ರೂತಳು 2:2 - ಪರಿಶುದ್ದ ಬೈಬಲ್2 ಒಂದು ದಿನ ಮೋವಾಬ್ಯಳಾದ ರೂತಳು ನೊವೊಮಿಗೆ, “ನಾನು ಹೊಲಗಳಿಗೆ ಹೋಗುತ್ತೇನೆ. ಯಾರಾದರೂ ದಯೆತೋರಿ ತಮ್ಮ ಹೊಲದಲ್ಲಿ ಹಕ್ಕಲನ್ನು ಆರಿಸಲು ಅನುಮತಿ ಕೊಡಬಹುದು” ಎಂದಳು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20192 ಮೋವಾಬ್ಯಳಾದ ರೂತಳು ನವೊಮಿಗೆ, “ನಾನು ಹೋಗಿ, ಹಕ್ಕಲ ತೆನೆಗಳನ್ನು ಆಯ್ದುಕೊಳ್ಳಲು ಅವಕಾಶ ಮಾಡಿಕೊಡುವವರ ಹೊಲದಿಂದ ತೆನೆಗಳನ್ನು ಸಂಗ್ರಹಿಸಿಕೊಂಡು ಬರುತ್ತೇನೆ” ಅಂದಳು. ಅದಕ್ಕೆ ನವೊಮಿ “ಹೋಗಿ ಬಾ ಮಗಳೆ” ಅಂದಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)2 ರೂತಳು ನವೊಮಿಗೆ: “ನಾನು ಹೊಲಗಳಿಗೆ ಹೋಗಿ ತೆನೆಗಳನ್ನು ಆಯ್ದುಕೊಂಡು ಬರಲೇ? ಇದಕ್ಕೆ ಯಾರಾದರು ನನಗೆ ನೆರವಾಗಬಹುದು,” ಎಂದು ಕೇಳಿದಳು. ನವೊಮಿ, “ಹೋಗಿ ಬಾ, ಮಗಳೇ,” ಎಂದು ಅಪ್ಪಣೆಕೊಟ್ಟಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)2 ಮೋವಾಬ್ಯಳಾದ ರೂತಳು ನೊವೊವಿುಗೆ - ನಾನು ಹೋಗಿ ಯಾವನು ನನಗೆ ದಯೆತೋರಿಸುವನೋ ಅವನ ಹೊಲದಲ್ಲಿ ಹಕ್ಕಲತೆನೆಗಳನ್ನು ಕೂಡಿಸಿಕೊಂಡು ಬರುವೆನು ಅಂದಳು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ2 ಮೋವಾಬ್ಯಳಾದ ರೂತಳು ನೊವೊಮಿಗೆ, “ನಾನು ಹೊಲಕ್ಕೆ ಹೋಗಿ ಯಾರ ದಯೆಯು ನನಗೆ ಆಗುವುದೋ ಅವನ ಹೊಲದಲ್ಲಿ ಹಕ್ಕಲ ತೆನೆಗಳನ್ನು ಕೂಡಿಸಿ ಕೊಳ್ಳುವೆನು,” ಎಂದಳು. ನೊವೊಮಿ, “ಹೋಗಿ ಬಾ, ಮಗಳೇ,” ಎಂದಳು. ಅಧ್ಯಾಯವನ್ನು ನೋಡಿ |