Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 3:5 - ಪರಿಶುದ್ದ ಬೈಬಲ್‌

5 ಪ್ರತಿಯೊಂದು ಕಣಿವೆಯು ಮುಚ್ಚಲ್ಪಡುವವು. ಪ್ರತಿಯೊಂದು ಬೆಟ್ಟಗುಡ್ಡಗಳು ಸಮನಾಗಿ ಮಾಡಲ್ಪಡುವವು. ಡೊಂಕಾದ ದಾರಿಗಳು ನೀಟಾಗುವವು. ಕೊರಕಲಾದ ದಾರಿಗಳು ಸಮವಾಗುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಹಳ್ಳಕೊಳ್ಳಗಳೆಲ್ಲ ಭರ್ತಿಯಾಗಬೇಕು; ಬೆಟ್ಟಗುಡ್ಡಗಳು ಮಟ್ಟವಾಗಬೇಕು; ಅಂಕುಡೊಂಕಾದವು ನೆಟ್ಟಗಾಗಬೇಕು; ತಗ್ಗುಮುಗ್ಗಾದ ಹಾದಿಗಳು ಹಸನಾಗಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಪ್ರತಿಯೊಂದು ಹಳ್ಳಕೊಳ್ಳಗಳೂ ಭರ್ತಿಯಾಗಬೇಕು, ಎಲ್ಲಾ ಬೆಟ್ಟಗುಡ್ಡಗಳು ನೆಲಸಮವಾಗಬೇಕು; ಡೊಂಕಾದ ರಸ್ತೆಗಳು ನೆಟ್ಟಗಾಗಬೇಕು, ಮತ್ತು ಕೊರಕಲಾದ ದಾರಿಗಳು ಸರಾಗವಾಗಬೇಕು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

5 ಸಗ್ಳೆ ಖಡ್ಡೆ ಭರುಕ್ ಪಾಜೆ, ಸಗ್ಳ್ಯಾ ಮೊಟ್ಯಾ ಬಾರಿಕ್ ಮಡ್ಡಿಯಾ ಸಪಾಟ್ ಹೊಂವ್ದಿ: ವಾಕ್ಡಿತಿಕ್ಡಿ ಹೊತ್ತಿ ವಾಟ್ ನಿಟ್ ಹೊತಾ. ಅನಿ ಖರ್ಬಾಡಿ ವಾಟ್ ಶಾಪೊಳ್ ಹೊತಾ;

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 3:5
11 ತಿಳಿವುಗಳ ಹೋಲಿಕೆ  

ಅವರು ಹಿಂದೆಂದೂ ತಿಳಿಯದ ರೀತಿಯಲ್ಲಿ ನಾನು ಕುರುಡರನ್ನು ನಡೆಸುವೆನು. ಕುರುಡರು ಹೋಗಿರದ ಸ್ಥಳಕ್ಕೆ ನಾನು ಅವರನ್ನು ನಡಿಸುವೆನು. ನಾನು ಅವರಿಗಾಗಿ ಕತ್ತಲೆಯನ್ನು ಬೆಳಕಾಗಿ ಮಾರ್ಪಡಿಸುವೆನು. ನಾನು ಕೊರಕಲು ನೆಲವನ್ನು ಸಮತಟ್ಟಾಗಿ ಮಾಡುವೆನು. ನಾನು ಮಾಡಿದ ವಾಗ್ದಾನವನ್ನು ನೆರವೇರಿಸುವೆನು. ನನ್ನ ಜನರನ್ನು ನಾನು ಎಂದಿಗೂ ತೊರೆಯುವದಿಲ್ಲ.


ತಗ್ಗುಗಳನ್ನು ಸಮತಟ್ಟು ಮಾಡಿರಿ. ಎಲ್ಲಾ ಬೆಟ್ಟಗುಡ್ಡಗಳನ್ನು ನೆಲಸಮ ಮಾಡಿರಿ. ಕೊರಕಲು ರಸ್ತೆಗಳನ್ನು ನೆಟ್ಟಗೆ ಮಾಡಿರಿ. ಏರುತಗ್ಗು ನೆಲವನ್ನು ಸಮಗೊಳಿಸಿರಿ.


ನಾನು ನನ್ನ ಜನರಿಗೊಂದು ಮಾರ್ಗ ಸಿದ್ಧಮಾಡುವೆನು. ಬೆಟ್ಟವು ನೆಲದ ಮಟ್ಟಕ್ಕೆ ಇಳಿಯುವುದು; ತಗ್ಗು ಏರಿಸಲ್ಪಡುವದು.


ಸೈರಸನೇ, ನಿನ್ನ ಸೈನ್ಯವು ಮುನ್ನುಗ್ಗುವದು. ನಾನು ನಿನ್ನ ಮುಂದೆ ಹೋಗಿ ಪರ್ವತಗಳನ್ನು ನೆಲಸಮ ಮಾಡುವೆನು. ಹಿತ್ತಾಳೆಯ ನಗರ ದ್ವಾರಗಳನ್ನು ಪುಡಿಪುಡಿ ಮಾಡುವೆನು. ದ್ವಾರಗಳ ಕಬ್ಬಿಣದ ಅಗುಳಿಗಳನ್ನು ತುಂಡು ಮಾಡಿ ಬಿಡುವೆನು.


“ಆಗ ಬೇರೆ ಮರಗಳಿಗೆ, ನಾನು ದೊಡ್ಡ ಮರಗಳನ್ನು ನೆಲಕ್ಕೆ ಬೀಳಿಸುವೆನೆಂತಲೂ, ಚಿಕ್ಕ ಮರಗಳನ್ನು ಉದ್ದವಾಗಿ ಬೆಳೆಯುವಂತೆ ಮಾಡುತ್ತೇನೆಂತಲೂ ಗೊತ್ತಾಗುವದು. ಹಸಿರು ಮರಗಳು ಒಣಗಿಹೋಗುವಂತೆಯೂ ಒಣಗಿಹೋದ ಮರಗಳು ಹಸಿರಾಗಿ ಬೆಳೆಯುವಂತೆಯೂ ನಾನು ಮಾಡುತ್ತೇನೆ. ನಾನೇ ಯೆಹೋವನು. ಇದನ್ನು ನಾನೇ ಹೇಳಿದ್ದೇನೆ; ಮತ್ತು ನಾನೇ ಇದನ್ನು ನೆರವೇರಿಸುವೆನು.”


ಬಡವನಾಗಿರುವ ವಿಶ್ವಾಸಿಯು ಹೆಮ್ಮೆಪಡಲಿ, ಏಕೆಂದರೆ ದೇವರು ಅವನನ್ನು ಆತ್ಮಿಕ ವಿಷಯದಲ್ಲಿ ಐಶ್ವರ್ಯವಂತನನ್ನಾಗಿ ಮಾಡಿದ್ದಾನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು