ರೋಮಾಪುರದವರಿಗೆ 9:3 - ಪರಿಶುದ್ದ ಬೈಬಲ್3 ಅವರು ನನ್ನ ಸಹೋದರ ಸಹೋದರಿಯರಾಗಿದ್ದಾರೆ; ಇಹಲೋಕದ ಕುಟುಂಬದವರಾಗಿದ್ದಾರೆ. ಅವರಿಗೆ ಸಹಾಯ ಮಾಡಲು ಕ್ರಿಸ್ತನನ್ನು ಅಗಲಿ ಶಾಪಗ್ರಸ್ತನಾಗುವುದಕ್ಕೂ ಸಿದ್ಧನಾಗಿದ್ದೇನೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ನನ್ನ ಸ್ವಜನರೂ ರಕ್ತಸಂಬಂಧಿಕರೂ ಆದ ನನ್ನ ಪ್ರಿಯರಿಗೋಸ್ಕರವಾಗಿ ನಾನು ಕ್ರಿಸ್ತಯೇಸುವಿನಿಂದ ಬಹಿಷ್ಕ್ರಿತನಾಗಿ ಶಾಪಗ್ರಸ್ತನಾಗಲು ಸಹ ಸಿದ್ಧನಿದ್ದೇನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಸ್ವದೇಶಿಯರೂ ರಕ್ತಸಂಬಂಧಿಕರೂ ಆದ ನನ್ನ ಸಹೋದರರ ಪರವಾಗಿ ನಾನು ಕ್ರಿಸ್ತಯೇಸುವಿನಿಂದ ಬಹಿಷ್ಕೃತನಾಗಿ ಶಾಪಗ್ರಸ್ತನಾಗಲು ಸಹ ಸಿದ್ಧನಿದ್ದೇನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಶರೀರಸಂಬಂಧವಾಗಿ ಸ್ವಜನರಾಗಿರುವ ನನ್ನ ಸಹೋದರರಿಗೋಸ್ಕರ ನಾನೇ ಸಾಧ್ಯವಾದರೆ ಕ್ರಿಸ್ತನನ್ನು ಅಗಲಿ ಶಾಪಗ್ರಸ್ತನಾಗುವದಕ್ಕೆ ಒಪ್ಪಿಕೊಂಡೇನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ನನ್ನ ಸ್ವಂತ ಜನರಾದ ನನ್ನ ಯೆಹೂದ್ಯ ಸಹೋದರರಿಗಾಗಿ, ಸಾಧ್ಯವಾದರೆ ನಾನೇ ಕ್ರಿಸ್ತ ಯೇಸುವಿನಿಂದ ದೂರಹೋಗಿ ಶಾಪಗ್ರಸ್ತನಾಗಲು ಸಿದ್ಧನಾಗಿದ್ದೇನೆ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್3 ಮಾಜಿ ಸ್ವತಾಚಿ ಲೊಕಾ, ಮಾಜೆಚ್ ಮಾಸ್ ಅನಿ ರಗಾತ್ ಹೊವ್ನ್ ಹಾತ್ ಹಿ ಲೊಕಾ! ತೆಂಚ್ಯಾಸಾಟ್ನಿ ಮಿಯಾ ಕ್ರಿಸ್ತಾಕ್ನಾ ಮಾಕಾ ಧುರ್ ಕರುನ್ ಘೆವ್ಕ್ ಅನಿ ದೆವಾಚೊ ಸರಾಪ್ ಮಾಜೆ ವರ್‍ತಿ ಘಾಲುನ್ ಘೆವ್ಕ್ ಸೈತ್ ತಯಾರ್ ಹಾಂವ್. ಅಧ್ಯಾಯವನ್ನು ನೋಡಿ |
ಅಬ್ಷಾಲೋಮನು ಸತ್ತಿದ್ದಾನೆಂಬುದು ಆಗ ರಾಜನಿಗೆ ತಿಳಿಯಿತು. ರಾಜನು ಬಹಳ ತಳಮಳಗೊಂಡನು. ಅವನು ನಗರ ದ್ವಾರದಲ್ಲಿದ್ದ ಕೊಠಡಿಗೆ ಹೋಗಿ ಅಲ್ಲಿ ಗೋಳಾಡಿದನು. ಬಳಿಕ ಅಲ್ಲಿಂದ ತನ್ನ ಕೊಠಡಿಗೆ ಹೋಗುತ್ತಾ, “ನನ್ನ ಮಗನೇ, ಅಬ್ಷಾಲೋಮನೇ, ನನ್ನ ಮಗನಾದ ಅಬ್ಷಾಲೋಮನೇ! ನಿನಗೆ ಬದಲಾಗಿ ನಾನು ಸತ್ತಿದ್ದರೆ ಚೆನ್ನಾಗಿತ್ತು. ನನ್ನ ಮಗನಾದ ಅಬ್ಷಾಲೋಮನೇ, ನನ್ನ ಮಗನೇ!” ಎಂದು ಗೋಳಾಡಿದನು.
