ಲೂಕ 15:24 - ಪರಿಶುದ್ದ ಬೈಬಲ್24 ನನ್ನ ಮಗನು ಸತ್ತುಹೋಗಿದ್ದನು, ಈಗಲಾದರೋ ಮತ್ತೆ ಜೀವಂತನಾಗಿ ಬಂದಿದ್ದಾನೆ! ಇವನು ತಪ್ಪಿಹೋಗಿದ್ದನು. ಈಗಲಾದರೋ ಮತ್ತೆ ಸಿಕ್ಕಿದ್ದಾನೆ!’ ಎಂದು ಹೇಳಿದನು. ಆದ್ದರಿಂದ ಅವರು ಉಲ್ಲಾಸಪಡುವುದಕ್ಕೆ ತೊಡಗಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201924 ಈ ನನ್ನ ಮಗನು ಸತ್ತವನಾಗಿದ್ದನು, ತಿರುಗಿ ಬದುಕಿ ಬಂದಿದ್ದಾನೆ. ಪೋಲಿಹೋಗಿದ್ದನು, ಸಿಕ್ಕಿದನು’ ಎಂದು ಹೇಳಿ ಉಲ್ಲಾಸಪಡುವುದಕ್ಕೆ ತೊಡಗಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)24 ಏಕೆಂದರೆ, ಈ ನನ್ನ ಮಗ ಸತ್ತುಹೋಗಿದ್ದ, ಈಗ ಬದುಕಿ ಬಂದಿದ್ದಾನೆ. ತಪ್ಪಿಹೋಗಿದ್ದ, ಈಗ ಸಿಕ್ಕಿದ್ದಾನೆ,’ ಎಂದು ಹೇಳಿದ. ಒಡನೆಯೇ ಹಬ್ಬದ ಸಡಗರ ತೊಡಗಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)24 ಈ ನನ್ನ ಮಗನು ಸತ್ತವನಾಗಿದ್ದನು, ತಿರಿಗಿ ಬದುಕಿ ಬಂದನು; ಪೋಲಿಹೋಗಿದ್ದನು, ಸಿಕ್ಕಿದನು ಎಂದು ಹೇಳಿದನು. ಆಗ ಅವರು ಉಲ್ಲಾಸಪಡುವದಕ್ಕೆ ತೊಡಗಿದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ24 ಏಕೆಂದರೆ ಈ ನನ್ನ ಮಗನು ಸತ್ತುಹೋಗಿದ್ದನು, ತಿರುಗಿ ಬದುಕಿದ್ದಾನೆ; ಕಳೆದುಹೋಗಿದ್ದನು, ಸಿಕ್ಕಿದ್ದಾನೆ,’ ಎಂದು ಹೇಳಿದನು. ಹೀಗೆ ಅವರು ಅವನ ಬರುವಿಕೆಯನ್ನು ಆಚರಿಸತೊಡಗಿದರು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್24 ಮರಲ್ಲೊ ಮಾಜೊ ಲೆಕ್ ಝಿತ್ತೊ ಹೊವ್ನ್ ಯೆಲಾ; ಕಳ್ದುನ್ ಗೆಲ್ಲೊ ತೊ ಅತ್ತಾ ಗಾವ್ಲಾ” ಮಟ್ಲ್ಯಾನ್. ಅಶೆ ತೆಂಚಿ ಗರ್‍ದಿ ಚಾಲು ಹೊಲಿ. ಅಧ್ಯಾಯವನ್ನು ನೋಡಿ |
ಆದರೆ ನೀವು ಬಲಹೀನ ಕುರಿಗಳನ್ನು ಬಲಪಡಿಸಲಿಲ್ಲ. ಕಾಯಿಲೆಯಲ್ಲಿರುವ ಕುರಿಗಳನ್ನು ನೀವು ಪರಾಂಬರಿಸಲಿಲ್ಲ. ಗಾಯಗೊಂಡ ಕುರಿಗಳಿಗೆ ಬಟ್ಟೆ ಸುತ್ತಲಿಲ್ಲ. ಕೆಲವು ಕುರಿಗಳು ದಾರಿತಪ್ಪಿ ದೂರ ಹೋದವು. ಆದರೆ ನೀವು ಅದರ ಬೆನ್ನ ಹಿಂದೆ ಹೋಗಿ ಹಿಂತಿರುಗಿ ಬರುವಂತೆ ಮಾಡಲಿಲ್ಲ. ತಪ್ಪಿಹೋದ ಕುರಿಗಳನ್ನು ನೀವು ಹುಡುಕಲಿಲ್ಲ. ನೀವು ಬಹಳ ಕ್ರೂರಿಗಳೂ ದಯೆ ಇಲ್ಲದವರೂ ಆಗಿದ್ದೀರಿ. ಆ ರೀತಿಯಾಗಿ ನೀವು ನಿಮ್ಮ ಕುರಿಗಳನ್ನು ನಡೆಸಿದಿರಿ.
ನಿಮ್ಮ ಅನ್ಯೋನ್ಯತೆಯ ಭೋಜನದಲ್ಲಿ ಈ ಜನರು ಮುಳುಗಿಹೋದ ಬಂಡೆಗಳಂತಿದ್ದಾರೆ. ಅವರು ಭಯವಿಲ್ಲದೆ ನಿಮ್ಮ ಜೊತೆಯಲ್ಲಿ ತಿನ್ನುತ್ತಾರೆ. ಅವರು ತಮ್ಮ ಬಗ್ಗೆ ಮಾತ್ರ ಚಿಂತಿಸುವ ಕುರುಬರಾಗಿದ್ದಾರೆ. ಅವರು ನೀರಿಲ್ಲದ ಮೋಡಗಳಂತಿದ್ದಾರೆ. ಗಾಳಿಯು ಆ ಮೋಡಗಳನ್ನು ಬಡಿದುಕೊಂಡು ಹೋಗುವುದು. ಅವರು ಕಾಲಕ್ಕೆ ತಕ್ಕಂತೆ ಫಲಬಿಡದ ಮತ್ತು ಬೇರುಸಹಿತ ಕಿತ್ತುಬಂದು ಉರುಳಿಹೋದ ಮರಗಳಿಂತಿದ್ದಾರೆ.