ಲೂಕ 2:23 - ಪರಿಶುದ್ದ ಬೈಬಲ್23 ಏಕೆಂದರೆ “ಪ್ರತಿ ಕುಟುಂಬದಲ್ಲಿ, ‘ಚೊಚ್ಚಲು ಗಂಡುಮಗುವನ್ನು ಪ್ರಭುವಿಗೆ ಪ್ರತಿಷ್ಠಿಸಬೇಕು’” ಎಂದು ಪ್ರಭುವಿನ ಧರ್ಮಶಾಸ್ತ್ರದಲ್ಲಿ ಬರೆದಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)23 ಏಕೆಂದರೆ, ‘ಮೊದಲು ಜನಿಸಿದ ಪ್ರತಿಯೊಂದು ಗಂಡು ಮಗುವನ್ನು ಸರ್ವೇಶ್ವರನಿಗೆ ಸಮರ್ಪಿಸಬೇಕಾಗಿತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)23 ಯಾಕಂದರೆ ಚೊಚ್ಚಲು ಗಂಡೆಲ್ಲಾ ಕರ್ತನಿಗೆ ಮೀಸಲೆನಿಸಿಕೊಳ್ಳುವದು ಎಂಬದಾಗಿ ಕರ್ತನ ಧರ್ಮಶಾಸ್ತ್ರದಲ್ಲಿ ಬರೆದಿರುವಂತೆ ಅದನ್ನು ಕರ್ತನಿಗೆ ಸಮರ್ಪಿಸಬೇಕಾಗಿತ್ತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ23 ಕರ್ತದೇವರ ನಿಯಮದಲ್ಲಿ ಬರೆದಿರುವಂತೆ, “ಪ್ರತಿಯೊಂದು ಚೊಚ್ಚಲ ಗಂಡು ಮಗು ಕರ್ತದೇವರಿಗೆ ಪವಿತ್ರವಾಗಿ ಸಮರ್ಪಿಸಬೇಕು,” ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್23 ಕಶ್ಯಾಕ್ ಮಟ್ಲ್ಯಾರ್ ಸರ್ವೆಸ್ವರಾಚ್ಯಾ ಖಾಯ್ದ್ಯಾತ್ನಿ“ಪಯ್ಲೆ ಜಲಮಲ್ಲೊ ಝಿಲ್ಗೊ ದೆವಾಕ್ ಎಕ್ ಪವಿತ್ರ್ ಮನುನ್ ಭೆಟ್ವುಚೆ” ಮನುನ್ ಲಿವಲ್ಲೆ ಹಾಯ್. ಅಧ್ಯಾಯವನ್ನು ನೋಡಿ |
ನೀವು ಈಜಿಪ್ಟಿನಲ್ಲಿದ್ದಾಗ ನಾನು ಈಜಿಪ್ಟಿನವರ ಎಲ್ಲಾ ಚೊಚ್ಚಲು ಮಕ್ಕಳನ್ನು ಕೊಂದೆನು. ಆ ಕಾಲದಲ್ಲಿ ನಾನು ಇಸ್ರೇಲರ ಎಲ್ಲಾ ಚೊಚ್ಚಲು ಮಕ್ಕಳನ್ನು ನನ್ನವರನ್ನಾಗಿ ತೆಗೆದುಕೊಂಡೆನು. ಎಲ್ಲಾ ಚೊಚ್ಚಲು ಗಂಡುಮಕ್ಕಳು ಮತ್ತು ಚೊಚ್ಚಲು ಪಶುಗಳು ನನ್ನದಾಗಿದ್ದವು. ಆದರೆ ಈಗ ನಿಮ್ಮ ಎಲ್ಲಾ ಚೊಚ್ಚಲು ಗಂಡುಮಕ್ಕಳನ್ನು ನಿಮಗೇ ಹಿಂದಕ್ಕೆ ಕೊಡುತ್ತಿದ್ದೇನೆ ಮತ್ತು ಲೇವಿಯರನ್ನು ನನ್ನವರನ್ನಾಗಿ ಮಾಡುತ್ತಿದ್ದೇನೆ. ನಾನೇ ಯೆಹೋವನು!”