“ಇದು ಸತ್ಯವೆಂಬುದಕ್ಕೆ ಪ್ರಧಾನಯಾಜಕರು ಮತ್ತು ಯೆಹೂದ್ಯರ ಹಿರೀನಾಯಕರ ಸಭೆಯವರೆಲ್ಲರು ಸಾಕ್ಷಿಗಳಾಗಿದ್ದಾರೆ. ಒಂದು ಸಲ, ಈ ನಾಯಕರು ನನಗೆ ಕೆಲವು ಪತ್ರಗಳನ್ನು ಕೊಟ್ಟರು. ದಮಸ್ಕ ಪಟ್ಟಣದಲ್ಲಿನ ಯೆಹೂದ್ಯ ಸಹೋದರರಿಗೆ ಆ ಪತ್ರಗಳನ್ನು ಬರೆಯಲಾಗಿತ್ತು. (ಯೇಸುವಿನ) ಶಿಷ್ಯರನ್ನು ಬಂಧಿಸಿ ದಂಡಿಸುವುದಕ್ಕಾಗಿ ಅವರನ್ನು ಜೆರುಸಲೇಮಿಗೆ ಎಳೆದುಕೊಂಡು ಬರಲು ನಾನು ಅಲ್ಲಿಗೆ ಹೋಗುತ್ತಿದ್ದೆ.
ಯೆಹೂದ್ಯರು ಪೌಲನಿಗೆ, “ನಿನ್ನ ಬಗ್ಗೆ ಜುದೇಯದಿಂದ ನಮಗೆ ಯಾವ ಪತ್ರಗಳೂ ಬಂದಿಲ್ಲ. ಅಲ್ಲಿಂದ ಪ್ರಯಾಣ ಮಾಡಿ ಬಂದ ನಮ್ಮ ಯೆಹೂದ್ಯ ಸಹೋದರರಲ್ಲಿ ಯಾರೂ ನಿನ್ನ ಬಗ್ಗೆ ಸುದ್ದಿಯನ್ನು ತರಲಿಲ್ಲ ಮತ್ತು ಕೆಟ್ಟದ್ದನ್ನು ಹೇಳಲಿಲ್ಲ. ನಿನ್ನ ಆಲೋಚನೆಗಳನ್ನು ನಾವು ಕೇಳಬಯಸುತ್ತೇವೆ. ಎಲ್ಲಾ ಕಡೆಗಳಲ್ಲಿರುವ ಜನರು ಈ ಗುಂಪಿನ (ಕ್ರೈಸ್ತರ) ವಿರೋಧವಾಗಿ ಮಾತಾಡುತ್ತಿದ್ದಾರೆ ಎಂಬುದು ನಮಗೆ ಗೊತ್ತಿದೆ” ಎಂದು ಹೇಳಿದರು.