ರೋಮಾಪುರದವರಿಗೆ 15:13 - ಪರಿಶುದ್ದ ಬೈಬಲ್13 ನಿರೀಕ್ಷೆಯನ್ನು ಕೊಡುವ ದೇವರು ನಂಬಿಕೆಯಿಂದ ಉಂಟಾಗುವ ಆನಂದವನ್ನೂ ಸಮಾಧಾನವನ್ನೂ ನಿಮಗೆ ಸಂಪೂರ್ಣವಾಗಿ ದಯಪಾಲಿಸಲೆಂದು ನಾನು ಪ್ರಾರ್ಥಿಸುತ್ತೇನೆ. ಆಗ ಪವಿತ್ರಾತ್ಮನ ಶಕ್ತಿಯ ಮೂಲಕ ನಿರೀಕ್ಷೆಯು ನಿಮ್ಮಲ್ಲಿ ತುಂಬಿ ಹೊರಸೂಸುವುದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ನಿರೀಕ್ಷೆಯನ್ನು ಕೊಡುವ ದೇವರು ಪವಿತ್ರಾತ್ಮನ ಶಕ್ತಿಯಿಂದ ಸಮೃದ್ಧವಾದ ನಿರೀಕ್ಷೆಯುಳ್ಳವರಾಗಿ ನಂಬುವುದರಿಂದ ಉಂಟಾಗುವ ಸಂತೋಷವನ್ನೂ ಮನಶ್ಯಾಂತಿಯನ್ನೂ ನಿಮಗೆ ಪರಿಪೂರ್ಣವಾಗಿ ದಯಪಾಲಿಸಲ್ಲಿ, ನೀವು ಪವಿತ್ರಾತ್ಮನಲ್ಲಿ ಬಲಗೊಂಡವರಾಗಿ ನಿರೀಕ್ಷೆಯಲ್ಲಿ ಅಭಿವೃದ್ಧಿಯನ್ನು ಹೊಂದುವಂತೆ ಅನುಗ್ರಹಿಸಲಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)13 ಭರವಸೆಯ ಮೂಲವಾಗಿರುವ ದೇವರಲ್ಲಿರುವ ನಮ್ಮ ವಿಶ್ವಾಸದ ಮೂಲಕ ಲಭಿಸುವ ಆನಂದವನ್ನೂ ಶಾಂತಿಸಮಾಧಾನವನ್ನೂ ನಿಮಗೆ ಸಮೃದ್ಧಿಯಾಗಿ ದಯಪಾಲಿಸಲಿ. ನಿಮ್ಮ ಭರವಸೆ ಪವಿತ್ರಾತ್ಮ ಅವರ ಪ್ರಭಾವದಿಂದ ಪ್ರವರ್ಧಿಸುವಂತಾಗಲಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)13 ನಿರೀಕ್ಷೆಯ ಮೂಲನಾದ ದೇವರು ನಂಬಿಕೆಯಿಂದುಂಟಾಗುವ ಸಂತೋಷವನ್ನೂ ಮನಶ್ಶಾಂತಿಯನ್ನೂ ನಿಮಗೆ ಪರಿಪೂರ್ಣವಾಗಿ ದಯಪಾಲಿಸಿ ನೀವು ಪವಿತ್ರಾತ್ಮನ ಬಲಗೂಡಿದವರಾಗಿ ನಿರೀಕ್ಷೆಯಲ್ಲಿ ಅಭಿವೃದ್ಧಿಯನ್ನು ಹೊಂದುವಂತೆ ಅನುಗ್ರಹಿಸಲಿ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ13 ನಿರೀಕ್ಷೆಯ ದೇವರು, ನೀವು ಪವಿತ್ರಾತ್ಮನ ಶಕ್ತಿಯಿಂದ ನಿಮ್ಮ ನಿರೀಕ್ಷೆಯನ್ನು ಹೆಚ್ಚಿಸಿ, ನೀವು ನಿಮ್ಮ ವಿಶ್ವಾಸದಿಂದ ಸಕಲ ಸಂತೋಷದಿಂದಲೂ ಸಮಾಧಾನದಿಂದಲೂ ಪ್ರವಾಹಿಸುವಂತೆ ಮಾಡಲಿ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್13 ದೆವುಚ್ ಬರೊಶ್ಯಾಚೊ ಮುಳ್, ತುಮಿ ತೆಚ್ಯಾ ವರ್‍ತಿ ಥವಲ್ಲ್ಯಾ ವಿಶ್ವಾಸಾಚ್ಯಾ ವೈನಾ ತುಮ್ಕಾ ತೊ ಪುರಾ ಸಂತೊಸಾನ್ ಅನಿ ಸಮಾದಾನಾನ್ ಭರುಂದಿತ್, ಅಶೆ ಪವಿತ್ರ್ ಆತ್ಮ್ಯಾಚ್ಯಾ ಬಳಾನ್ ತುಮ್ಚೊ ಬರೊಸೊ ವಾಡುನ್ಗೆತ್ ಜಾಂವ್ದಿತ್. ಅಧ್ಯಾಯವನ್ನು ನೋಡಿ |