ವಿಮೋಚನಕಾಂಡ 24:1 - ಪರಿಶುದ್ದ ಬೈಬಲ್1 ದೇವರು ಮೋಶೆಗೆ, “ನೀನು, ಆರೋನ, ನಾದಾಬ, ಅಬೀಹೂ ಮತ್ತು ಇಸ್ರೇಲರ ಎಪ್ಪತ್ತು ಮಂದಿ ಹಿರಿಯರು ಬೆಟ್ಟವನ್ನೇರಿಬಂದು ದೂರದಿಂದ ನನ್ನನ್ನು ಆರಾಧಿಸಬೇಕು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಯೆಹೋವನು ಮೋಶೆಗೆ, “ನೀನು, ಆರೋನ್, ನಾದಾಬ್, ಅಬೀಹೂ ಹಾಗೂ ಇಸ್ರಾಯೇಲರ ಹಿರಿಯರಲ್ಲಿ ಎಪ್ಪತ್ತು ಮಂದಿ ಈ ಬೆಟ್ಟವನ್ನು ಹತ್ತಿ ಯೆಹೋವನ ಬಳಿಗೆ ಬಂದು ದೂರದಲ್ಲಿ ನಿಂತು ಅಡ್ಡಬಿದ್ದು ಆರಾಧಿಸಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 ಸರ್ವೇಶ್ವರ ಸ್ವಾಮಿ ಮೋಶೆಗೆ, “ನೀನು, ಆರೋನ, ನಾದಾಬ್ ಹಾಗೂ ಅಬೀಹೂ ಮತ್ತು ಇಸ್ರಯೇಲರ ಹಿರಿಯರಲ್ಲಿ ಎಪ್ಪತ್ತು ಮಂದಿ ಈ ಬೆಟ್ಟವನ್ನು ಹತ್ತಿ ಸರ್ವೇಶ್ವರನಾದ ನನ್ನ ಬಳಿಗೆ ಬಂದು ದೂರದಲ್ಲೆ ನಿಂತು ಅಡ್ಡಬೀಳಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ಯೆಹೋವನು ಮೋಶೆಗೆ - ನೀನೂ ಆರೋನ ನಾದಾಬ್ ಅಬೀಹೂ ಎಂಬವರೂ ಇಸ್ರಾಯೇಲ್ಯರ ಹಿರಿಯರಲ್ಲಿ ಎಪ್ಪತ್ತು ಮಂದಿಯೂ ಈ ಬೆಟ್ಟವನ್ನು ಹತ್ತಿ ಯೆಹೋವನ ಬಳಿಗೆ ಬಂದು ದೂರದಲ್ಲಿ ನಿಂತು ಅಡ್ಡಬೀಳಬೇಕು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ1 ತರುವಾಯ ಯೆಹೋವ ದೇವರು ಮೋಶೆಗೆ, “ನೀನು, ಆರೋನ್, ನಾದಾಬ್, ಅಬೀಹೂ ಮತ್ತು ಇಸ್ರಾಯೇಲಿನ ಹಿರಿಯರಲ್ಲಿ ಎಪ್ಪತ್ತು ಮಂದಿಯೂ ಈ ಬೆಟ್ಟವನ್ನು ಹತ್ತಿ ಯೆಹೋವ ದೇವರಾದ ನನ್ನ ಬಳಿಗೆ ಬಂದು ದೂರದಲ್ಲಿ ಆರಾಧಿಸಿರಿ. ಅಧ್ಯಾಯವನ್ನು ನೋಡಿ |