Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 9:26 - ಪರಿಶುದ್ದ ಬೈಬಲ್‌

26 ಮತ್ತು “ಯಾವ ಸ್ಥಳದಲ್ಲಿ ದೇವರು, ‘ನೀವು ನನ್ನ ಜನರಲ್ಲ’ ಎಂದು ಹೇಳಿದ್ದನೋ ಅದೇ ಸ್ಥಳದಲ್ಲಿ ಅವರನ್ನು ಜೀವವುಳ್ಳ ದೇವರ ಮಕ್ಕಳೆಂದು ಕರೆಯಲಾಗುವುದು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಮತ್ತು ಯಾವ ಸ್ಥಳದಲ್ಲಿ ‘ನೀವು ನನ್ನ ಜನರಲ್ಲವೆಂದು’ ಅವರಿಗೆ ಹೇಳಲ್ಪಟ್ಟಿತೋ ಆ ಸ್ಥಳದಲ್ಲಿಯೇ ಅವರು ‘ಜೀವವುಳ್ಳ ದೇವರ ಮಕ್ಕಳು ಎನಿಸಿಕೊಳ್ಳುವರು’” ಎಂಬುದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 “ ‘ನೀವು ನನ್ನ ಜನರಲ್ಲ’ ಎಂದು ಯಾವ ಸ್ಥಳದಲ್ಲಿ ಬರೆಯಲಾಗಿತ್ತೋ ಅದೇ ಸ್ಥಳದಲ್ಲಿ ‘ಅವರನ್ನು ಜೀವಂತ ದೇವರ ಮಕ್ಕಳು ಎಂದು ಕರೆಯಲಾಗುವುದು.’ “

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಮತ್ತು ಯಾವ ಸ್ಥಳದಲ್ಲಿ - ನೀವು ನನ್ನ ಜನರಲ್ಲವೆಂದು ಅವರಿಗೆ ಹೇಳಲ್ಪಟ್ಟಿತೋ ಆ ಸ್ಥಳದಲ್ಲಿಯೇ ಅವರು ಜೀವವುಳ್ಳ ದೇವರ ಪುತ್ರರು ಎನಿಸಿಕೊಳ್ಳುವರು ಎಂಬದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ಮತ್ತು, “ಯಾವ ಸ್ಥಳದಲ್ಲಿ ‘ನೀವು ನನ್ನ ಜನರಲ್ಲ,’ ಎಂದು ಅವರಿಗೆ ಹೇಳಲಾಗಿತ್ತೋ, ಆ ಸ್ಥಳದಲ್ಲಿಯೇ, ‘ಅವರು ಜೀವಸ್ವರೂಪಿಯಾದ ದೇವರ ಮಕ್ಕಳು,’ ಎಂದು ಕರೆಯಲಾಗುವರು,” ಎಂದು ದೇವರು ಹೇಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

26 ಅನಿ ಖಲ್ಯಾ ಜಾಗ್ಯಾರ್ ತೆಂಕಾ, ಮಿಯಾ ಮಾಜಿ ಲೊಕಾ ನ್ಹಯ್ ಮನುನ್ ಮಟಲ್ಲೆ ಹೊತ್ತೆ ತ್ಯಾಚ್ ಜಾಗ್ಯಾರ್ ತೆಂಕಾ ಝಿತ್ತ್ಯಾ ದೆವಾಚಿ ಪೊರಾ ಮನುನ್ ಬಲ್ವುನ್ ಹೊತಾ”.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 9:26
13 ತಿಳಿವುಗಳ ಹೋಲಿಕೆ  

ನೀವೆಲ್ಲರೂ ಕ್ರಿಸ್ತನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿದ್ದರಿಂದ ಕ್ರಿಸ್ತನನ್ನೇ ಧರಿಸಿಕೊಂಡಿರಿ. ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯಿಡುವುದರ ಮೂಲಕ ನೀವೆಲ್ಲರೂ ದೇವರ ಮಕ್ಕಳಾಗಿದ್ದೀರೆಂಬುದನ್ನು ಇದು ತೋರಿಸುತ್ತದೆ.


ನಾವು ದೇವರ ಮಕ್ಕಳಾಗಿದ್ದೇವೆಂದು ಪವಿತ್ರಾತ್ಮನು ತಾನೇ ನಮ್ಮ ಅಂತರಾತ್ಮದೊಂದಿಗೆ ಹೇಳುತ್ತಾನೆ.


