ರೋಮಾಪುರದವರಿಗೆ 9:8 - ಪರಿಶುದ್ದ ಬೈಬಲ್8 ಇದರರ್ಥವೇನೆಂದರೆ, ಶರೀರ ಸಂಬಂಧವಾಗಿ ಹುಟ್ಟಿದವರೆಲ್ಲರೂ ದೇವರ ಮಕ್ಕಳಲ್ಲ. ವಾಗ್ದಾನ ಸಂಬಂಧವಾಗಿ ಹುಟ್ಟಿದವರೇ ದೇವರ (ನಿಜ) ಮಕ್ಕಳಾಗಿದ್ದಾರೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಆ ಮಾತಿನ ಅರ್ಥವೇನಂದರೆ ಶರೀರಸಂಬಂಧವಾಗಿ ಹುಟ್ಟಿದವರೆಲ್ಲರೂ ದೇವರ ಮಕ್ಕಳಲ್ಲ. ವಾಗ್ದಾನ ಸಂಬಂಧವಾಗಿ ಹುಟ್ಟಿದವರೇ ಅಬ್ರಹಾಮನ ಸಂತತಿಯವರೆಂದು ಎಣಿಸಲ್ಪಡುವರು ಎಂಬುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ಈ ಮಾತಿನ ಅರ್ಥವೇನೆಂದರೆ: ಶರೀರ ಸಂಬಂಧದಿಂದ ಹುಟ್ಟಿದವರೆಲ್ಲರೂ ದೇವರ ಮಕ್ಕಳಾಗುವುದಿಲ್ಲ; ದೈವವಾಗ್ದಾನದ ಪರಿಣಾಮವಾಗಿ ಹುಟ್ಟಿದವರೇ ನಿಜವಾಗಿಯೂ ಅಬ್ರಹಾಮನ ಸಂತತಿ ಎನಿಸಿಕೊಳ್ಳುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ಆ ಮಾತಿನ ಅರ್ಥವೇನಂದರೆ ಶರೀರಸಂಬಂಧವಾಗಿ ಹುಟ್ಟಿದವರೆಲ್ಲರೂ ದೇವರ ಮಕ್ಕಳಲ್ಲ, ವಾಗ್ದಾನಸಂಬಂಧವಾಗಿ ಹುಟ್ಟಿದವರೇ ಅಬ್ರಹಾಮನ ಸಂತತಿಯವರೆಂದು ಎಣಿಸಲ್ಪಡುವರು ಎಂಬದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 ಇದರ ಅರ್ಥ, ಶರೀರಸಂಬಂಧದ ಮಕ್ಕಳು ದೇವರ ಮಕ್ಕಳಾಗಿರದೆ ವಾಗ್ದಾನದ ಮಕ್ಕಳೇ ಅಬ್ರಹಾಮನ ಮಕ್ಕಳೆಂದು ಎನಿಸಿಕೊಳ್ಳುವರು ಎಂಬುದು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್8 ಅಶೆ ಮಟ್ಲ್ಯಾರ್ ಅಸೆಚ್ ಸಹಜ್ ಜಲಮಲ್ಲೆ ಸಗ್ಳೆ ಜಾನಾ ದೆವಾಚಿ ಪೊರಾ ನ್ಹಯ್; ಹೆಚ್ಯಾ ಬದ್ಲಾಕ್, ಕಾಯ್ ಮಟ್ಲ್ಯಾರ್ ದೆವಾನ್ ಗೊಸ್ಟ್ ದಿವ್ನ್ ಸಾಂಗಲ್ಲ್ಯಾ ಗೊಸ್ಟಿಕ್ ಲಾಗುನ್ ಜೆ ಕೊನ್ ಜಲಮ್ಲ್ಯಾತ್ ತೆನಿ ಖರ್ಯಾ ಘರಾನ್ಯಾಚೆ ಮನುನ್ ಹೊಲೆ. ಅಧ್ಯಾಯವನ್ನು ನೋಡಿ |