ಉಳಿದರೆ ಅದನ್ನು ಸುಟ್ಟುಬಿಡಬೇಕು; ಅದು ದೇವರ ವಸ್ತುವಾದದರಿಂದ ಯಾರೂ ತಿನ್ನಕೂಡದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ34 ಪ್ರತಿಷ್ಠೆ ಬಲಿ ಮಾಂಸದಲ್ಲಿಯೂ ರೊಟ್ಟಿಯಲ್ಲಿಯೂ ಮರುದಿನದವರೆಗೆ ಏನಾದರೂ ಉಳಿದರೆ ಅದನ್ನು ಬೆಂಕಿಯಿಂದ ಸುಡಬೇಕು. ಅದು ಪರಿಶುದ್ಧವಾಗಿರುವುದರಿಂದ ಅದನ್ನು ಮರುದಿನ ತಿನ್ನಬಾರದು. ಅಧ್ಯಾಯವನ್ನು ನೋಡಿ |