ನಾನು ಉತ್ತರಕ್ಕೆ ‘ನನ್ನ ಜನರನ್ನು ಬಿಟ್ಟುಕೊಡು’ ಎಂದು ಹೇಳುವೆನು. ದಕ್ಷಿಣಕ್ಕೆ, ‘ನನ್ನ ಜನರನ್ನು ಸೆರೆಮನೆಯಲ್ಲಿರಿಸಬೇಡ’ ಎಂದು ಹೇಳುವೆನು. ಬಹುದೂರ ದೇಶಗಳಿಂದ ನನ್ನ ಮಕ್ಕಳನ್ನು ನನ್ನ ಬಳಿಗೆ ಕರೆದುಕೊಂಡು ಬಾ.


“ನಾನು ನಿಮ್ಮ ತಂದೆಯಾಗಿರುವೆನು ಮತ್ತು ನೀವು ನನ್ನ ಪುತ್ರಪುತ್ರಿಯರಾಗುವಿರಿ ಎನ್ನುತ್ತಾನೆ ಸರ್ವಶಕ್ತನಾದ ಪ್ರಭುವು.”


ಹೌದು, ಯೆಹೂದ್ಯರಿಗಾಗಿಯೂ ಲೋಕದಲ್ಲೆಲ್ಲಾ ಚದರಿಹೋಗಿರುವ ದೇವರ ಮಕ್ಕಳನ್ನೆಲ್ಲ ಒಂದುಗೂಡಿಸುವುದಕ್ಕಾಗಿಯೂ ಆತನು ಸಾಯಲಿದ್ದನು.


ಸೀಮೋನ್ ಪೇತ್ರನು, “ನೀನೇ ಬರಬೇಕಾಗಿರುವ ಕ್ರಿಸ್ತನು. ನೀನೇ ಜೀವಸ್ವರೂಪನಾದ ದೇವರ ಮಗನು” ಎಂದು ಉತ್ತರಕೊಟ್ಟನು.


“ನೀವು ನಿಮ್ಮ ದೇವರಾದ ಯೆಹೋವನ ಮಕ್ಕಳು. ನಿಮ್ಮಲ್ಲಿ ಯಾರಾದರೂ ಸತ್ತರೆ ನೀವು ತಲೆಬೋಳಿಸಿಕೊಂಡಾಗಲಿ ನಿಮ್ಮನ್ನು ಕತ್ತರಿಸಿಕೊಂಡಾಗಲಿ ನಿಮ್ಮ ದುಃಖವನ್ನು ಪ್ರದರ್ಶಿಸಕೂಡದು.


ನನ್ನ ಆತ್ಮವು ಜೀವಸ್ವರೂಪನಾದ ದೇವರಿಗಾಗಿ ಬಾಯಾರಿದೆ. ನಾನು ಯಾವಾಗ ಆತನನ್ನು ಸಂಧಿಸುವೆನು?


ನಾನೊಂದು ಹೊಸ ಶಾಸನವನ್ನು ಮಾಡುತ್ತಿದ್ದೇನೆ. ಈ ಶಾಸನವು ನನ್ನ ರಾಜ್ಯದ ಎಲ್ಲ ಭಾಗಗಳ ಜನರಿಗೆ ಅನ್ವಯಿಸುವುದು. ನೀವೆಲ್ಲರೂ ದಾನಿಯೇಲನ ದೇವರಲ್ಲಿ ಭಯಭಕ್ತಿಯುಳ್ಳವರಾಗಿರಬೇಕು. ದಾನಿಯೇಲನ ದೇವರೇ ಜೀವಸ್ವರೂಪನಾದ ದೇವರು. ಆತನು ನಿರಂತರವೂ ಇರುವಾತನಾಗಿದ್ದಾನೆ. ಆತನ ಸಾಮ್ರಾಜ್ಯವು ಎಂದಿಗೂ ಹಾಳಾಗುವದಿಲ್ಲ. ಆತನ ಆಧಿಪತ್ಯವು ಎಂದಿಗೂ ಮುಗಿಯುವದಿಲ್ಲ.


ಯಾರು ತಮ್ಮನ್ನು ದೇವರಾತ್ಮನ ನಡೆಸುವಿಕೆಗೆ ಒಪ್ಪಿಸಿಕೊಡುತ್ತಾರೊ ಅವರೇ ದೇವರ ಮಕ್ಕಳಾಗಿದ್ದಾರೆ.


ದೇವರು ತನ್ನ ಮಕ್ಕಳನ್ನು ಪ್ರತ್ಯಕ್ಷಪಡಿಸುವ ಕಾಲಕ್ಕಾಗಿ ದೇವರ ಸರ್ವಸೃಷ್ಟಿಯು ಉತ್ಸುಕತೆಯಿಂದ ಎದುರು ನೋಡುತ್ತಿದೆ. ಅದು ಸಂಭವಿಸಲೆಂದು ಇಡೀ ಜಗತ್ತೇ ಹಂಬಲಿಸುತ್ತಿದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು