ರೋಮಾಪುರದವರಿಗೆ 3:8 - ಪರಿಶುದ್ದ ಬೈಬಲ್8 “ಒಳ್ಳೆಯದಾಗುವಂತೆ ನಾವು ಕೇಡುಮಾಡೋಣ” ಎಂದು ಹೇಳುವುದಕ್ಕೂ ಅದಕ್ಕೂ ಯಾವ ವ್ಯತ್ಯಾಸವಿಲ್ಲ. ಅನೇಕ ಜನರು ನಮ್ಮನ್ನು ಟೀಕಿಸುತ್ತಾರೆ ಮತ್ತು ನಾವು ಅಂಥ ಸಂಗತಿಗಳನ್ನು ಬೋಧಿಸುತ್ತೇವೆ ಎಂದು ಹೇಳುತ್ತಾರೆ. ಆ ಜನರು ತಪ್ಪಿತಸ್ಥರಾಗಿದ್ದಾರೆ. ಅವರಿಗೆ ದಂಡನೆಯಾಗಲೇಬೇಕು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 “ಒಳ್ಳೆಯದಾಗುವಂತೆ, ಕೆಟ್ಟದ್ದನ್ನೇ ಏಕೆ ಮಾಡಬಾರದು?” ಈ ರೀತಿ ಸ್ವತಃ ನಾನೇ ಬೋಧಿಸುತ್ತಿರುವುದಾಗಿ ಕೆಲವರು ನನ್ನನ್ನು ದೂಷಿಸಿ ನನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ಅಂಥವರಿಗೆ ತಕ್ಕ ಶಿಕ್ಷೆಯಾಗುವುದು ನ್ಯಾಯಸಮ್ಮತವಾದುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 “ಒಳ್ಳೆಯದಾಗುವಂತೆ, ಕೆಟ್ಟದ್ದನ್ನೇ ಏಕೆ ಮಾಡಬಾರದು?” - ಈ ರೀತಿ ಸ್ವತಃ ನಾನೇ ಬೋಧಿಸುತ್ತಿರುವುದಾಗಿ ಕೆಲವರು ನನ್ನನ್ನು ದೂಷಿಸಿ ನನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ಅಂಥವರಿಗೆ ತಕ್ಕ ಶಿಕ್ಷೆಯಾಗುವುದು ನ್ಯಾಯಸಮ್ಮತವಾದುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ಮೇಲು ಬರುವಂತೆ ಕೇಡು ಮಾಡೋಣ ಎಂದು ಯಾಕೆ ಹೇಳಬಾರದು? ಕೆಲವರು ನಮ್ಮನ್ನು ಕುರಿತು - ಇವರು ಹೀಗೆ ಬೋಧನೆಮಾಡುವವರೆಂದು ದೂಷಿಸಿ ಹೇಳುತ್ತಾರಲ್ಲ; ಅಂಥವರಿಗೆ ದಂಡನೆಯ ತೀರ್ಪಾಗುವದು ನ್ಯಾಯ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 “ಒಳ್ಳೆಯದಾಗುವಂತೆ ಕೆಟ್ಟದ್ದನ್ನು ಮಾಡೋಣ,” ಎಂದು ನಾವು ಹೇಳುತ್ತಿರುವುದಾಗಿ, ಕೆಲವರು ನಮ್ಮ ಬಗ್ಗೆ ದೂಷಿಸಿ ಹೇಳುವ ಪ್ರಕಾರ ನಾವೇಕೆ ಹೇಳಬಾರದು? ಅಂಥವರಿಗೆ ದಂಡನೆಯ ತೀರ್ಪಾಗುವುದು ನ್ಯಾಯವೇ! ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್8 ಅಶೆ ರ್‍ಹಾತಾನಾ ಬರೆಪಾನ್ ಯೆವ್‍ಸಾಟ್ನಿ ಅಮಿ ಬುರ್ಶೆ ಕಶ್ಯಾಕ್ ಕರುಚೆ ನ್ಹಯ್? ಹಿ ಸಗ್ಳಿ ವಿಶಯಾ ಸಾಂಗುನ್ ಉಲ್ಲಿ ಲೊಕಾ ಮಾಕಾ ತಿರಸ್ಕಾರ್ ಕರುನ್ ಅವ್ಮಾನ್ ಕರುಲ್ಯಾತ್! ಅಶೆ ಕರ್‍ತಲ್ಯಾ ತೆಂಕಾ ತೆನಿ ಕರಲ್ಲ್ಯಾಕ್ ಶಿಕ್ಷಾ ದಿತಲೆ ಸಮಾಚ್ ಹಾಯ್. ಅಧ್ಯಾಯವನ್ನು ನೋಡಿ |
ಪಾಪ ಮತ್ತು ಧರ್ಮಶಾಸ್ತ್ರ ಇವೆರಡೂ ಒಂದೇ ಎಂದು ನಾನು ಹೇಳುತ್ತಿರುವುದಾಗಿ ನೀವು ಭಾವಿಸಬಹುದು. ಆದರೆ ಅದು ನಿಜವಲ್ಲ. ಪಾಪವೆಂದರೆ ಏನೆಂಬುದನ್ನು ಕಲಿತುಕೊಳ್ಳಲು ಧರ್ಮಶಾಸ್ತ್ರವೊಂದೇ ನನಗೆ ಏಕೈಕ ಮಾರ್ಗವಾಗಿದೆ. ಧರ್ಮಶಾಸ್ತ್ರವಿಲ್ಲದಿದ್ದರೆ, ದುರಾಶೆ ಎಂದರೆ ಏನೆಂಬುದೇ ನನಗೆ ತಿಳಿಯುತ್ತಿರಲಿಲ್ಲ. “ಬೇರೆಯವರ ವಸ್ತುಗಳನ್ನು ನೀವು ಆಶಿಸಕೂಡದು” ಎಂದು ಧರ್ಮಶಾಸ್ತ್ರವು ಹೇಳಿದ್ದರಿಂದಲೇ ಅದು ನನಗೆ ತಿಳಿಯಿತು.