Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 15:27 - ಪರಿಶುದ್ದ ಬೈಬಲ್‌

27 ಮಕೆದೋನಿಯ ಮತ್ತು ಅಖಾಯದ ವಿಶ್ವಾಸಿಗಳು ಸ್ವಂತ ಇಷ್ಟದಿಂದಲೇ ಈ ಕಾರ್ಯವನ್ನು ಮಾಡಿದ್ದಾರೆ. ಅದು ಅವರ ಕರ್ತವ್ಯವೂ ಹೌದು. ಯೆಹೂದ್ಯರಲ್ಲದ ಅವರು ಯೆಹೂದ್ಯರ ಆತ್ಮಿಕ ಅಶೀರ್ವಾದಗಳಲ್ಲಿ ಪಾಲು ಹೊಂದಿರುವುದರಿಂದ ಅವರು ತಮ್ಮಲ್ಲಿರುವಂಥವುಗಳ ಮೂಲಕ ಅವರಿಗೆ ನೆರವು ನೀಡುವುದು ಅವರ ಹೊಣೆಯಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಇದನ್ನು ಮಾಡುವುದಕ್ಕೆ ಇವರು ಇಷ್ಟಪಟ್ಟಿದ್ದಲ್ಲದೆ ಇವರು ಅವರ ಹಂಗಿನವರಾಗಿದ್ದಾರೆ. ಹೇಗೆಂದರೆ ಅನ್ಯಜನರು ಅವರ ಆತ್ಮ ಸಂಬಂಧವಾದ ಸಂಪತ್ತಿಗೆ ಪಾಲುಗಾರರಾದ ಮೇಲೆ ಲೋಕಸಂಬಂಧವಾದ ಕಾರ್ಯಗಳಲ್ಲಿ ಅವರಿಗೆ ಸೇವೆ ಮಾಡುವ ಹಂಗಿನಲ್ಲಿದ್ದಾರಲ್ಲವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 ಅವರ ಸ್ವಂತ ಇಷ್ಟದಿಂದಲೇ ಮುಂದೆ ಬಂದಿದ್ದಾರೆ. ಹಾಗೆ ಮಾಡುವುದು ಅವರ ಕರ್ತವ್ಯವೂ ಹೌದು. ಏಕೆಂದರೆ, ಯೆಹೂದ್ಯರ ಆಧ್ಯಾತ್ಮಿಕ ಸಂಪತ್ತಿನಲ್ಲಿ ಪಾಲುಗಾರರಾಗಿರುವ ಅನ್ಯಧರ್ಮೀಯರು ತಮ್ಮ ಐಹಿಕಸಂಪತ್ತಿನಲ್ಲಿ ಅವರಿಗೆ ಪಾಲು ನೀಡಲು ಕರ್ತವ್ಯಬದ್ಧರಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಇದನ್ನು ಮಾಡುವದಕ್ಕೆ ಇವರು ಇಷ್ಟಪಟ್ಟದ್ದಲ್ಲದೆ ಇವರು ಅವರ ಹಂಗಿನವರಾಗಿದ್ದಾರೆ. ಹೇಗಂದರೆ ಅನ್ಯಜನರು ಅವರ ಆತ್ಮಸಂಬಂಧವಾದ ಸಂಪತ್ತಿಗೆ ಪಾಲುಗಾರರಾದ ಮೇಲೆ ಲೋಕಸಂಬಂಧವಾದ ಕಾರ್ಯಗಳಲ್ಲಿ ಅವರಿಗೆ ಸೇವೆಮಾಡುವ ಹಂಗಿನಲ್ಲಿದ್ದಾರಲ್ಲವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 ಅವರು ಅದನ್ನು ಮಾಡಲು ಇಷ್ಟಪಟ್ಟದ್ದಲ್ಲದೆ, ಅದು ಕರ್ತವ್ಯವೂ ಆಗಿದೆ. ಹೌದು, ಯೆಹೂದ್ಯರಲ್ಲದವರು ಯೆಹೂದ್ಯರ ಆತ್ಮಿಕ ಆಶೀರ್ವಾದಗಳಲ್ಲಿ ಪಾಲುಗೊಂಡಿರುವುದಾದರೆ ತಮ್ಮ ಲೌಕಿಕ ವಿಷಯಗಳಲ್ಲಿ ಅವರೊಂದಿಗೆ ಹಂಚಿಕೊಳ್ಳುವುದು ಅವರ ಕರ್ತವ್ಯವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

27 ತೆನಿ ತೆ ಅಪ್ನಾಚ್ಯಾ ಸ್ವತಾಚ್ಯಾ ಮನಾನಿ ಕರ್‍ಲ್ಯಾನಾತ್; ಜಾಲ್ಯಾರ್‍ಬಿ ತೆನಿ ಅಶೆ ಕರ್‍ತಲೆ ಅಪ್ನಾಚೊ ಕರ್ತವ್ಯ್ ಮನುನ್ ಚಿಂತ್ಲ್ಯಾನಾತ್, ಹೆಕಾ ಕಾರನ್ ಯೆವ್ಡೆಚ್: ಜರ್ ಜುದೆವ್ ನ್ಹಯ್ ಹೊತ್ತ್ಯಾಕ್ನಿ ದೆನ್ಗಿ ಗಾವ್ಲಾ ತರ್ ಜುದೆವಾಂಚ್ಯಾ ಆಂಗಾಕ್ ಪಾಜೆ ಹೊಲ್ಲ್ಯಾ ಗರ್ಜಾಂಚ್ಯಾಸಾಟಿ ಕಾಯ್ ತರ್ ದಿತಲೆ ಜುದೆವ್ ನ್ಹಯ್ ಹೊತ್ತ್ಯಾಂಚೆ ಕರ್ತವ್ಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 15:27
6 ತಿಳಿವುಗಳ ಹೋಲಿಕೆ  

ನಾವು ನಿಮ್ಮ ಮಧ್ಯದಲ್ಲಿ ಆತ್ಮಿಕ ಬೀಜವನ್ನು ಬಿತ್ತಿದೆವು. ಆದ್ದರಿಂದ ಈ ಜೀವನಕ್ಕೆ ಬೇಕಾದ ದೈನಂದಿನ ಅಗತ್ಯತೆಗಳನ್ನು ನಿಮ್ಮಿಂದ ನಾವು ಪಡೆದುಕೊಳ್ಳಬೇಕು. ಖಂಡಿತವಾಗಿ ಇದು ಹೆಚ್ಚೇನೂ ಅಲ್ಲ.


ದೇವರ ವಾಕ್ಯವನ್ನು ಕಲಿತುಕೊಳ್ಳುವವನು, (ತನಗೆ) ಕಲಿಸುವವನಿಗೆ ತನ್ನಲ್ಲಿರುವ ಎಲ್ಲಾ ಒಳ್ಳೆತನಗಳಲ್ಲಿ ಪಾಲು ಕೊಡತಕ್ಕದ್ದು.


ಪೌಲನಾದ ನಾನು ನನ್ನ ಸ್ವಂತ ಕೈಗಳಿಂದ ಇದನ್ನು ಬರೆಯುತ್ತಿದ್ದೇನೆ. ಒನೇಸಿಮನು ನಿನಗೆ ಏನಾದರೂ ಕೊಡಬೇಕಾಗಿದ್ದರೆ ನಾನು ಅದನ್ನು ಕೊಡುತ್ತೇನೆ. ನಿನ್ನ ಆತ್ಮಿಕ ಜೀವಿತದ ವಿಷಯದಲ್ಲಿ ನೀನು ನಿನಗೆ ನನಗೆಷ್ಟು ಋಣಿಯಾಗಿರುವೆ ಎಂದು ನಾನೇನೂ ಹೇಳುವುದಿಲ್ಲ.


ಇದು, ಆಲಿವ್ ಮರದ ಕೆಲವು ಕೊಂಬೆಗಳು ಮುರಿಯಲ್ಪಟ್ಟಾಗ, ಕಾಡುಆಲಿವ್ ಮರದ ಕೊಂಬೆಯೊಂದು ಮೊದಲಿನ ಆಲಿವ್ ಮರಕ್ಕೆ ಸೇರಿಕೊಂಡಂತಿದೆ. ಯೆಹೂದ್ಯರಲ್ಲದ ನೀವು ಕಾಡುಕೊಂಬೆಗೆ ಸಮಾನವಾಗಿದ್ದೀರಿ. ಆದರೆ ಈಗ ನೀವು ಮೊದಲನೆ ಮರದ (ಯೆಹೂದ್ಯರ) ಶಕ್ತಿಯಲ್ಲಿಯೂ ಜೀವದಲ್ಲಿಯೂ ಪಾಲುಗಾರರಾಗಿದ್ದೀರಿ.


ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸಿದಂತೆಯೇ ನಮ್ಮ ಪಾಪಗಳನ್ನು ಕ್ಷಮಿಸು.


ಧರ್ಮಶಾಸ್ತ್ರವು ಆತ್ಮಿಕವಾದದ್ದೆಂದು ನಾವು ಬಲ್ಲೆವು. ಆದರೆ ನಾನು ಆತ್ಮಿಕನಲ್ಲ. ನಾನು ಪಾಪಕ್ಕೆ ಮಾರಲ್ಪಟ್ಟ ಗುಲಾಮನೋ ಎಂಬಂತೆ ಪಾಪವು ನನ್ನನ್ನು ಆಳುತ್ತದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು