ಯೋಬ 42:7 - ಪರಿಶುದ್ದ ಬೈಬಲ್7 ಯೆಹೋವನು ಯೋಬನೊಂದಿಗೆ ಮಾತಾಡಿದ ಮೇಲೆ, ಎಲೀಫಜನೊಂದಿಗೆ ಮಾತಾಡಿದನು. ಎಲೀಫಜನು ತೇಮಾನ್ ಪಟ್ಟಣದವನಾಗಿದ್ದನು. ಯೆಹೋವನು ಎಲೀಫಜನಿಗೆ, “ನಾನು ನಿನ್ನ ಮೇಲೆಯೂ ನಿನ್ನ ಇಬ್ಬರು ಸ್ನೇಹಿತರ ಮೇಲೆಯೂ ಕೋಪಗೊಂಡಿದ್ದೇನೆ. ಯಾಕೆಂದರೆ ನೀನು ನನ್ನ ಬಗ್ಗೆ ಹೇಳಿದವುಗಳು ಸತ್ಯವಲ್ಲ. ಆದರೆ ಯೋಬನು ನನ್ನ ಬಗ್ಗೆ ಹೇಳಿದವುಗಳು ಸತ್ಯವಾಗಿವೆ. ಯೋಬನು ನನ್ನ ಸೇವಕ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ಯೆಹೋವನು ಈ ಮಾತುಗಳನ್ನು ಯೋಬನಿಗೆ ಹೇಳಿದ ಮೇಲೆ ತೇಮಾನ್ಯನಾದ ಎಲೀಫಜನನ್ನು ಕುರಿತು, “ನಿನ್ನ ಮೇಲೆಯೂ, ನಿನ್ನ ಇಬ್ಬರು ಸ್ನೇಹಿತರ ಮೇಲೆಯೂ ಕೋಪಗೊಂಡಿದ್ದೇನೆ; ನನ್ನ ದಾಸನಾದ ಯೋಬನು ನನ್ನ ವಿಷಯವಾಗಿ ಯಥಾರ್ಥವನ್ನಾಡಿದಂತೆ ನೀನು ಆಡಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)7 ಸರ್ವೇಶ್ವರಸ್ವಾಮಿ ಈ ಮಾತುಗಳನ್ನು ಯೋಬನಿಗೆ ಹೇಳಿದ ಮೇಲೆ ತೇಮಾನ್ಯನಾದ ಎಲೀಫಜನಿಗೆ, “ನಿನ್ನ ಮೇಲೂ ನಿನ್ನ ಗೆಳೆಯರಿಬ್ಬರ ಮೇಲೂ ನನಗೆ ಕೋಪವಿದೆ! ನನ್ನ ದಾಸ ಯೋಬನಂತೆ ನೀವು ನನ್ನ ವಿಷಯವಾಗಿ ಸರಿಯಾದುದನ್ನು ಆಡಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)7 ಯೆಹೋವನು ಈ ಮಾತುಗಳನ್ನು ಯೋಬನಿಗೆ ಹೇಳಿದ ಮೇಲೆ ತೇಮಾನ್ಯನಾದ ಎಲೀಫಜನನ್ನು ಕುರಿತು - ನಿನ್ನ ಮೇಲೆಯೂ ನಿನ್ನ ಇಬ್ಬರು ಸ್ನೇಹಿತರ ಮೇಲೆಯೂ ಕೋಪಗೊಂಡಿದ್ದೇನೆ; ನನ್ನ ದಾಸನಾದ ಯೋಬನು ನನ್ನ ವಿಷಯವಾಗಿ ಯಥಾರ್ಥವನ್ನಾಡಿದಂತೆ ನೀವು ಆಡಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ7 ಯೆಹೋವ ದೇವರು ಯೋಬನ ಸಂಗಡ ಮಾತಾಡಿದ ತರುವಾಯ, ತೇಮಾನ್ಯನಾದ ಎಲೀಫಜನಿಗೆ, “ನಿನ್ನ ಮೇಲೆಯೂ ನಿನ್ನ ಸ್ನೇಹಿತರಿಬ್ಬರ ಮೇಲೆಯೂ ನನಗೆ ಕೋಪವಿದೆ. ಏಕೆಂದರೆ ನೀವು ನನ್ನ ದಾಸನಾದ ಯೋಬನಂತೆ ನೀವು ನನ್ನ ವಿಷಯವಾಗಿ ಸತ್ಯವನ್ನು ಆಡಲಿಲ್ಲ. ಅಧ್ಯಾಯವನ್ನು ನೋಡಿ |