ರೋಮಾಪುರದವರಿಗೆ 11:22 - ಪರಿಶುದ್ದ ಬೈಬಲ್22 ಆದ್ದರಿಂದ ದೇವರು ದಯೆ ಉಳ್ಳವನಾಗಿದ್ದರೂ ಬಹುಕಠಿಣನೂ ಆಗಿದ್ದಾನೆ ಎಂಬುದನ್ನು ಗಮನಿಸು. ದೇವರು ತನ್ನನ್ನು ಹಿಂಬಾಲಿಸದಿರುವ ಜನರನ್ನು ದಂಡಿಸುತ್ತಾನೆ. ಆದರೆ ನೀನು ದೇವರ ದಯೆಯನ್ನು ಆಶ್ರಯಿಸಿಕೊಂಡಿದ್ದರೆ, ದೇವರು ನಿನಗೆ ದಯಾಳುವಾಗಿರುತ್ತಾನೆ. ಇಲ್ಲವಾದರೆ, ನಿನ್ನನ್ನು ಮರದಿಂದ ಕಡಿದುಹಾಕಲಾಗುವುದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201922 ಆದ್ದರಿಂದ ದೇವರ ದಯೆಯನ್ನೂ, ದಂಡನೆಯನ್ನು ನೋಡು; ಬಿದ್ದವರಿಗೆ ದಂಡನೆಯನ್ನೂ, ನೀನು ದೇವರ ದಯೆಯನ್ನು ಆಶ್ರಯಿಸಿಕೊಂಡೇ ಇದ್ದರೆ ಆತನ ದಯೆಯನ್ನು ಹೊಂದುವಿ. ಇಲ್ಲವಾದರೆ ನಿನ್ನನ್ನೂ ಕಡಿದುಹಾಕುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)22 ಇಲ್ಲ, ದೇವರ ಕರುಣೆ ಹಾಗೂ ಕಠಿಣತೆಯನ್ನು ಗಮನಿಸು. ಬಿದ್ದವರತ್ತ ಕಾಠಿಣ್ಯವನ್ನೂ ನಿನ್ನತ್ತ ಕರುಣೆಯನ್ನೂ ತೋರಿಸಿದ್ದಾರೆ. ನೀನು ಅವರ ಕರುಣೆಯನ್ನು ಆಶ್ರಯಿಸಿ ನಡೆಯಬೇಕು. ಇಲ್ಲವಾದರೆ ನಿನ್ನನ್ನು ಆ ರೆಂಬೆಗಳಂತೆ ಕಡಿದುಹಾಕಲಾಗುತ್ತದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)22 ಆದದರಿಂದ ದೇವರ ದಯೆಯನ್ನೂ ಕಾಠಿಣ್ಯವನ್ನೂ ನೋಡು; ಬಿದ್ದವರ ಕಡೆಗೆ ಕಾಠಿಣ್ಯ; ನಿನ್ನ ಕಡೆಗೆ ನೀನು ದೇವರ ದಯೆಯನ್ನು ಆಶ್ರಯಿಸಿಕೊಂಡೇ ಇದ್ದರೆ ಆತನ ದಯೆ; ಇಲ್ಲವಾದರೆ ನಿನ್ನನ್ನೂ ಕಡಿದುಹಾಕುವನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ22 ಆದ್ದರಿಂದ, ದೇವರ ದಯೆಯನ್ನೂ ಕಾಠಿಣ್ಯವನ್ನೂ ನೋಡು. ಬಿದ್ದವರ ಕಡೆಗೆ ಅವರ ಕಾಠಿಣ್ಯವಿದೆ, ನೀನು ದೇವರ ದಯೆಯಲ್ಲಿಯೇ ಮುಂದುವರಿಯುವುದಾದರೆ ನಿನ್ನ ಮೇಲೆ ದೇವರ ದಯೆಯಿರುವುದು. ಇಲ್ಲದೆ ಹೋದರೆ, ನೀನು ಕೂಡ ಕಡಿದುಹಾಕಲಾಗುವೆ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್22 ಹಿತ್ತೆ ಅಮ್ಕಾ ದೆವಾಚಿ ದಯಾ ಕಶಿ ಹಾಯ್, ತೆಚೆ ಕಟೊರ್‍ಪಾನ್‍ಬಿ ಕಶೆ ಹಾಯ್ ಮನುನ್ ದಿಸುನ್ ಯೆತಾ. ವಿಶ್ವಾಸಾತ್ ಪಡುನ್ ಗೆಲ್ಲ್ಯಾಕ್ನಿ ತೊ ಕಟೊರ್, ಖರೆ ತಿಯಾ ತೆಚ್ಯಾ ದಯಾಳ್‍ಪಾನಾಚ್ಯಾ ಅಸ್ರ್ಯಾತ್ ಹಾಸ್ ಜಾಲ್ಯಾರ್ ತುಕಾ ತೊ ದಯಾಳ್‍ಪಾನ್ ದಾಕ್ವುತಾ, ನಾಹೊಲ್ಯಾರ್ ತುಕಾಬಿ ತೊ ಕಾತ್ರುನ್ ಟಾಕ್ತಾ. ಅಧ್ಯಾಯವನ್ನು ನೋಡಿ |
ಬಾರ್ನಬನು ಒಳ್ಳೆಯ ಮನುಷ್ಯನಾಗಿದ್ದನು. ಅವನು ಪವಿತ್ರಾತ್ಮಭರಿತನಾಗಿದ್ದನು ಮತ್ತು ಪೂರ್ಣನಂಬಿಕೆಯುಳ್ಳವನಾಗಿದ್ದನು. ಬಾರ್ನಬನು ಅಂತಿಯೋಕ್ಯಕ್ಕೆ ಹೋದಾಗ, ದೇವರು ಆ ಜನರನ್ನು ಅಧಿಕವಾಗಿ ಆಶೀರ್ವದಿಸಿರುವುದನ್ನು ಕಂಡನು. ಇದರಿಂದ ಬಾರ್ನಬನಿಗೆ ತುಂಬಾ ಸಂತೋಷವಾಯಿತು. ಅಂತಿಯೋಕ್ಯದಲ್ಲಿದ್ದ ವಿಶ್ವಾಸಿಗಳನ್ನೆಲ್ಲ ಅವನು ಪ್ರೋತ್ಸಾಹಿಸಿದನು. ಅವನು ಅವರಿಗೆ, “ನಿಮ್ಮ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬೇಡಿ. ಪ್ರಭುವಿಗೆ ನಿಮ್ಮ ಪೂರ್ಣಹೃದಯಗಳಿಂದ ಯಾವಾಗಲೂ ವಿಧೇಯರಾಗಿರಿ” ಎಂದು ಹೇಳಿದನು. ಅನೇಕ ಜನರು ಪ್ರಭುವಾದ ಯೇಸುವಿನ ಹಿಂಬಾಲಕರಾದರು.
ನಿಮ್ಮ ನಂಬಿಕೆಯ ಬಗ್ಗೆ ತಿಳಿದುಕೊಳ್ಳಬೇಕೆಂಬ ಕಾರಣದಿಂದಲೇ ನಾನು ತಿಮೊಥೆಯನನ್ನು ನಿಮ್ಮ ಬಳಿಗೆ ಕಳುಹಿಸಿದೆನು. ಇನ್ನೂ ಹೆಚ್ಚುಕಾಲ ಕಾಯಲು ಸಾಧ್ಯವಿಲ್ಲವೆನಿಸಿದ್ದರಿಂದಲೇ ನಾನು ಅವನನ್ನು ಕಳುಹಿಸಿದೆನು. ಜನರನ್ನು ಶೋಧನೆಗೆ ಒಳಪಡಿಸುವ ಸೈತಾನನು ನಿಮ್ಮನ್ನು ಈಗಾಗಲೇ ಶೋಧನೆಗಳಿಂದ ಸೋಲಿಸಿರಬಹುದೆಂಬ ಭಯ ನನಗಿತ್ತು. ಒಂದುವೇಳೆ, ಹಾಗೇನಾದರೂ ಆಗಿದ್ದರೆ ನಮ್ಮ ಪ್ರಯಾಸವೆಲ್ಲಾ ನಿರರ್ಥಕವಾಗುತ್ತಿತ್ತು.
“ಒಳ್ಳೆಯವನು ತನ್ನ ಒಳ್ಳೆಯತನವನ್ನು ತೊರೆದು ಕೆಟ್ಟದ್ದನ್ನು ಮಾಡಿದರೆ, ನಾನು ಅವನ ಹಾದಿಗೆ ತಡೆಯನ್ನು ಹಾಕಿ ಅವನು ಬೀಳುವಂತೆ ಮಾಡುವೆನು; ಅವನು ಸಾಯುವನು. ನೀನು ಅವನನ್ನು ಎಚ್ಚರಿಸಲಿಲ್ಲವಾದ್ದರಿಂದ ಅವನು ತನ್ನ ಪಾಪದ ನಿಮಿತ್ತ ಸಾಯುವನು. ಆದರೆ ಅವನ ಮರಣಕ್ಕೆ ನಾನು ನಿನ್ನನ್ನೆ ಹೊಣೆಗಾರನನ್ನಾಗಿ ಮಾಡುತ್ತೇನೆ. ಜನರು ಅವನ ಒಳ್ಳೆಯ ಕಾರ್ಯಗಳನ್ನು ಜ್ಞಾಪಿಸಿಕೊಳ್ಳುವುದಿಲ್ಲ.