9 “‘ನಾವು ಅವರನ್ನು ಬೆನ್ನಟ್ಟಿ ಹಿಡಿಯುವೆವು; ನಾವು ಅವರ ಸಂಪತ್ತನ್ನೆಲ್ಲಾ ತೆಗೆದುಕೊಳ್ಳುವೆವು. ನಾವು ಖಡ್ಗದಿಂದ ಅವರನ್ನು ಸಂಹರಿಸುವೆವು. ನಮ್ಮ ಭುಜಬಲದಿಂದ ಅವರ ಸ್ವತ್ತುಗಳನ್ನೆಲ್ಲಾ ವಶಪಡಿಸಿಕೊಳ್ಳುವೆವು’ ಎಂದುಕೊಂಡರು ವೈರಿಗಳು.
9 ಶತ್ರುವು, ‘ನಾವು ಇವರನ್ನು ಹಿಂದಟ್ಟಿ ಹಿಡಿಯುವೆವು, ಅವರ ಸೊತ್ತನ್ನು ಅಪಹರಿಸಿ ಹಂಚಿಕೊಳ್ಳುವೆವು; ಅವರಲ್ಲಿ ನಮ್ಮ ಬಯಕೆಯನ್ನು ತೀರಿಸಿಕೊಳ್ಳುವೆವು. ನಾವು ಖಡ್ಗವನ್ನು ಹಿಡಿದು; ಶಕ್ತಿಯಿಂದ ಅವರನ್ನು ಸಂಹಾರಮಾಡುವೆವು’ ಎಂಬುದಾಗಿ ಮಾತನಾಡಿಕೊಳ್ಳುತ್ತಿದ್ದರು.
9 ನಮ್ಮ ಶತ್ರುಗಳು ಮಾತಾಡಿಕೊಂಡರು ಇಂತೆಂದು: ‘ಹಿಂದಟ್ಟಿ ಹಿಡಿಯುವೆವು ಅವರನು ಅಪಹರಿಸಿಕೊಳ್ವೆವು ಅವರ ಸೊತ್ತನು ತೀರಿಸಿಕೊಳ್ವೆವು ಅವರಲ್ಲಿ ನಮ್ಮ ಬಯಕೆಯನು ಶಕ್ತಿಯಿಂದ ಸಂಹರಿಸುವೆವು ಅವರನು ಕತ್ತಿ ಹಿಡಿದು.’
9 ನಾವು ಇವರನ್ನು ಹಿಂದಟ್ಟಿ ಹಿಡಿಯುವೆವು, ಅವರ ಸೊತ್ತನ್ನು ಅಪಹರಿಸಿ ಹಂಚಿಕೊಳ್ಳುವೆವು, ಅವರಲ್ಲಿ ನಮ್ಮ ಕೋರಿಕೆಯನ್ನು ತೀರಿಸಿಕೊಳ್ಳುವೆವು, ನಾವು ಕತ್ತಿಯನ್ನು ಹಿರಿದು ಭುಜಬಲದಿಂದ ಅವರನ್ನು ಸಂಹಾರ ಮಾಡುವೆವು ಎಂಬದಾಗಿ ನಮ್ಮ ಶತ್ರುಗಳು ಮಾತಾಡಿಕೊಳ್ಳುತ್ತಿದ್ದರು.
9 ಶತ್ರುವು ಹೆಮ್ಮೆಯಿಂದ ಹೀಗೆ ಮಾತನಾಡಿಕೊಳ್ಳುತ್ತಿದ್ದರು, ‘ನಾನು ಹಿಂದಟ್ಟುವೆನು, ಅವರನ್ನು ಹಿಡಿಯುವೆನು, ನಾನು ಅವರ ಕೊಳ್ಳೆಯನ್ನು ಹಂಚುವೆನು; ನನ್ನ ಆಶೆಗಳು ಅವರಿಂದ ತೃಪ್ತಿ ಹೊಂದುವುವು; ನಾನು ನನ್ನ ಖಡ್ಗವನ್ನು ಹಿರಿಯುವೆನು; ನನ್ನ ಕೈ ಅವರನ್ನು ಸಂಹಾರ ಮಾಡುವುದು.’
‘ಖಂಡಿತವಾಗಿ ಅವರು ಗೆದ್ದಿದ್ದಾರೆ, ತಾವು ಸೋಲಿಸಿದ ಜನರಿಂದ ವಸ್ತುಗಳನ್ನು ಪಡೆಯುತ್ತಿದ್ದಾರೆ! ಆ ವಸ್ತುಗಳನ್ನು ತಮ್ಮಲ್ಲಿಯೇ ಹಂಚಿಕೊಳ್ಳುತ್ತಿದ್ದಾರೆ! ಪ್ರತಿಯೊಬ್ಬ ಸೈನಿಕನು ಒಬ್ಬಿಬ್ಬರು ಹುಡುಗಿಯರನ್ನು ತೆಗೆದುಕೊಳ್ಳುತ್ತಿರಬೇಕು. ಸೀಸೆರನು ವರ್ಣರಂಜಿತ ಬಟ್ಟೆಯನ್ನು ತೆಗೆದುಕೊಳ್ಳುತ್ತಿರಬಹುದು. ಹೌದು! ವಿಜಯಿ ಸೀಸೆರನು ಧರಿಸಲು ಬಣ್ಣಬಣ್ಣದ ಒಂದು ಬಟ್ಟೆಯನ್ನು ತೆಗೆದುಕೊಳ್ಳುತ್ತಿರಬಹುದು; ಅಥವಾ ಎರಡು ಬಟ್ಟೆಗಳನ್ನು ತೆಗೆದುಕೊಳ್ಳುತ್ತಿರಬಹುದು.’
ಇಸ್ರೇಲರು ತಪ್ಪಿಸಿಕೊಂಡರೆಂಬ ವರದಿಯನ್ನು ಕೇಳಿದಾಗ, ಫರೋಹನ ಮತ್ತು ಅವನ ಅಧಿಕಾರಿಗಳ ಮನಸ್ಸುಗಳು ಬದಲಾದವು. ಫರೋಹನು, “ಇಸ್ರೇಲರನ್ನು ನಾವು ಯಾಕೆ ಹೋಗಲು ಬಿಟ್ಟೆವು? ಅಯ್ಯೋ, ನಾವೀಗ ನಮ್ಮ ಗುಲಾಮರನ್ನು ಕಳೆದುಕೊಂಡೆವಲ್ಲಾ!” ಎಂದು ಹೇಳಿದನು.
ಆದರೆ ಅವನಿಗಿಂತಲೂ ಬಲಿಷ್ಠನಾದ ಮತ್ತೊಬ್ಬನು ಬಂದು ಅವನನ್ನು ಸೋಲಿಸಿದರೆ, ಮೊದಲನೆಯ ಬಲಿಷ್ಠನು ತನ್ನ ಮನೆಯನ್ನು ಸುರಕ್ಷಿತವಾಗಿಡುವುದಕ್ಕಾಗಿ ಅವಲಂಬಿಸಿಕೊಂಡಿದ್ದ ಆಯುಧಗಳನ್ನೆಲ್ಲಾ ಆ ಮತ್ತೊಬ್ಬ ಬಲಿಷ್ಠನು ತೆಗೆದುಕೊಂಡು ಹೋಗುವನು. ಬಳಿಕ ಆ ಮತ್ತೊಬ್ಬ ಬಲಿಷ್ಠನು ಆ ಮನುಷ್ಯನ ವಸ್ತುಗಳನ್ನು ತನಗೆ ಇಷ್ಟಬಂದ ಹಾಗೆ ಮಾಡುವನು.
ಈ ಕಾರಣಕ್ಕಾಗಿ ನಾನು ಆತನನ್ನು ಜನರ ಮಧ್ಯದಲ್ಲಿ ಪ್ರಸಿದ್ಧಿಪಡಿಸುವೆನು. ಆತನು ಬಲಿಷ್ಠರೊಂದಿಗೆ ಸಮಪಾಲನ್ನು ಹೊಂದುವನು. ಆತನು ಜನರಿಗಾಗಿ ತನ್ನ ಪ್ರಾಣವನ್ನು ಕೊಟ್ಟು ಸತ್ತದ್ದಕ್ಕಾಗಿ ನಾನು ಆತನಿಗೆ ಹೀಗೆ ಮಾಡುವೆನು. ಜನರು ಆತನನ್ನು ಅಪರಾಧಿ ಎಂದು ಹೇಳಿದರೂ ವಾಸ್ತವವಾಗಿ ಆತನು ಬಹುಜನರ ಪಾಪಗಳನ್ನು ಹೊತ್ತುಕೊಂಡು ಹೋದನು. ಈಗ ಆತನು ಪಾಪಮಾಡಿದ ಜನರಿಗಾಗಿ ಪ್ರಾರ್ಥನಾಪೂರ್ವಕವಾಗಿ ವಿಜ್ಞಾಪಿಸುವನು.
ವೈರಿಗಳ ಸೈನ್ಯವನ್ನು ಮೋಶೆಯ ಕೋಲಿನಿಂದ ನಿಲ್ಲಿಸಿದೆ. ಆ ಸೈನಿಕರು ಬಿರುಗಾಳಿಯಂತೆ ನಮ್ಮೊಂದಿಗೆ ಯುದ್ಧ ಮಾಡಲು ಬಂದರು. ರಸ್ತೆಯ ಮೇಲೆ ಇದ್ದ ಒಬ್ಬ ಬಡ ಮನುಷ್ಯನನ್ನು ದೋಚಿದ ಪ್ರಕಾರ ನಮ್ಮನ್ನೂ ಸುಲಭವಾಗಿ ಗೆಲ್ಲುವೆವೆಂದು ಅವರು ನೆನೆಸಿದ್ದರು.
ನಂತರ ಅವರು ಬೆನ್ಹದದನ ಮತ್ತೊಂದು ಸಂದೇಶದೊಂದಿಗೆ ಹಿಂದಿರುಗಿ ಬಂದರು. ಆ ಸಂದೇಶವು ಹೀಗಿತ್ತು: “ನಾನು ಸಮಾರ್ಯವನ್ನು ಸಂಪೂರ್ಣವಾಗಿ ನಾಶಗೊಳಿಸುತ್ತೇನೆ. ಆ ನಗರದಲ್ಲಿ ಏನನ್ನೂ ಉಳಿಸುವುದಿಲ್ಲವೆಂದು ನಾನು ಪ್ರಮಾಣ ಮಾಡುತ್ತೇನೆ. ನನ್ನ ಜನರು, ಆ ನಗರವನ್ನು ಕಂಡುಹಿಡಿಯಲಾಗದಂತೆ ಮತ್ತು ಮನೆಗೆ ತೆಗೆದುಕೊಂಡು ಹೋಗಲು ಒಂದು ಹಿಡಿ ಧೂಳೂ ಉಳಿಯದಂತೆ ಮಾಡಿಬಿಡುತ್ತಾರೆ. ನಾನು ಇದನ್ನು ಮಾಡದೆ ಹೋದರೆ ದೇವರು ನನ್ನನ್ನು ನಾಶಪಡಿಸಲಿ!”
ಆದ್ದರಿಂದ ಈಜೆಬೆಲಳು ಎಲೀಯನ ಬಳಿಗೆ ಒಬ್ಬ ಸಂದೇಶಕನನ್ನು ಕಳುಹಿಸಿದಳು. ಈಜೆಬೆಲಳು, “ನೀನು ಆ ಪ್ರವಾದಿಗಳನ್ನು ಕೊಂದುಹಾಕಿದಂತೆ ನಾಳೆಯ ದಿನ ನಾನು ಇದೇ ಸಮಯಕ್ಕೆ ಮುಂಚೆ, ನಿನ್ನನ್ನು ಕೊಂದುಹಾಕುವೆನೆಂದು ಪ್ರಮಾಣ ಮಾಡುತ್ತೇನೆ. ನಾನು ಈ ಕಾರ್ಯದಲ್ಲಿ ವಿಜಯಿಯಾಗದಿದ್ದಲ್ಲಿ, ದೇವರುಗಳು ನನ್ನನ್ನು ಕೊಲ್ಲಲಿ” ಎಂದು ಹೇಳಿದಳು.
ನಂತರ ದಾವೀದನು ಯೆಹೋವನಲ್ಲಿ, “ನಮ್ಮ ಕುಟುಂಬಗಳನ್ನು ಅಪಹರಿಸಿದ ಜನರನ್ನು ನಾನು ಅಟ್ಟಿಸಿಕೊಂಡು ಹೋಗಬೇಕೇ? ನಾನು ಅವರನ್ನು ಸೆರೆಹಿಡಿಯುವೆನೇ?” ಎಂದು ಪ್ರಾರ್ಥಿಸಿದನು. ಯೆಹೋವನು, “ಅವರನ್ನು ಅಟ್ಟಿಸಿಕೊಂಡು ಹೋಗು. ಅವರನ್ನು ನೀನು ಸೆರೆಹಿಡಿಯಬಹುದು. ನಿಮ್ಮ ಕುಟುಂಬಗಳನ್ನು ನೀವು ರಕ್ಷಿಸಬಹುದು” ಎಂದು ಉತ್ತರಿಸಿದನು.