ರೋಮಾಪುರದವರಿಗೆ 1:5 - ಪರಿಶುದ್ದ ಬೈಬಲ್5 ದೇವರು ಕ್ರಿಸ್ತನ ಮೂಲಕವಾಗಿ ನನಗೆ ಅಪೊಸ್ತಲನೆಂಬ ವಿಶೇಷ ಕೆಲಸವನ್ನು ಕೊಟ್ಟನು. ದೇವರಲ್ಲಿ ನಂಬಿಕೆಯಿಡುವಂತೆಯೂ ದೇವರಿಗೆ ವಿಧೇಯರಾಗುವಂತೆಯೂ ಎಲ್ಲಾ ಜನಾಂಗಗಳ ಜನರನ್ನು ನಡೆಸಬೇಕೆಂದು ದೇವರು ನನಗೆ ಈ ಕೆಲಸವನ್ನು ಕೊಟ್ಟನು. ನಾನು ಈ ಕೆಲಸವನ್ನು ಕ್ರಿಸ್ತನಿಗಾಗಿ ಮಾಡುತ್ತೇನೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಆತನು ವಂಶಕ್ರಮದಿಂದ ದಾವೀದನ ಸಂತಾನದಲ್ಲಿ ಹುಟ್ಟಿದವನೂ ಪವಿತ್ರವಾದ ಆತ್ಮನ ಶಕ್ತಿಗನುಸಾರವಾಗಿ ಸತ್ತಮೇಲೆ ಜೀವಿತನಾಗಿ ಎದ್ದು ಬಂದು ದೇವಕುಮಾರನೆಂದು ನಿರ್ಣಯಿಸಲ್ಪಟ್ಟವನೂ ಆಗಿದ್ದಾನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 ಇವರ ನಾಮ ಮಹಿಮೆಗೋಸ್ಕರವಾಗಿಯೇ ಸರ್ವಜನಾಂಗಗಳೂ ಇವರನ್ನು ವಿಶ್ವಾಸಿಸಿ, ವಿಧೇಯರಾಗಿ ನಡೆಯುವಂತೆ ಮಾಡಲು ಪ್ರೇಷಿತನಾಗುವ ಸೌಭಾಗ್ಯ ನನ್ನದಾಯಿತು. ಆ ಯೇಸುಕ್ರಿಸ್ತರ ಮುಖಾಂತರವೇ ದೇವರು ಈ ಭಾಗ್ಯವನ್ನು ನನಗೆ ಅನುಗ್ರಹಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ಆತನ ಹೆಸರಿನ ಪ್ರಸಿದ್ಧಿಗಾಗಿ ಎಲ್ಲಾ ಅನ್ಯಜನಗಳಲ್ಲಿ ನಂಬಿಕೆಯೆಂಬ ವಿಧೇಯತ್ವ ಉಂಟಾಗುವದಕ್ಕೋಸ್ಕರ ನಾವು ಆತನ ಮೂಲಕವಾಗಿ ಕೃಪೆಯನ್ನೂ ಅಪೊಸ್ತಲತನವನ್ನೂ ಹೊಂದಿದೆವು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 ಯೇಸುವಿನ ನಾಮದ ಮಹಿಮೆಗಾಗಿ ಯೆಹೂದ್ಯರಲ್ಲದವರಲ್ಲಿಯೂ ನಂಬಿಕೆಯ ವಿಧೇಯತೆ ಉಂಟಾಗುವುದಕ್ಕಾಗಿ ನಾವು ಯೇಸುವಿನ ಮೂಲಕವಾಗಿ ಕೃಪೆಯನ್ನೂ ಅಪೊಸ್ತಲರಾಗಿರುವುದನ್ನೂ ಹೊಂದಿದೆವು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್5 ಅಶೆ ವಿಶ್ವಾಸಾತ್ ಅನಿ ದೆವಾಕ್ ಖಾಲ್ತಿ ಹೊವ್ನ್ ಚಲ್ತಲ್ಯಾತ್ ಸಗ್ಳ್ಯಾ ದೆಶಾನಿತ್ಲ್ಯಾ ಲೊಕಾಕ್ನಿ ಚಾಲ್ವುನ್ ನ್ಹೆವ್‍ಸಾಟ್ನಿ, ತೆಚ್ಯಾ ವೈನಾ ಕ್ರಿಸ್ತಾ ಸಾಟ್ನಿ ಎಕ್ ಅಪೊಸ್ತಲ್ ಹೊತಲೊ ಅವ್ಕಾಸ್ ದೆವಾನ್ ಮಾಕಾ ಕರುನ್ ದಿಲ್ಯಾನ್, ಅಧ್ಯಾಯವನ್ನು ನೋಡಿ |
ದೇವರು ನನಗೆ ವಿಶೇಷವಾದ ಒಂದು ವರವನ್ನು ಕೊಟ್ಟಿದ್ದಾನೆ. ಆದಕಾರಣವೇ, ನಿಮ್ಮಲ್ಲಿರುವ ಪ್ರತಿಯೊಬ್ಬರಿಗೂ ಈ ಸಂಗತಿಗಳನ್ನು ತಿಳಿಸುತ್ತಿದ್ದೇನೆ. ನೀವು ನಿಮ್ಮ ನಿಜವಾದ ಯೋಗ್ಯತೆಗಿಂತಲೂ ಹೆಚ್ಚಾಗಿ ನಿಮ್ಮ ವಿಷಯದಲ್ಲಿ ಭಾವಿಸಿಕೊಳ್ಳಬೇಡಿ. ನೀವು ನಿಮ್ಮ ವಿಷಯದಲ್ಲಿ ಏನು ಭಾವಿಸಿಕೊಂಡರೂ ಆ ಭಾವನೆಯು ನಿಮ್ಮ ನಿಜವಾದ ಯೋಗ್ಯತೆಗೆ ಸರಿಸಮಾನವಾಗಿರಬೇಕು. ದೇವರು ನಿಮಗೆ ಎಂಥ ನಂಬಿಕೆಯನ್ನು ಕೊಟ್ಟಿದ್ದಾನೋ ಆ ನಂಬಿಕೆಗೆ ತಕ್ಕಂತೆ ನಿಮ್ಮ ವಿಷಯದಲ್ಲಿ ಭಾವಿಸಿಕೊಳ್ಳಿರಿ.
ನಿಮ್ಮಲ್ಲಿ ಕೆಲವರಲ್ಲಿ ಯಜ್ಞಕ್ಕೆ ಬೇಕಾಗಿರುವ ಒಳ್ಳೆಯ ಗಂಡು ಪಶುಗಳು ಇದ್ದಾಗ್ಯೂ ಅವರು ನನಗೆ ಅವುಗಳನ್ನು ಸಮರ್ಪಿಸುವದಿಲ್ಲ. ಕೆಲವರು ಕಳಂಕವಿಲ್ಲದ ಪಶುಗಳನ್ನು ನನಗೆ ತರುತ್ತಾರೆ. ಅವರು ಅಂಥಾ ಆರೋಗ್ಯಕರ ಪಶುಗಳನ್ನು ನನಗೆ ಸಮರ್ಪಿಸಲು ವಾಗ್ದಾನ ಮಾಡುವರು. ಆದರೆ ಗುಪ್ತವಾಗಿ ಅವರು ಆ ಪಶುವನ್ನು ಬದಲಿಸಿ ನನಗೆ ರೋಗಿಯಾದ ಪಶುಗಳನ್ನು ಕೊಡುತ್ತಾರೆ. ಅವರಿಗೆ ದುರ್ದೆಶೆ ಸಂಭವಿಸಲಿರುವದು. ನಾನು ದೊಡ್ಡ ಅರಸನು. ನೀವು ನನ್ನನ್ನು ಗೌರವಿಸಬೇಕು. ಭೂಲೋಕದ ಸರ್ವಜನರು ನನ್ನನ್ನು ಸನ್ಮಾನಿಸುವರು.” ಇವು ಸರ್ವಶಕ್ತನಾದ ಯೆಹೋವನ ನುಡಿಗಳು.