Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 3:23 - ಪರಿಶುದ್ದ ಬೈಬಲ್‌

23 ಯೋಹಾನನು ಸಹ ಐನೋನ್ ಎಂಬ ಸ್ಥಳದಲ್ಲಿ ದೀಕ್ಷಾಸ್ನಾನ ಮಾಡಿಸುತ್ತಿದ್ದನು. ಐನೋನ್ ಎಂಬ ಊರು ಸಲೀಮ್ ಊರಿನ ಸಮೀಪದಲ್ಲಿದೆ. ಅಲ್ಲಿ ಬೇಕಾದಷ್ಟು ನೀರಿದ್ದುದರಿಂದ ಯೋಹಾನನು ಅಲ್ಲಿ ಜನರಿಗೆ ದೀಕ್ಷಾಸ್ನಾನ ಮಾಡಿಸುತ್ತಿದ್ದನು. ಜನರು ಅಲ್ಲಿಗೆ ಬಂದು ದೀಕ್ಷಾಸ್ನಾನ ತೆಗೆದುಕೊಳ್ಳುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಇದಲ್ಲದೆ ಯೋಹಾನನೂ ಸಹ ಸಾಲಿಮ್ ಎಂಬ ಊರಿಗೆ ಹತ್ತಿರವಿರುವ ಐನೋನೆಂಬ ಸ್ಥಳದಲ್ಲಿದ್ದು ದೀಕ್ಷಾಸ್ನಾನ ಕೊಡುತ್ತಿದ್ದನು, ಏಕೆಂದರೆ, ಅಲ್ಲಿ ಬಹಳ ನೀರಿತ್ತು. ಜನರು ಬಂದು ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಅತ್ತ ಯೊವಾನ್ನನು ಕೂಡ ಸಾಲಿಮ್ ಎಂಬ ಊರಿಗೆ ಹತ್ತಿರವಾಗಿದ್ದ ಐನೋನ್ ಎಂಬ ಸ್ಥಳದಲ್ಲಿ ನೀರು ಹೆಚ್ಚಾಗಿದ್ದುದರಿಂದ ಸ್ನಾನದೀಕ್ಷೆಯನ್ನು ಮಾಡಿಸುತ್ತಿದ್ದನು. ಜನರು ಬಂದು ಸ್ನಾನದೀಕ್ಷೆಯನ್ನು ಪಡೆಯುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಯೋಹಾನನೂ ಸಲೀಮೂರಿನ ಹತ್ತಿರವಿರುವ ಐನೋನೆಂಬ ಸ್ಥಳದಲ್ಲಿದ್ದು ದೀಕ್ಷಾಸ್ನಾನಮಾಡಿಸುತ್ತಿದ್ದನು; ಅಲ್ಲಿ ಬಹಳ ನೀರಿತ್ತು; ಜನರು ಬಂದು ಸ್ನಾನಮಾಡಿಸಿಕೊಳ್ಳುತ್ತಾ ಇದ್ದರು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ಇದಲ್ಲದೆ ಯೋಹಾನನು ಸಹ ಸಲೀಮ್ ಎಂಬ ಊರಿನ ಸಮೀಪದಲ್ಲಿದ್ದ ಐನೋನ್ ಎಂಬ ಸ್ಥಳದಲ್ಲಿ ದೀಕ್ಷಾಸ್ನಾನ ಮಾಡಿಸುತ್ತಿದ್ದನು. ಏಕೆಂದರೆ ಅಲ್ಲಿ ಬಹಳ ನೀರು ಇತ್ತು. ಜನರು ಬಂದು ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

23 ಸಾಲಿಮ್ ಮನ್ತಲ್ಯಾ ಗಾಂವಾಂಚ್ಯಾ ಎನೊನ್ ಮನ್ತಲ್ಯಾ ಜಾಗ್ಯಾರ್ ಪಾಜೆ ತವ್ಡೆ ಪಾನಿ ಹೊತ್ತೆ, ತಸೆ ಮನುನ್ ಜುವಾಂವ್ ಥೈ ಲೊಕಾಕ್ನಿ ಬಾಲ್ತಿಮ್ ದಿವ್ಕ್ ಲಾಗಲ್ಲೊ, ಲೊಕಾ ಯೆವ್ನ್ ಬಾಲ್ತಿಮ್ ಘೆವ್‍ಲಾಗಲ್ಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 3:23
13 ತಿಳಿವುಗಳ ಹೋಲಿಕೆ  

ಜನರು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಬಂದರು. ಯೋಹಾನನು ಅವರಿಗೆ. “ನೀವು ವಿಷಕರವಾದ ಹಾವುಗಳಂತಿದ್ದೀರಿ! ಬರಲಿರುವ ದೇವರ ಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ನಿಮ್ಮನ್ನು ಎಚ್ಚರಿಸಿದವರು ಯಾರು?


ಅಲ್ಲಿ ಇಸ್ರೇಲ್ ದೇವರ ಮಹಿಮೆಯು ಪೂರ್ವದಿಂದ ಬಂದಿತು. ದೇವರ ಸ್ವರವು ಸಮುದ್ರದ ಶಬ್ದದಂತೆ ಗಟ್ಟಿಯಾಗಿತ್ತು. ದೇವರ ಮಹಿಮಾ ಪ್ರಕಾಶದಿಂದ ನೆಲವು ಬೆಳಕಿನಿಂದ ತುಂಬಿತ್ತು.


