ಯೋಹಾನ 21:6 - ಪರಿಶುದ್ದ ಬೈಬಲ್6 ಯೇಸು, “ನಿಮ್ಮ ದೋಣಿಯ ಬಲಭಾಗದಲ್ಲಿ ನಿಮ್ಮ ಬಲೆ ಬೀಸಿರಿ. ಅಲ್ಲಿ ಕೆಲವು ಮೀನುಗಳು ಸಿಕ್ಕುತ್ತವೆ” ಎಂದು ಹೇಳಿದನು. ಶಿಷ್ಯರು ಹಾಗೆಯೇ ಮಾಡಿದರು. ಬಹಳ ಮೀನುಗಳು ಸಿಕ್ಕಿಕೊಂಡದ್ದರಿಂದ ಅವರು ಬಲೆಯನ್ನು ದೋಣಿಯೊಳಗೆ ಎಳೆದುಕೊಳ್ಳಲಾಗಲಿಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20196 ಆತನು ಅವರಿಗೆ, “ನೀವು ದೋಣಿಯ ಬಲಗಡೆಯಲ್ಲಿ ಬಲೆಯನ್ನು ಬೀಸಿರಿ; ಆಗ ನಿಮಗೆ ಸಿಕ್ಕುತ್ತವೆ” ಎಂದು ಹೇಳಿದನು. ಅವರು ಬಲೆ ಬೀಸಿದಾಗ ಮೀನುಗಳು ರಾಶಿ ರಾಶಿಯಾಗಿ ಬಲೆಗೆ ಬಂದು ಸೇರಿದ್ದರಿಂದ, ಅವರಿಗೆ ಬಲೆಯನ್ನು ಎಳೆಯುವುದಕ್ಕೆ ಸಾಧ್ಯವಾಗದೆ ಹೋಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)6 “ದೋಣಿಯ ಬಲಗಡೆಗೆ ಬಲೆ ಬೀಸಿರಿ; ಮೀನುಗಳು ಸಿಗುತ್ತವೆ,” ಎಂದು ಯೇಸು ಹೇಳಲು ಅವರು ಹಾಗೆಯೇ ಮಾಡಿದರು. ಆಗ ಮೀನುಗಳು ರಾಶಿರಾಶಿಯಾಗಿ ಸಿಕ್ಕಿದವು. ಬಲೆಯನ್ನು ಎಳೆಯಲೂ ಆಗದೆಹೋಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)6 ಆತನು ಅವರಿಗೆ - ನೀವು ದೋಣಿಯ ಬಲಗಡೆಯಲ್ಲಿ ಬಲೆ ಬೀಸಿದರೆ ಸಿಕ್ಕುವದು ಎಂದು ಹೇಳಿದನು. ಅವರು ಹಾಗೆ ಬೀಸಿದಾಗ ಮೀನುಗಳು ಬಹಳ ಹೆಚ್ಚಾಗಿ ಸಿಕ್ಕಿದ್ದರಿಂದ ಬಲೆಯನ್ನು ಎಳೆಯುವದಕ್ಕೆ ಆಗದೆ ಹೋಯಿತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ6 ಯೇಸು ಶಿಷ್ಯರಿಗೆ, “ದೋಣಿಯ ಬಲಗಡೆಯಲ್ಲಿ ಬಲೆ ಬೀಸಿರಿ; ನಿಮಗೆ ಮೀನು ಸಿಗುತ್ತವೆ,” ಎಂದರು. ಅವರು ಬಲೆ ಬೀಸಿದಾಗ ಮೀನುಗಳ ರಾಶಿ ಬಲೆಗೆ ಬಿದ್ದದರ ದೆಸೆಯಿಂದ ಅವರಿಗೆ ಎಳೆಯುವುದಕ್ಕೆ ಆಗದೆ ಹೋಯಿತು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್6 ತೆನಿ ತೆಂಕಾ, “ತುಮಿ ತುಮ್ಚಿ ಜಾಳಿ ಢೊನಿಚ್ಯಾ ಉಜ್ವ್ಯಾ ಬಾಜುಕ್ ಟಾಕಾ, ತನ್ನಾ ತುಮ್ಕಾ ಕಾಯ್ಬಿ ಗಾವ್ತಾ,” ಮಟ್ಲ್ಯಾನ್ ತನ್ನಾ ತೆನಿ ಜಾಳೆ ಟಾಕ್ಲ್ಯಾನಿ ತನ್ನಾ ತೆಂಚ್ಯಾನ್ ಜಾಳೆ ವೊಡುಕ್ ಹೊಯ್ನಾ ಹೊಲೆ, ತವ್ಡ್ಯಾ ಮಾಸೊಳ್ಯಾ ತ್ಯಾತುರ್ ಪಡಲ್ಲ್ಯಾ. ಅಧ್ಯಾಯವನ್ನು ನೋಡಿ |