Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 39:25 - ಪರಿಶುದ್ದ ಬೈಬಲ್‌

25 ತುತ್ತೂರಿಯ ಧ್ವನಿಗೆ ಕುದುರೆಯು, “ಆಹಾ!” ಎಂದು ಹೇಳುತ್ತದೆ. ಅದು ದೂರದಿಂದಲೇ ಯುದ್ಧವನ್ನು ಮೂಸಿ ನೋಡಿ ತಿಳಿಯುವುದು. ಸೇನಾಧಿಪತಿಗಳು ಗಟ್ಟಿಯಾಗಿ ಅಪ್ಪಣೆಕೊಡುವುದನ್ನೂ ಯುದ್ಧದ ಎಲ್ಲಾ ಕೂಗಾಟವನ್ನೂ ಅದು ಕೇಳಿಸಿಕೊಳ್ಳುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ತುತ್ತೂರಿ ಊದಿದಾಗೆಲ್ಲಾ ಆಹಾ! ಎಂದುಕೊಂಡು ಕಾಳಗ, ಆರ್ಭಟ, ಸೇನಾಪತಿಗಳ ಗರ್ಜನೆ, ಇವುಗಳನ್ನು ದೂರದಲ್ಲಿದ್ದರೂ ಮೂಸಿನೋಡಿ ತಿಳಿಯುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ರಣಕಹಳೆ ಮೊಳಗಿದಾಗಲೆ ಕೆನೆಯುತ್ತದೆ ಕಾಳಗ, ಆರ್ಭಟ, ದಳಪತಿಗಳ ಗರ್ಜನೆ ಇವುಗಳನ್ನೆಲ್ಲಾ ದೂರದಿಂದಲೆ ಮೂಸುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ತುತೂರಿಯೂದಿದಾಗೆಲ್ಲಾ ಆಹಾ ಎಂದುಕೊಂಡು ಕಾಳಗ, ಆರ್ಭಟ, ಸೇನಾಪತಿಗಳ ಗರ್ಜನೆ, ಇವುಗಳನ್ನು ದೂರದಲ್ಲಿದ್ದರೂ ಮೂಸಿನೋಡಿ ತಿಳಿಯುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ರಣಕಹಳೆ ಮೊಳಗಿದಾಗ ಕುದುರೆ ಕೆನೆಯುತ್ತದೆ. ಅದು ಅಧಿಪತಿಗಳ ಗರ್ಜನೆಯನ್ನೂ ಕಾಳಗದ ಆರ್ಭಟವನ್ನೂ ದೂರದಿಂದಲೇ ಮೂಸಿ ನೋಡಿ ತಿಳಿಯುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 39:25
6 ತಿಳಿವುಗಳ ಹೋಲಿಕೆ  

ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ ಎಂದು ಅವುಗಳಿಗೆ ಹೇಳು. ‘ವೈರಿಗಳು ನಿನಗೆ ವಿರುದ್ಧವಾಗಿ ಕೆಟ್ಟಮಾತುಗಳನ್ನಾಡಿದ್ದಾರೆ. ಒಳ್ಳೆಯದಾಯಿತು. ಈಗ ಪುರಾತನ ಪರ್ವತಗಳು ನಮ್ಮದಾದವು ಎಂದು ಹೇಳುತ್ತಾರೆ.’


“ನರಪುತ್ರನೇ, ಜೆರುಸಲೇಮ್ ಬಗ್ಗೆ ತೂರ್ ಕೆಟ್ಟ ಮಾತುಗಳನ್ನಾಡಿದೆ. ‘ಜನರನ್ನು ಸುರಕ್ಷಿತವಾಗಿರಿಸುವ ನಗರದ್ವಾರವು ಕೆಡವಲ್ಪಟ್ಟು ದ್ವಾರವೇ ಇಲ್ಲದಂತಾಗಿದೆ. ನಗರವು ಹಾಳಾಗಿರುವುದರಿಂದ ಕೊಳ್ಳೆ ಹೊಡೆಯಲು ಸುಲಭವಾಯಿತು’ ಎಂದು ಅದು ಅಂದುಕೊಂಡಿದೆ.”


ನನ್ನನ್ನು ಗೇಲಿಮಾಡುವವರು ಸೋಲಿನಿಂದ ಅವಮಾನಕ್ಕೀಡಾಗಿ ಓಡಿಹೋಗಲಿ.


ಕುದುರೆಯು ಬಹು ಉತ್ಸುಕತೆಯಿಂದಿರುತ್ತದೆ! ಅದು ನೆಲದ ಮೇಲೆ ವೇಗವಾಗಿ ಓಡುವುದು; ಅದು ತೂತೂರಿಯ ಧ್ವನಿಯನ್ನು ಕೇಳಿದರೂ ನಿಲ್ಲದು.


“ಯೋಬನೇ, ತನ್ನ ರೆಕ್ಕೆಗಳನ್ನು ಚಾಚಿಕೊಂಡು ದಕ್ಷಿಣದ ಕಡೆಗೆ ಹಾರುವ ಗಿಡುಗಕ್ಕೆ ನೀನು ಹಾರುವುದನ್ನು ಕಲಿಸಿದೆಯೋ?


ಯೆಹೋವನು ಹೇಳುವುದೇನೆಂದರೆ, “ನಾನು ಕುರುಬರ ಮೇಲೆ ಬಹಳವಾಗಿ ಕೋಪಿಸಿರುವೆನು. ಆ ನಾಯಕರನ್ನು ನಾನು ನನ್ನ ಜನರ ಮೇಲೆ ಜವಾಬ್ದಾರರನ್ನಾಗಿ ಮಾಡಿದ್ದೇನೆ.” ಯೆಹೂದದ ಜನರು ದೇವರ ಮಂದೆಯಾಗಿದ್ದಾರೆ. ಹೇಗೆ ಸಿಪಾಯಿಯು ತನ್ನ ಯುದ್ಧದ ಕುದುರೆಯನ್ನು ಪರಾಂಬರಿತ್ತಾನೋ ಹಾಗೆ ಸರ್ವಶಕ್ತನಾದ ಯೆಹೋವನು ತನ್ನ ಮಂದೆಯನ್ನು ನಿಜವಾಗಿಯೂ ಪರಾಂಬರಿಸುತ್ತಾನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು