ರೂತಳು 1:13 - ಪರಿಶುದ್ದ ಬೈಬಲ್13 ನೀವು ಅವರನ್ನು ಮದುವೆಯಾಗಬೇಕಾದರೆ ಅವರು ಬೆಳೆದು ಪ್ರಾಯಕ್ಕೆ ಬರುವವರೆಗೆ ಕಾದುಕೊಂಡಿರಬೇಕಾಗುತ್ತದೆ. ನೀವು ಗಂಡಂದಿರ ಸಲುವಾಗಿ ಅಷ್ಟುಕಾಲ ಕಾದುಕೊಂಡಿರುವುದು ನನಗಿಷ್ಟವಿಲ್ಲ. ಅದು ನನಗೆ ದುಃಖವನ್ನು ಉಂಟುಮಾಡುತ್ತದೆ. ನಿಮ್ಮ ಬಗ್ಗೆ ನಾನು ತುಂಬಾ ದುಃಖಪಡುತ್ತೇನೆ, ಯೆಹೋವನ ಹಸ್ತವು ನನಗೆ ವಿರುದ್ಧವಾಗಿದೆ” ಎಂದು ಹೇಳಿದಳು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ಅವರು ದೊಡ್ಡವರಾಗುವ ತನಕ ನೀವು ಕಾದಿರುವಿರೋ? ಅಲ್ಲಿಯ ವರೆಗೂ ಗಂಡಂದಿರಿಲ್ಲದೆ ಇರುವಿರೋ? ನನ್ನ ಮಕ್ಕಳೇ, ಹಾಗೆ ಮಾಡಬೇಡಿರಿ; ಯೆಹೋವನ ಹಸ್ತವು ನನ್ನಿಂದ ದೂರವಾಗಿರುವುದರಿಂದ ನಾನು ನಿಮಗಿಂತ ಹೆಚ್ಚಾಗಿ ದುಃಖಪಡುತ್ತೇನೆ” ಅಂದಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)13 ಅವರು ಬೆಳೆದು ದೊಡ್ಡವರಾಗುವವರೆಗೂ ಮದುವೆಯಾಗದೆ ಇರುವಿರೋ? ಬೇಡ, ಮಕ್ಕಳೇ, ಸರ್ವೇಶ್ವರ ನನ್ನ ಕೈ ಬಿಟ್ಟಿದ್ದಾರೆ, ನಿಮಗಾಗಿ ನಾನು ಬಹಳ ವಿಷಾದಿಸುತ್ತೇನೆ,” ಎಂದು ಸಮಾಧಾನ ಹೇಳಿದಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)13 ಅವರು ದೊಡ್ಡವರಾಗುವ ತನಕ ಕಾದಿರುವಿರೋ? ಅಲ್ಲಿಯವರೆಗೂ ಗಂಡಂದಿರಿಲ್ಲದೆ ಇರುವಿರೋ? ನನ್ನ ಮಕ್ಕಳೇ, ಹಾಗೆ ಮಾಡಬೇಡಿರಿ; ಯೆಹೋವನ ಹಸ್ತವು ನನಗೆ ವಿರೋಧವಾಗಿರುವದರಿಂದ ನಿಮಗೋಸ್ಕರ ಬಹಳ ದುಃಖಪಡುತ್ತೇನೆ ಅಂದಳು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ13 ಅವರು ದೊಡ್ಡವರಾಗುವವರೆಗೂ ಕಾದು ಕೊಳ್ಳುವಿರೋ? ಗಂಡನಿಲ್ಲದೆ ನೀವು ತಾಳಿಕೊಂಡಿರುವಿರೋ? ಇಲ್ಲ, ನನ್ನ ಮಕ್ಕಳೇ; ಯೆಹೋವ ದೇವರ ಹಸ್ತವು ನನಗೆ ವಿರೋಧವಾಗಿದೆ. ಆದ್ದರಿಂದ ನಿಮಗಿಂತ ನನಗೆ ಬಹು ದುಃಖವಾಗಿದೆ,” ಎಂದಳು. ಅಧ್ಯಾಯವನ್ನು ನೋಡಿ |