“‘ನಿನ್ನ ತಾಯಿಯು ನೀರಾವರಿಯಲ್ಲಿ ನೆಟ್ಟ ದ್ರಾಕ್ಷಾಲತೆಯಂತಿದ್ದಳು. ಬೇಕಾದಷ್ಟು ನೀರು ಇದ್ದುದರಿಂದ ಅದು ಫಲಭರಿತವಾಗಿದ್ದು ಅನೇಕ ಕೊಂಬೆಗಳನ್ನು ಹೊಂದಿತ್ತು.


ಬಾಬಿಲೋನೇ, ನೀನು ಸಮೃದ್ಧವಾದ ನೀರಿನ ಹತ್ತಿರ ಇರುವೆ. ನೀನು ಸಂಪತ್ತಿನಿಂದ ಸಮೃದ್ಧವಾಗಿರುವೆ. ಆದರೆ ಒಂದು ಜನಾಂಗವಾಗಿ ನೀನು ಬಹಳ ಕಾಲ ಮುಂದುವರೆಯಲಾರೆ. ನಿನ್ನ ವಿನಾಶ ಕಾಲ ಸಮೀಪಿಸಿದೆ.


ಸೌಲನು ಕತ್ತೆಗಳನ್ನು ಹುಡುಕಲು ಆರಂಭಿಸಿದನು. ಸೌಲನು ಮತ್ತು ಅವನ ಸೇವಕನು ಎಫ್ರಾಯೀಮ್ ಬೆಟ್ಟಪ್ರದೇಶದಲ್ಲಿ ಹುಡುಕಿದರೂ ಅವರಿಗೆ ಕತ್ತೆಗಳು ಸಿಗಲಿಲ್ಲ. ಆದ್ದರಿಂದ ಅವರು ಶಾಲೀಮ್ ಪ್ರದೇಶದಲ್ಲೆಲ್ಲಾ ಹುಡುಕಿದರು; ಅಲ್ಲಿಯೂ ಅವರ ಕತ್ತೆಗಳು ಸಿಕ್ಕಲಿಲ್ಲ. ಆದ್ದರಿಂದ ಅವರು ಬೆನ್ಯಾಮೀನನ ಪ್ರದೇಶದಲ್ಲೆಲ್ಲಾ ಹುಡುಕಿದರು; ಅಲ್ಲಿಯೂ ಅವರ ಕತ್ತೆಗಳು ಸಿಗಲಿಲ್ಲ.


ಆಮೇಲೆ ಯಾಕೋಬನು ಕಾನಾನ್ ದೇಶದ ಶೆಕೆಮ್ ಪಟ್ಟಣಕ್ಕೆ ಬಂದು ತನ್ನ ಪಾಳೆಯನ್ನು ಪಟ್ಟಣದ ಸಮೀಪದಲ್ಲಿದ್ದ ಒಂದು ಹೊಲದಲ್ಲಿ ಹಾಕಿಸಿದನು.


ನಂತರ ಅನೇಕಾನೇಕ ಜನರ ಮಹಾಶಬ್ದದಂತಿದ್ದ ಧ್ವನಿಯೊಂದು ನನಗೆ ಕೇಳಿಸಿತು. ಅದು ಪ್ರವಾಹದ ನೀರಿನ ಘೋಷದಂತೆಯೂ ಗಟ್ಟಿಯಾದ ಗುಡುಗಿನ ಶಬ್ದದಂತೆಯೂ ಇತ್ತು. ಆ ಜನರು ಹೀಗೆ ಹೇಳುತ್ತಿದ್ದರು: “ಹಲ್ಲೆಲೂಯಾ! ನಮ್ಮ ದೇವರಾದ ಪ್ರಭುವು ಆಳಲಾರಂಭಿಸಿದ್ದಾನೆ. ಆತನು ಸರ್ವಶಕ್ತನಾಗಿದ್ದಾನೆ.


ನಾನು ಪರಲೋಕದಿಂದ ಒಂದು ಶಬ್ದವನ್ನು ಕೇಳಿಸಿಕೊಂಡೆನು. ಅದು ನೀರಿನ ಪ್ರವಾಹದಂತೆ ಭೋರ್ಗರೆಯುವ ಶಬ್ದದಂತೆ ಮತ್ತು ಗುಡುಗಿನ ಧ್ವನಿಯಂತೆ ಇದ್ದಿತು. ಜನರು ತಮ್ಮ ತಂತಿವಾದ್ಯಗಳನ್ನು ಬಾರಿಸುತ್ತಿರುವರೋ ಎಂಬಂತೆ ಆ ಶಬ್ದವು ನನಗೆ ಕೇಳಿಸಿತು.


ಪಾದಗಳು ಕುಲುಮೆಯಲ್ಲಿ ಕಾಯಿಸಿದ ತಾಮ್ರದಂತಿದ್ದವು; ಧ್ವನಿಯು ಹರಿಯುವ ನೀರಿನ ಘೋಷದಂತಿತ್ತು.


ಇದಾದ ನಂತರ, ಯೇಸು ಮತ್ತು ಆತನ ಶಿಷ್ಯರು ಜುದೇಯ ಪ್ರಾಂತ್ಯಕ್ಕೆ ಹೋದರು. ಅಲ್ಲಿ ಯೇಸು ತನ್ನ ಶಿಷ್ಯರೊಡನೆ ತಂಗಿದ್ದು, ಜನರಿಗೆ ದೀಕ್ಷಾಸ್ನಾನ ಮಾಡಿಸಿದನು.


(ಆಗ ಯೋಹಾನನನ್ನು ಇನ್ನೂ ಸೆರೆಮನೆಗೆ ಹಾಕಿರಲಿಲ್ಲ.)


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು