Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 38:32 - ಪರಿಶುದ್ದ ಬೈಬಲ್‌

32 ಯೋಬನೇ, ನೀನು ಸಮಯಕ್ಕೆ ಸರಿಯಾಗಿ ನಕ್ಷತ್ರರಾಶಿಗಳನ್ನು ಬರಮಾಡಬಲ್ಲೆಯಾ? ನೀನು ಬೇರ್ ನಕ್ಷತ್ರಗಳನ್ನು ಅದರ ಮರಿಗಳೊಂದಿಗೆ ನಡೆಸಬಲ್ಲೆಯಾ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ಆಯಾ ಸಮಯದಲ್ಲಿ ನಕ್ಷತ್ರ ರಾಶಿಗಳನ್ನು ಬರಮಾಡುವೆಯೋ? ನಕ್ಷತ್ರ ಮಂಡಲ ಪರಿವಾರದೊಡನೆ ನಡೆಸುವೆಯಾ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

32 ಆಯಾಯ ಕಾಲಕ್ಕೆ ನಕ್ಷತ್ರರಾಶಿಗಳನು ಬರಮಾಡುವೆಯಾ? ಸಪ್ತರ್ಷಿತಾರೆಗಳನು ಪರಿವಾರದೊಡನೆ ನಡೆಸುವೆಯಾ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ಆಯಾ ಸಮಯದಲ್ಲಿ ನಕ್ಷತ್ರರಾಶಿಗಳನ್ನು ಬರಮಾಡುವಿಯೋ? ಸಪ್ತರ್ಷಿಗಳನ್ನು ಪರಿವಾರದೊಡನೆ ನಡಿಸುವಿಯಾ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

32 ನೀನು ನಕ್ಷತ್ರರಾಶಿಗಳನ್ನು ಅವುಗಳ ಕಾಲದಲ್ಲಿ ಹೊರಗೆ ಬರಮಾಡುವೆಯಾ? ಸಪ್ತರ್ಷಿ ತಾರೆಗಳನ್ನು ಅವುಗಳ ಪರಿವಾರ ಸಹಿತವಾಗಿ ನೀನು ನಡೆಸುವೆಯಾ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 38:32
4 ತಿಳಿವುಗಳ ಹೋಲಿಕೆ  

“ಯೋಬನೇ, ಪ್ಲೆಯಡ್ಸ್ ಎಂಬ ನಕ್ಷತ್ರಗುಂಪನ್ನು ನೀನು ಕಟ್ಟಬಲ್ಲೆಯಾ? ನೀನು ಒರೈಯನ್ ನಕ್ಷತ್ರ ಗುಂಪಿನ ನಡುಪಟ್ಟಿಯನ್ನು ಬಿಚ್ಚಬಲ್ಲೆಯಾ?


“ಆತನೇ ಬೇರ್, ಒರೈಯನ್ ಮತ್ತು ಪ್ಲೈಯಡ್ಸ್ ಎಂಬ ನಕ್ಷತ್ರಸಮೂಹಗಳನ್ನು ಸೃಷ್ಟಿಮಾಡಿದನು. ದಕ್ಷಿಣ ಆಕಾಶದಲ್ಲಿ ನಕ್ಷತ್ರವ್ಯೂಹಗಳನ್ನು ಸೃಷ್ಟಿಸಿದವನು ಆತನೇ.


ಯೆಹೂದದ ರಾಜರುಗಳು ಯಾಜಕರಾಗಿ ಸೇವೆಮಾಡಲು ಕೆಲವು ಸಾಮಾನ್ಯ ಜನರನ್ನು ಆರಿಸಿಕೊಂಡರು. ಈ ಜನರು ಆರೋನನ ಕುಲದಿಂದ ಬಂದವರಲ್ಲ! ಈ ಸುಳ್ಳುಯಾಜಕರು ಯೆಹೂದದ ನಗರಗಳಲ್ಲಿನ ಮತ್ತು ಜೆರುಸಲೇಮಿನ ಊರುಗಳಲ್ಲಿನ ಉನ್ನತಸ್ಥಳಗಳಲ್ಲಿ ಧೂಪವನ್ನು ಸುಡುತ್ತಿದ್ದರು. ಅವರು ಬಾಳನನ್ನು, ಸೂರ್ಯನನ್ನು, ಚಂದ್ರನನ್ನು, ಆಕಾಶ ಸೈನ್ಯವಾದ ನಕ್ಷತ್ರಗಳನ್ನು ಗೌರವಿಸಲು ಧೂಪವನ್ನು ಸುಡುತ್ತಿದ್ದರು. ಆದರೆ ಯೋಷೀಯನು ಆ ಸುಳ್ಳು ಯಾಜಕರನ್ನು ನಿಲ್ಲಿಸಿದನು.


ಯೋಬನೇ, ಆಕಾಶವನ್ನು ಆಳುವ ನಿಯಮಗಳು ನಿನಗೆ ಗೊತ್ತಿವೆಯೋ? ಅವುಗಳ ಆಳ್ವಿಕೆಯನ್ನು ನೀನು ಭೂಮಿಯ ಮೇಲೆ ಆರಂಭಿಸಬಲ್ಲೆಯಾ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು