ವಿಮೋಚನಕಾಂಡ 13:16 - ಪರಿಶುದ್ದ ಬೈಬಲ್16 ಇದು ನಿಮ್ಮ ಕೈಗೆ ದಾರ ಕಟ್ಟಿದಂತಿರುತ್ತದೆ; ನಿಮ್ಮ ಕಣ್ಣುಗಳ ಮುಂದೆ ಒಂದು ಚಿಹ್ನೆಯಂತೆ ಇರುತ್ತದೆ. ಯೆಹೋವನು ತನ್ನ ಮಹಾಶಕ್ತಿಯಿಂದ ನಮ್ಮನ್ನು ಈಜಿಪ್ಟಿನಿಂದ ಹೊರಗೆ ಕರೆದುಕೊಂಡು ಬಂದನೆಂಬುದನ್ನು ಜ್ಞಾಪಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201916 ಯೆಹೋವನು ಭುಜಬಲದಿಂದ ನಿಮ್ಮನ್ನು ಐಗುಪ್ತ ದೇಶದಿಂದ ಬಿಡಿಸಿದ ಸಂಗತಿಯನ್ನು ನೀವು ಜ್ಞಾಪಕದಲ್ಲಿಟ್ಟುಕೊಳ್ಳುವುದರ ಗುರುತಾಗಿ ಅದನ್ನು ನಿಮ್ಮ ಕೈಗಳ ಮೇಲೆಯೂ, ಹಣೆಯ ಮೇಲೆ ಜ್ಞಾಪಕಪಟ್ಟಿಯಂತೆಯೂ ಇರಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)16 ಸರ್ವೇಶ್ವರ ತಮ್ಮ ಭುಜಬಲವನ್ನು ಪ್ರದರ್ಶಿಸಿ ನಮ್ಮನ್ನು ಈಜಿಪ್ಟಿನಿಂದ ಬಿಡುಗಡೆ ಮಾಡಿದರು. ಈ ಸಂದೇಶವನ್ನು ನೀವು ನೆನಪಿನಲ್ಲಿಡಬೇಕು. ಇದಕ್ಕೆ ಈ ಪದ್ಧತಿಯು ನಿಮ್ಮ ಕೈಗೆ ಕಟ್ಟಿದ ಕಂಕಣದಂತಿರುತ್ತದೆ, ಹಣೆಗೆ ಕಟ್ಟಿದ ಜ್ಞಾಪಕಪಟ್ಟಿಯಂತಿರುತ್ತದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)16 ಯೆಹೋವನು ಭುಜಬಲದಿಂದ ನಮ್ಮನ್ನು ಐಗುಪ್ತದೇಶದಿಂದ ಬಿಡಿಸಿದ ಸಂಗತಿಯನ್ನು ನೀವು ಜ್ಞಾಪಕದಲ್ಲಿಟ್ಟುಕೊಳ್ಳುವದಕ್ಕೆ ಈ ಪದ್ಧತಿಯು ಕೈಗೆ ಕಟ್ಟಿಕೊಂಡಿರುವ ದಾರದಂತೆಯೂ ಹುಬ್ಬುಗಳ ನಡುವೆ ಕಟ್ಟಿಕೊಂಡಿರುವ ಜ್ಞಾಪಕಪಟ್ಟಿಯಂತೆಯೂ ಇರುವದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ16 ಇದು ನಿಮ್ಮ ಕೈಯಲ್ಲಿ ಗುರುತಾಗಿಯೂ ನಿಮ್ಮ ಹಣೆಯ ಮೇಲೆ ಸಂಕೇತವಾಗಿಯೂ ಇರಲಿ. ಏಕೆಂದರೆ ಯೆಹೋವ ದೇವರು ತಮ್ಮ ಭುಜಬಲದಿಂದ ನಮ್ಮನ್ನು ಈಜಿಪ್ಟಿನೊಳಗಿಂದ ಹೊರಗೆ ಬರಮಾಡಿದ್ದಾರೆ ಎಂದು ಹೇಳಬೇಕು,” ಎಂದರು. ಅಧ್ಯಾಯವನ್ನು ನೋಡಿ |