ಯೋಹಾನ 18:3 - ಪರಿಶುದ್ದ ಬೈಬಲ್3 ಯೂದನು ಸೈನಿಕರ ಗುಂಪೊಂದನ್ನೂ ಮಹಾಯಾಜಕರ ಮತ್ತು ಫರಿಸಾಯರ ಕಾವಲುಗಾರರಲ್ಲಿ ಕೆಲವರನ್ನೂ ಕರೆದುಕೊಂಡು ತೋಟಕ್ಕೆ ಬಂದನು. ಅವರು ದೀವಟಿಗೆ, ಪಂಜು ಮತ್ತು ಆಯುಧಗಳಿಂದ ಸುಸಜ್ಜಿತರಾಗಿದ್ದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಹೀಗಿರಲಾಗಿ ಯೂದನು ಮುಖ್ಯಯಾಜಕರಿಂದ ಮತ್ತು ಫರಿಸಾಯರಿಂದ ಸೈನಿಕರ ಗುಂಪನ್ನೂ, ಕಾವಲಾಳುಗಳನ್ನೂ ಕರೆದುಕೊಂಡು ದೀಪಗಳನ್ನೂ, ಪಂಜುಗಳನ್ನೂ ಮತ್ತು ಆಯುಧಗಳನ್ನೂ ಹಿಡಿದುಕೊಂಡು ಅಲ್ಲಿಗೆ ಬಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಆದುದರಿಂದ ಯೂದನು ಸೈನಿಕರ ಒಂದು ತಂಡವನ್ನೂ ಮುಖ್ಯಯಾಜಕರು ಮತ್ತು ಫರಿಸಾಯರು ಕಳುಹಿಸಿದ ಕಾವಲಾಳುಗಳನ್ನೂ ಕರೆದುಕೊಂಡು ದೀವಟಿಗೆ, ಪಂಜು ಮತ್ತು ಆಯುಧಗಳ ಸಮೇತ ಅಲ್ಲಿಗೆ ಬಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಹೀಗಿರಲಾಗಿ ಯೂದನು ಸಿಪಾಯಿಗಳ ಪಟಾಲಮನ್ನೂ ಮಹಾಯಾಜಕರು ಮತ್ತು ಫರಿಸಾಯರು ಕೊಟ್ಟ ಓಲೇಕಾರರನ್ನೂ ಕರಕೊಂಡು ದೀವಿಟಿಗಳನ್ನೂ ಪಂಜುಗಳನ್ನೂ ಆಯುಧಗಳನ್ನೂ ಹಿಡಿಸಿಕೊಂಡು ಅಲ್ಲಿಗೆ ಬಂದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ಯೂದನು ಸೈನಿಕರ ತಂಡವನ್ನೂ ಮುಖ್ಯಯಾಜಕರಿಂದ ಮತ್ತು ಫರಿಸಾಯರಿಂದ ಕಾವಲಾಳುಗಳನ್ನೂ ಕರೆದುಕೊಂಡು ತೋಟಕ್ಕೆ ಬಂದನು. ಸೈನಿಕರು ಮತ್ತು ಕಾವಲಾಳುಗಳು ದೀಪಗಳನ್ನು, ಪಂಜುಗಳನ್ನು ಮತ್ತು ಆಯುಧಗಳನ್ನು ಹಿಡಿದುಕೊಂಡಿದ್ದರು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್3 ತಸೆಮನುನ್ ಜುದಾಸ್ ರೊಮಾಚ್ಯಾ ಸೈನಿಕಾಚೊ ಎಕ್ ತಾಂಡೊ, ಅನಿ ಉಲ್ಲ್ಯಾ ದೆವಾಚ್ಯಾ ಗುಡಿಚ್ಯಾ ರಾಕ್ವಾಲ್ಯಾಕ್ನಿ, ಘೆವ್ನ್ ತ್ಯಾ ಮಳ್ಯಾಕ್ ಯೆಲೊ, ತೆಂಕಾ ಯಾಜಕಾಂಚ್ಯಾ ಮುಖಂಡಾನಿ ಅನಿ ಫಾರಿಜೆವಾನಿ ಧಾಡುನ್ ದಿಲ್ಲ್ಯಾನಿ, ತೆನಿ ಹಾತಿಯಾರಾ, ಲಾಟ್ನಿಯಾ, ಅನಿ ಚುಡ್ತಿಯಾ ಘೆವ್ನ್ ಯೆಲ್ಲ್ಯಾನಿ. ಅಧ್ಯಾಯವನ್ನು ನೋಡಿ |